ಅಕ್ರಮ ಡಬ್ಬಾ ಅಂಗಡಿಗಳ ತೆರವು

ಮುದ್ದೇಬಿಹಾಳ 01: ಪಟ್ಟಣದ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗೆ ಅಂಟಿಕೊಂಡು ನಿರ್ಮಿಸಿಕೊಂಡ ಅಕ್ರಮ ಡಬ್ಬಾ ಅಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ನೇತೃತ್ವದಲ್ಲಿ ಭಾನುವಾರ  ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. 

ಪುರಸಭೆ ಕಾರ್ಯಾಲಯಕ್ಕೆ ಹೊಂದಿಕೊಂಡು ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಮುಖ್ಯ ಬಜಾರ, ಆಲಮಟ್ಟಿ ರಸ್ತೆ ಮಾರ್ಗದಲ್ಲಿರುವ, ತಾಳಿಕೋಟಿ ರಸ್ತೆ ಮಾರ್ಗದಲ್ಲಿನ ಪುಟ್ ಬಾತ್ ಮೇಲೆ  ಕೆಲ ಖಾಸಗಿ ವ್ಯಕ್ತಿಗಳು ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿದ್ದರಿಂದ ಬೈಕುಗಳು ರಸ್ತೆ ಮದ್ಯದಲ್ಲಿಯೇ ನಿಲ್ಲಿಸುತ್ತಿರುವುದರಿಂದ ನಿತ್ಯ ಟ್ರಾಫಿಕ್ ಸಮಸ್ಯೆಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಲ್ಲದೇ ಅಪಘಾತಗಳ ಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸ್ಥಳಿಯ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜಯ ತಿಪ್ಪಾರೆಡ್ಡಿ ನೇತೃತ್ವದ ಪೋಲಿಸ್ ಬಂಧೋಬಸ್ತನೊಂದಿಗೆ ಪುರಸಭೆ ಸಿಬ್ಬಂದಿ ಅಧಿಕಾರಿಗಳು ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು.  

ಈ ವೇಳೆ ಕೆಲ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ಮತ್ತು ಆಡಳಿತ ಮಂಡಳಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು.