ಕಾಟಿಕ(ಖಾಟಿಕ) ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ : ಪ್ರತಿಭಟನೆ

ಬೆಳಗಾವಿ: ಅತಿ ಹಿಂದುಳಿದ ಕಾಟಿಕ(ಖಾಟಿಕ) ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅಖಿಲ ಕನರ್ಾಟಕ ಹಿಂದೂ ಕಾಟಿಕ ಸಮಾಜ ಸೇವಾ ಸಂಘದ ಸದಸ್ಯರು ಸುವರ್ಣ ವಿಧಾನ ಸೌಧ ಪಕ್ಕದ ಸುವರ್ಣ ಗಾರ್ಡನ್ ಹಿಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡ ತಂದರು.

ಈಗಾಗಲೇ ದೇಶದ 13 ರಾಜ್ಯಗಳಲ್ಲಿ ಕಾಟಿಕ ಸಮುದಾಯ ಎಸ್ಸಿ ಮೀಸಲಾತಿ ಹೊಂದಿದೆ. ಆದರೆ ಕನರ್ಾಟಕ ರಾಜ್ಯದಲ್ಲಿ ಮಾತ್ರ ಹಿಂದುಳಿದ ಪ್ರವರ್ಗ-1ಕ್ಕೆ ಸೇರಿದ್ದು, ಹೀಗಾಗಿ ಅನೇಕ ಸವಲತ್ತುಗಳಿಂದ ಸರಕಾರದ ವಂಚಿತಗೊಂಡಿದೆ ಎಂದು ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೋರಾಟ ಬೆಂಬಲಿಸಿ ಮಾತನಾಡಿ, ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿರುವ ಕಾಟಿಕ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗುವುದರ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲರ ಸಮಸ್ಯೆ ಆಲಿಸುತ್ತಾರೆ. ಈ ನಿಟ್ಟಿನಲ್ಲಿ ಕಾಟಿಕ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಲಾಗುವುದು ಎಂದರು.

ಕುಡಚಿ ಶಾಸಕ ಪಿ. ರಾಜೀವ ಮಾತನಾಡಿ, ಈಗಾಗಲೇ ಬೇರೆ ರಾಜ್ಯಗಳಲ್ಲಿ ಮೀಸಲಾತಿ ಹೊಂದಿರುವ ಸಮುದಾಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಾಟಿಕ ಸಮುದಾಯದ ಬೆನ್ನಿಗೆ ನಿಂತು ನಾನು ಹೋರಾಟ ಮಾಡುತ್ತೇನೆ. ಇಲ್ಲಿಂದ ದೆಹಲಿವರೆಗೂ ಹೋರಾಟ ನಡೆಸಿ ಸೂಕ್ತ ಸ್ಥಾನಮಾನಕ್ಕಾಗಿ ಶ್ರಮಿಸುತ್ತೇನೆ. ಈ ಸಮುದಾಯದ ಮಗಳಗಾಗಿ ತವರಿನ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಸಂವಿಧಾನ ತಿದ್ದುಪಡಿ ಮಾಡಿದಾಗ ಎಸ್ಸಿಗೆ ಸೇರ್ಪಡೆಯಾಗಲು ಸಾಧ್ಯವಿದೆ. ದೆಹಲಿಯಲ್ಲಿ ಹೋರಾಟ ಮಾಡಿ ಮೀಸಲಾತಿ ಪಡೆಯಬೇಕು ಎಂದು ಸಲಹೆ ನೀಡಿದರು.

ರಾಜ್ಯ ಅಧ್ಯಕ್ಷ ಅಜೀತ ಪವಾರ ಮಾತನಾಡಿ, ಸಮುದಾಯವನ್ನು ಪರಿಶಿಷ್ಟ ಜಾತಿ(ಎಸ್ಸಿ)ಗೆ ಸೇರಿಸಬೇಕೆಂಬ ಬೇಡಿಕೆ ಈಡೇರಿಕೆಗಾಗಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಜಗದೀಶ ಶೆಟ್ಟರ ಹಾಗೂ ಇನ್ನುಳಿದ ಅನೇಕ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ನಮ್ಮ ಹಿರಿಯರ ತಪ್ಪಿನಿಂದ ಜಾತಿ ದಾಖಲೆಯಲ್ಲಿ ಕಾಟಿಕ, ಖಾಟಿಕ್ ಆಗುವ ಬದಲಾಗಿ ಹಿಂದೂ ಮರಾಠಾ, ಹಿಂದೂ ಕ್ಷತ್ರೀಯ ಹಾಗೂ ಇನ್ನುಳಿದ ಪದಗಳನ್ನು ತಪ್ಪಾಗಿ ನಮೂದಿಸಲಾಗಿದೆ. ತಪ್ಪಾಗಿ ಜಾತಿ ನಮೂದಾಗಿರುವ ಸಮಾಜ ಬಾಂಧವರಿಗೆ ನಮ್ಮ ಸಂಘದ ಪತ್ರದ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರ ತಿದ್ದುಪಡಿ ಮಾಡಲು ಮಾನ್ಯತೆ ನೀಡುವಂತೆ ತಹಶೀಲ್ದಾರ, ಡಿಡಿಪಿಐ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ಬೇರೆ ಬೇರೆ ನಿಗಮಗಳು ಹಾಗೂ ಇಲಾಖೆಗಳಿಂದ ಬಿಡುಗಡೆಯಾಗುವ ಸರಕಾರಿ ಯೋಜನೆಗಳ ಲಾಭ ನಮ್ಮ ಸಮುದಾಯಕ್ಕೆ ಸಿಗುತ್ತಿಲ್ಲ. ಕುರಿ ಮಾಂಸ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯ ವಸ್ತುಗಳ ಮಾರಾಟ ಮಾಡುವ ಉದ್ಯೋಗ ತಲೆತಲಾಂತರಗಳಿಂದ ನಮ್ಮ ಸಮಾಜ ಮಾಡುತ್ತ ಬಂದಿದೆ. ಆದರೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ. ಮೂಲಕ ಮಾಂಸದ ಮಳಿಗೆ ಆರಂಭಿಸಲು ಎಸ್ಸಿ-ಎಸ್ಟಿ ಜನಾಂಗದವರಿಂದ ಅಜರ್ಿ ಆಹ್ವಾನಿಸಿದ್ದರಿಂದ ಮೂಲ ಉದ್ಯೋಗಿಗಳು ಇದರಿಂದ ವಂಚಿತಗೊಂಡಿದ್ದಾರೆ ಎಂದು 

ದೂರಿದರು.

ಜೆಡಿಎಸ್ ರಾಜ್ಯ ಕಾರ್ಯದಶರ್ಿ ಸುನಿತಾ ಹೊನಕಾಂಬಳೆ, ಮುಖಂಡರಾದ ಪ್ರಕಾಶ ಭೋಪಳೆ, ದೀಪಕ ಇಂಗವಲೆ, ಅನಿಲ ಘೋಡಕೆ, ಮಹಾದೇವ ಶಾರಬಿದ್ರೆ, ದೀಪಕ ಗಾಯಕವಾಡ, ಉದಯ ಘೋಡಕೆ, ದೀಪಕ ಕಾಂಬಳೆ, ದೀಪಕ ಶೇಟಕೆ ಇತರರು 

ಇದ್ದರು.