ಲೋಕದರ್ಶನ ವರದಿ
ಬೆಳಗಾವಿ : ಬಸವನಕೊಳ್ಳ ನೀರು ಶುದ್ಧೀಕರಣ ಕಾಮಗಾರಿಯಲ್ಲಿ ಅವ್ಯವಹಾರ ಆಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಂಜುಗಡ್ಡೆಯ ಮೇಲೆ ಕುಳಿತು ಮಾಜಿ ನಗರಸೇವಕ ದಿನೇಶ್ ನಾಶಿಪುಡಿ ವಿನೂತವಾಗಿ ಪ್ರತಿಭಟನೆ ನಡೆಸಿರುವ ಘಟನೆ
ನಡೆದಿದೆ.
ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಂಗಳವಾರ ಈ ರೀತಿಯ ವಿಶಿಷ್ಟ ಪ್ರತಿಭಟನೆಗೆ ಮಾಜಿ ನಗರಸೇವಕ ದಿನೇಶ ನಾಶಿಪುಡಿ ಮಾಡುವ ಮೂಲಕ ಬಸವನಕೊಳ್ಳ ನೀರು ಶುದ್ಧೀಕರಣ ಕಾಮಗಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅಲ್ಲದೇ ಕಳಪೆ ಕಾಮಗಾರಿ ನಡೆದಿದ್ದು. ಈ ಸಂಬಂಧ ಪಾಲಿಕೆ ಆಯುಕ್ತರ ನೇತೃತ್ವದ ಸಮಿತಿಯೂ ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವರದಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು
ದೂರಿದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೆರಿಗೆ ಆಧಾರದಲ್ಲಿ ಸಂಗ್ರವಾಗಿದ್ದ ಜನರ ದುಡ್ಡನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಪಾಲಿಕೆಯಿಂದ ಲೋಕಾಯುಕ್ತರಿಗೆ ದೂರು ಸಲ್ಲಿಸಬೇಕು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಮಂಜುಗಡ್ಡೆಯ ಮೇಲೆ ಕುಳಿತುಕೊಂಡೆ ದಿನೇಶ್ ನಾಶಿಪುಡಿ ನ್ಯಾಯಕ್ಕೆ ಆಗ್ರಹಿಸುವ ಮೂಲಕ ಎಲ್ಲರ ಗಮನ
ಸೆಳೆದರು.
ಅದೆ ರೀತಿ ವಂಟಮೂರಿ ಕಾಲನಿ ಹಾಗೂ ರುಕ್ಮಿಣಿ ನಗರದಲ್ಲಿ ಆಶ್ರಯ ಹಾಗೂ ಅಂಬೇಡ್ಕರ್ ಯೋಜನೆಯಡಿ ನಿಮರ್ಿಸಿರುವ ಕಚ್ಚಾ ಮನೆಗಳನ್ನು ಮರು ನಿಮರ್ಾಣ ಮಾಡಲು ಪಾಲಿಕೆಯಿಂದ ನಿರಪೇಕ್ಷಣಾ ಪ್ರಮಾಣಪತ್ರ ನೀಡಿದರೆ ಸ್ಲಮ್ ಬೋರ್ಡನವರು ಕಚ್ಚಾ ಮನೆಗಳನ್ನು ಪಕ್ಕಾ ಮನೆಗಳನ್ನಾಗಿ ನಿಮರ್ಾಣ ಮಾಡಿಕೊಡಲಿದ್ದಾರೆ. ಆದ್ದರಿಂದ ಈ ಎರಡೂ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಿಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಪಾಲಿಕೆ ಆಯುಕ್ತರಿಗೆ ಮನವಿ
ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಇಂದಿನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.