ಕಂಡಕ್ಟರ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರತಿಭಟನೆ

 ಹುನಗುಂದ06: ಕಳೆದ ಫೆ.3 ರಂದು ಕರ್ತವ್ಯ ನಿರತ ಕಂಡಕ್ಟರ್ ಮುರಗೇಶ ಹುಲ್ಲಳ್ಳಿಯವರನ್ನು ಮರೋಳ ಗ್ರಾಮದ ಸಮೀಪದಲ್ಲಿ ಬಸ್ ನಿಲ್ಲಿಸಿ ಮಾರಣಾಂತಿಕ ಹಲ್ಲೆ ನಡೆಸಿದ 12 ಜನ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಬುಧವಾರ ಎ.ಆಯ್.ಟಿ.ಸಿ ಸಂಘಟನೆಯ ನೇತೃತ್ವದಲ್ಲಿ ಕೆಎಸ್ಆರ್ ಟಿ  ಸಿಬ್ಬಂದಿ ತಹಶೀಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ ಆನಂದ ಕೋಲಾರ ಅವರಿಗೆ ಮನವಿ ಸಲ್ಲಿಸಿದರು.                               

         ಈ ವೇಳೆ ಪ್ರತಿಭಟನಾ ನಿರತ ಕೆಎಸ್ಆರ್ಟಿಸಿ ಜಿಲ್ಲಾಧ್ಯಕ್ಷ ಬಿ.ವ್ಹಿ.ಕುಲಕರ್ಣಿ  ಮಾತನಾಡಿ ಹುನಗುಂದ-ಇಂದವಾರ ಮಾರ್ಗವಾಗಿ ಕರ್ತವ್ಯದ ಮೇಲೆ ಹೊರಟ ಒಬ್ಬ ಅಮಾಯಕ ಬಸ್ ನಿರ್ವಾ ಹಕನನ್ನು ಏಕಾಏಕಿ ಬಸ್ ನಿಲ್ಲಿಸಿ ಹುನಗುಂದ ತಾಲೂಕಿನ ಪ್ರಭಾವಿ ರಾಜಕಾರಣಿ ಅಶೋಕ ಬಂಡರಗಲ್ಲ ಮತ್ತು ಆತನ ಬೆಂಬಲಿಗರು ಸೇರಿಕೊಂಡು ಬಸ್ನ್ನು ಏರಿ ನಿರ್ವಾಹಕ ಮುರಗೇಶ ಹುಲ್ಲಳ್ಳಿಯವರಿಗೆ ಕಾರದ ಪುಡಿಯನ್ನು ಎರಚಿ ಅನೇಕ ಮಾರಕಾಸ್ತ್ರಗಳಿಂದ ದೈಹಿಕವಾಗಿ ಮನ ಬಂದಂತೆ ಹಲ್ಲೆ ಮಾಡಿದ್ದರಿಂದ ಸಧ್ಯ ನಿರ್ವಾಹಕ ಮುರಗೇಶ ಆಸ್ಪತ್ರೆಯಲ್ಲಿ ಜೀವನ್ಮರಣ ಜೊತೆ ಹೋರಾಟ ನಡೆಸುತ್ತಿದ್ದಾರೆ.ಸಾರ್ವಜನಿಕ ವಲಯದಲ್ಲಿ ನಿತ್ಯ ಸೇವೆಗೈಯುತ್ತಿರುವ ಚಾಲಕ ಮತ್ತು ನಿರ್ವಾಹಕರಿಗೆ ಜೀವ ಭದ್ರತೆಯಿಲ್ಲದಂತಾಗಿದೆ.ಅವರನ್ನು ಯಾರು ಬೇಕಾದರೂ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿದರೂ ಸರ್ಕಾರದಿಂದ ಯಾವುದೇ ತರಹದ ಭದ್ರತೆ ಇಲ್ಲದಿರುವುದರಿಂದ ಉಳಿದ ಕೆಎಸ್ಆರ್ಟಿಸಿ ಸಿಬ್ಬಂದಿಯವರು ನಿರ್ಭಯವಾಗಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ. ಹಲ್ಲೆ ಮಾಡಿದ ಅಶೋಕ ಬಂಡರಗಲ್ಲ ಮತ್ತು ಅವರ ಸಹಚರರು ಕೆಲವು ರಾಜಕೀಯ ಪಟ್ಟಭದ್ರ ಹಿತಾಶಕ್ತಿಗಳ ಕೈವಾಡದಿಂದ ರಾಜರೋಷವಾಗಿ ಜಿಲ್ಲೆಯಾದ್ಯಂತ ತಿರುಗಾಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ತಗೆದುಕೊಳ್ಳಬೇಕು ಮತ್ತು ಈ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಅಶೋಕ ಬಂಡರಗಲ್ಲ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದರು.   ಸಾರಿಗೆ ನಿಯಂತ್ರಕ ಎಸ್.ಎಂ.ಆನೇಹೊಸೂರ ಮಾತನಾಡಿ ಹಗಲು ರಾತ್ರಿ ಎನ್ನದೇ ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿವರ್ಾಹಕರ ಮೇಲೆ ಈ ರೀತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯ.ಈ ಪ್ರಕರಣದಲ್ಲಿ ಭಾಗಿಯಾದ 12 ಜನರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತಗೆದುಕೊಳ್ಳಬೇಕು ಇಲ್ಲದಿದ್ದರೇ ರಾಜ್ಯಾಧ್ಯಂತ ಸಾರಿಗೆ ನೌಕರರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ 12 ಜನ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಪೊಲೀಸ್ ಇಲಾಖೆಯ ಪಿಎಸ್ಐ ಪುಂಡಲೀಕ ಪಟಾತರ ಅವರಿಗೂ ಮನವಿ ಸಲ್ಲಿಸಲಾಯಿತು.   ಸಾರಿಗೆ ಸಂಸ್ಥೆಯ ನೌಕರರಾದ ಎಸ್.ಎಸ್.ಗೌಡರ, ಪಿ.ಬಿ.ಬಿರಾದಾರ, ಎಸ್.ಎಚ್.ಜಗ್ಗಲಿ, ಎಂ.ಎಸ್.ಕಡಿವಾಲ, ಎ.ಎಚ್.ಮಟ್ಟೂರ, ಆರ್.ಎಚ್.ಬಹದ್ದೂರ, ಎಚ್.ಎನ್.ಹಂದೇಲಿ, ಎಸ್.ಬಿ.ನಾಗನವರ, ಎಸ್.ಎಸ್.ಜಿಗಳೂರ ಸೇರಿದಂತೆ ಅನೇಕ ಚಾಲಕ ಮತ್ತು ನಿರ್ವಾ ಹಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು