ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ
ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆProtest in Ranebenur, condemning anti-worker policies
Lokadrshan Daily
1/21/25, 7:36 PM ಪ್ರಕಟಿಸಲಾಗಿದೆ
ಲೋಕದರ್ಶನವರದಿ
ರಾಣಿಬೆನ್ನೂರ:8 ಭಾರತ್ ಬಂದ್ ಹಿನ್ನಲೆಯಲ್ಲಿ ಬುಧವಾರದಂದು ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೆದಾರ ಜಿ.ಎನ್.ಶೆಟ್ಟರ್ ಅವರಿಗೆ ಮನವಿ ಪತ್ರ ಅಪರ್ಿಸಿದರು.
ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕ ಸಂಘದ ತಾಲೂಕಾಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸಕರ್ಾರವು ದೇಶದಲ್ಲಿ ಅರಾಜುಕತೆ ಉಂಟಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಕೃಷಿ ಕಾಮರ್ಿಕರ ಬಗ್ಗೆ ತಳೆದಿರುವ ಕ್ರಮವು ಖಂಡನಾರ್ಯವಾಗಿದ್ದು, ಇದರಿಂದ ರೈತರಿಗೆ, ಕೃಷಿ ಕಾಮರ್ಿಕರಿಗೆ ಮತ್ತು ಕಾಖರ್ಾನೆ ಕಾಮರ್ಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಇದನ್ನು ಮನಗಂಡು ಸಕರ್ಾರವು ಕಾಮರ್ಿಕರ ಬಗ್ಗೆ ಒಲವು ತೋರಬೇಕೆಂದು ಒತ್ತಾಯಿಸಿದರು.
ಬ್ರಿಟೀಷರು ಕಾಮರ್ಿಕರ ಬಗ್ಗೆ ಅನೇಕ ಉಪಯುಕ್ತವಾದ ಕಾನೂನುಗಳನ್ನು ಜಾರಿಗೆ ತಂದು ಅವರುಗಳ ಏಳ್ಗೆಗಾಗಿ ಶ್ರಮಿಸಿದ್ದರು. ಆದರೆ ಇದೀಗ ಕೇಂದ್ರ ಸಕರ್ಾರವು ಕಾಮರ್ಿಕರ ಮೇಲೆ ಅನೇಕ ವಿಧವಾದ ಕಾನೂನುಗಳನ್ನು ಜಾರಿಗೊಳಿಸಿ ಸಂಕಷ್ಟಕ್ಕೀಡು ಮಾಡಿದೆ ಎಂದರು. ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಮಾತನಾಡಿ, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಕರ್ಾರವು ನೋಟ್ ಬ್ಯಾನ್, ಜಿಎಸ್ಟಿ, ಪೌರತ್ವ ಕಾಯ್ದೆ ಸೇರಿದಂತೆ ಅನೇಕ ಕಾನೂನುಗಳನ್ನು ಜಾರಿಗೊಳಿಸಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಸಕರ್ಾರದ ಅನೇಕ ಕಾಯ್ದೆಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ರಾಷ್ಟ್ರಪತಿಗಳು ಈ ಸಕರ್ಾರವನ್ನು ವಜಾಗೊಳಿಸಬೇಕು ಹಾಗೂ ಕಾಮರ್ಿಕರ ಬಗ್ಗೆ ಅವರ ಹಿತರಕ್ಷಣೆ ಕಾಪಾಡಲು ವಿಶೇಷ ಕಾಯ್ದೆ ಮತ್ತು ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸ್ವಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಶೇರುಖಾನ್ ಕಾಬೂಲಿ, ಎಸ್.ಡಿ.ಹಿರೇಮಠ, ಹನುಮಂತಪ್ಪ ಕಬ್ಬಾರ, ಇಫರ್ಾನ್ ದಿಡಗೂರು, ಬಸವರಾಜ್ ಬಂಗಿ. ಸುಶೀಲಮ್ಮ ಮಕರಿ, ಸುರೇಶಪ್ಪ ಗರಡಿಮನಿ, ಚಂದ್ರಣ್ಣ ಬೇಡರ, ಕೊಟ್ರೇಶಪ್ಪ ಎಮ್ಮಿ, ಹನುಮಂತ ಬಣಕಾರ, ಸಹೈದ್ ಸಫೀಕ್ ರೆಹಮಾನ್, ಡಾ| ನಾಗರಾಜ್ ಚಳಗೇರಿ, ಸುಲ್ತಾನ್ ದೊಡ್ಮನಿ, ಎನ್.ಎಂ.ಕುಸಗೂರು ಮತ್ತಿತರರು ಇದ್ದರು