ರಾಣೆಬೆನ್ನೂರಲ್ಲಿ ಪ್ರತಿಭಟನೆ: ಮಾದಿಗ ಜನಾಂಗಕ್ಕೆ ಅನ್ಯಾಯ ಮೀಸಲಾತಿಗೆ ಆಗ್ರಹ

ರಾಣೇಬೆನ್ನೂರ 01 : ರಾಜ್ಯದಲ್ಲಿರುವ ಎಲ್ಲ ಮಾದಿಗ ಜನಾಂಗಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಾ ಮಾದಿಗ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ  ನಡೆಸಿ, ತಹಸೀಲ್ದಾರ ಆರ್‌. ಎಚ್‌. ಭಾಗವಾನ  ಆವರಿಗೆ ಮನವಿ ಪತ್ರ ಅರ​‍್ಿಸಿ   ಆಗ್ರಹಿಸಿದರು.ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಲ್ಲಿ ಅತೀ ಹಿಂದುಳಿದ, ಅಸ್ಪಷ್ಟ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಸಂವಿಧಾನಬದ್ಧ ಅಧಿಕಾರ ಇದೆ ಎಂದು 1-08-2024 ರಂದು ಸುಪ್ರೀಂ ಕೋರ್ಟ ಐತಿಹಾಸಿಕ ತೀಪು ನೀಡಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು..  ಅಸ್ಪಷ್ಯ ಜನಾಂಗವನ್ನು ಹಿಂದೂ ಧರ್ಮದ ಶ್ರೇಣೀಕೃತ ಚಾತುರ್ವಣ್ರ ವ್ಯವಸ್ಥೆಯಲ್ಲಿ ಪಂಚಮರು, ಸ್ವಪಚರು, ಅಂತ್ಯಜರು ಅಂತಾ ಐದನೆಯ ವರ್ಣವನ್ನಾಗಿ ನಂತರದಲ್ಲಿ ವರ್ಗಿಕರಿಸಿ ಈ ಅಸ್ಪಷ್ಟ ಜನಾಂಗವನ್ನು ಮಾತ್ರ ಪಂಚಮರು ಎಂದು ಗುರುತಿಸಿ, ಅಸ್ಪೃಷ್ಯರಲ್ಲಿಯೇ ಅತೀ ಅಸ್ಪೃಷ್ಯರಾಗಿ ವಿಂಗಡಿಸಿ ಪ್ರಾಣಿಗಳಿಗಿಂತ ಕಡೆಯಾಗಿ ಈ ಸಮಾಜವನ್ನು ಶತಶಮಾನಗಳಿಂದ ಇತರೆ ಸಮಾಜಗಳು ಕಿತ್ತು ತಿಂದಿವೆ.   

2011 ರ ಜಾತಿಗಣತೆ ಲಭ್ಯವಿದ್ದು ಲಭ್ಯವಿದ್ದು, ಸುಪ್ರೀಂ ವ್ಯಾಪಕ ದತ್ತಾಂಶಗಳನ್ನು ಹೊಂದಿರುತ್ತದೆ. ಸದಾಶಿವ ಆದೇಶದನ್ವಯ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇರುತ್ತದೆ. ಇಷ್ಟೆಲ್ಲಾ ಮಾಹಿತಿಗಳು ಲಭ್ಯವಿದ್ದರ ಸಹಿತ ವಿಳಂಬ ನೀತಿ ಅನುಸರಿಸು ತ್ತಿರುವುದು ನಮಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.ಆಯೋಗದ ವರದಿ:ಕಳೆದ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದ್ದೀರಿ. ಮಾದಿಗ ಜನಾಂಗವು ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅತೀ ತುಳಿತಕ್ಕೊಳಗಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಯಾವುದೇ ಪುನರ್ ಪರೀಶೀಲನೆ ಅಥವಾ ಹೊಸದಾಗಿ ದತಾ ಕಲೆಹಾಕಲು ಸಮೀಕ್ಷೆ ಆರಂಭಿಸಿದರೆ ಅದು ಹಲವು ವರ್ಷಗಳಾಗುತ್ತವೆ. ಈ ವಿಳಂಬ ನೀತಿಯು ನಮ್ಮ ಬೇಡಿಕೆ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಅನ್ಯಥಾ ಕಾಲಹರಣ ಮಾಡದೇ, ಕೂಡಲೇ ಸುಪ್ರೀಂ ಕೋರ್ಟ್‌ ಆದೇಶದನ್ವಯ ಮೀಸಲಾತಿ ಜಾರಿಗೊಳಿಸಬೇಕು. ಸಮಾನತೆಗಾಗಿ ಹೋರಾಡುತ್ತಿರುವ  ನಮಗೆ ಶೀಘ್ರದಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಶತ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟಿರುವ ಮಾದಿಗ ಹಾಗೂ ಉಳಿದ ಪರಿಶಿಷ್ಟ ಜಾತಿಗಳಲ್ಲಿ ಅತೀ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುತ್ತೀರೆಂದು ನಂಬಿರುತ್ತೇವೆ.  

ಸರಕಾರದಿಂದ ನಮಗೆ ನ್ಯಾಯ ಸಿಗದಿದ್ದರೆ, ಮುಂದಿನ ಉಗ್ರ ಹೋರಾಟಕ್ಕೆ ತಾವು ದಾರಿ ಮಾಡಿ ಕೊಟ್ಟಂತಾಗುತ್ತದೆ.ರಾಜಕೀಯ ಕಾರಣಗಳಿಂದಾಗಲೀ,ಬಾಹ್ಯ ಒತ್ತಡದ ಕಾರಣಗಳಿಂದಾಗಿ ಯಾವುದೇ ಕಾರಣ ಹೇಳದೇ ಸುಪ್ರೀಂಕೋರ್ಟ್‌ ಆದೇಶದನ್ವಯ  ಒಳ ಮೀಸಲಾತಿ ಜಾರಿಗೊಳಿಸುತ್ತೀರೆಂದು ದೃಢ ವಿಶ್ವಾಸ ಹೊಂದಿದ್ದೇವೆ. ಎಂದು  ಪ್ರತಿಭಟನಾಕಾರರು ತಿಳಿಸಿದರು.  ಪ್ರತಿಭಟನೆಯಲ್ಲಿ ಬಿ.ಡಿ. ಸಾವಕ್ಕಳವರ, ನೀಲಕಂಠಪ್ಪ ಕುಸಗೂರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ,  ಮೈಲಪ್ಪ ದಾಸಪ್ಪನವರ, ಗುತ್ತೆಪ್ಪ ಹಳೇಮನಿ, ಮಾಲತೇಶ ಬ್ಯಾಡಗಿ,  ಹೊನ್ನಪ್ಪ ಹೊನ್ನಾಪುರ, ವಿಜಯ ಮಾಳಗಿ, ನವೀನ ನಿಕೇತ,  ಮಲ್ಲೇಶಪ್ಪ ಮದ್ಲೇರ, ಮೈಲಪ್ಪ ಗೋಣಿಬಸಮ್ಮನವರ, ಮಂಜುಳಾ ಮಾದರ, ಪಾರವ್ವ ಹರಿಜನ, ಶೇಖವ್ವ ಚಳಗೇರಿ, ಹೊನ್ನಪ್ಪ ಸಿದ್ದಪ್ಪನವರ, ಶೇಖಪ್ಪ ಕಲ್ಲಜ್ಜೇರ, ಕೆ.ಆರ್‌.ಉಮೇಶ, ಶಶಿಧರ ಚಲವಾದಿ, ಬಸವರಾಜ ಸಾವಕ್ಕನವರ    ರಮೇಶ ಐರಣಿ, ರಾಘ ಅಡೂರ, ಪ್ರವೀಣ ಅಸುಂಡಿ, ಮಲ್ಲೇಶ ಕಜ್ಜರಿ, ಧರ್ಮಣ್ಣ ಅಂತರ ಹಳ್ಳಿ, ಮಂಜಣ್ಣ ಗಂಗಾಪುರ, ದುರ್ಗಪ್ಪ ಹಿಲದಹಳ್ಳಿ, ನೀಲಕಂಠಪ್ಪ ಕರೂರ ಮತ್ತಿತರ ಮುಖಂಡರು,