ಬಿಸಿಯೂಟ ನೌಕರರಿಗೆ ಪಿಂಚಣಿಗೆ ಆಗ್ರಹಿಸಿ 21ರಂದು ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ : ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಬಿಸಿಯೂಟದ ಮಾಡುತ್ತಿರುವ ನೌಕರರಿಗೆ ರೂ.2600 ರಿಂದ 2700 ಗಳ ಮಾತ್ರ ತಿಂಗಳಿಗೆ ಸಂಬಳ ನೀಡುತ್ತಿದ್ದು  ಬೇರ್ಯಾವುದೆ ಕನಿಷ್ಠ ವೇತನ, ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ಕೊಡದ ಸಕರ್ಾರ ವಿರುದ್ಧ ಇದೇ 21ರಂದು ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಸೊನಾರ ಅವರು ಹೇಳಿದರು. 

ಇಲ್ಲಿಯ ಪತ್ರಿಕಾ ಭವನದಲ್ಲಿ ಮಂಗಳವಾರದಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 

ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಈ ಯೋಜನೆಯಡಿ ದುಡಿಯುತ್ತಿದ್ದಾರೆ. ಭವಿಷ್ಯ ನಿಧಿಗಾಗಿ ಈ ಹಿಂದೆ ಸಂಘಟನೆಯ ಮುಖಂಡರೊಂದಿಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದಶರ್ಿಗಳು ಮತ್ತು ಎಲ್ಐಸಿ ಪಿಂಚಣಿ ವಿಭಾಗದ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ನೌಕರರ ವೇತನದಲ್ಲಿ ನೂರು ರೂಪಾಯಿ ಮತ್ತು ಸಕರ್ಾರ ಇದಕ್ಕೆ ನೂರು ರೂಪಾಯಿ ಕಡಿತ ಮಾಡಿ ಆ ಹಣವನ್ನು ಎಲ್ಐಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು ಎಂದು ಅವರು ವಿವರಿಸಿದರು.

ಈ ಪಿಂಚಣಿ ಯೋಜನೆಯಡಿ ಒಳ ಪಡಲು ನೌಕರರಿಗೆ ಬೇಕಾದ ವಯಸ್ಸಿನ ಆಧಾರ ಸಂಗ್ರಹಣೆ ಈಗಾಗಲೇ ಎಲ್ಲಾ ಜಿಲ್ಲೆಗಳಿಂದ  ಸಂಗ್ರಸಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ ಅವರನ್ನು ಸಂಘಟನೆಯವರು ಭೇಟಿಮಾಡಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಲಾಗಿತ್ತು ಎಂದ ಅವರು ಈ ಯೋಜನೆಯು ಅಂತಿಮ ಹಂತದಲ್ಲಿ ಇರುವಾಗ ಶಿಕ್ಷಣ ಇಲಾಖೆ ಕಳೆದ ತಿಂಗಳು 19 ರಂದು ಶಾಲಾ ಬಿಸಿಯೂಟ ನೌಕರರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ ಒಳಪಡಿಸುವ ಆದೇಶ ಹೊರಡಿಸಿದ್ದು ಈ ಆದೇಶವು ಬಿಸಿಯೂಟ ನೌಕರರಿಗೆ ನಕಾರಾತ್ಮಕವಾಗಿದೆ ಎಂದು ಹೇಳಿದರು. 

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ 40 ವರ್ಷಗಳ ವಯಸ್ಸಿನವರು ಮಾತ್ರ ಒಳಪಡುವುದರಿಂದ ಬಿಸಿಯೂಟ ನೌಕರರು 40 ವರ್ಷಗಳಿಂದ ಹೆಚ್ಚಿನವರು ಇರುವುದರಿಂದ ಅವರಿಗೆ ಅನಾನೂಲವಾಗುವುದರಿಂದ ಈ ಆದೇಶ ರದ್ದು ಪಡಿಸಿ ಈ ಹಿಂದೆ ರೂಪಿಸಿದ್ದ ವಿಶೇಷ ಪಿಂಚಣಿ ಸೌಲಭ್ಯ ಒದಗಿಸಲು ಇದೇ 21 ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುವುದು. ಮತ್ತು ಡಿಸೆಂಬರ್ ಮೊದಲ ವಾರ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವನಗೌಡ, ಜಿಲ್ಲಾ ಖಜಾಂಚಿ ಅನ್ನಪೂರ್ಣ ಲಿಂಗದಾಳ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಖಾಸಿಂ ಸದರ್ಾರ ಉಪಸ್ಥಿತರಿದ್ದರು.