ನಾಳೆಯಿಂದ ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ

Protest in Belgaum condemning the violence of MVHS workers: Appeal to Tehsildar

ಸಿಂದಗಿ 02:  ರಾಜ್ಯ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮಾರ್ಚ 4 ಮತ್ತು 5. ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಅವರಿಗೆ ಮನವಿ ಸಲ್ಲಿಸಿದರು. 

ಅಧ್ಯಕ್ಷೆ ಬಿಸ್ಮಿಲ್ಲಾ ಎ. ಇನಾಮದಾರ ಮಾತನಾಡಿ ರಾಜ್ಯ ಸರ್ಕಾರವು ಮಾರ್ಚನಲ್ಲಿ ಬಜೆಟ್ ಮಂಡಿಸಲಿದೆ. ಹಲವು ವರ್ಷಗಳಿಂದ ವೇತನ ಹೆಚ್ಚಳಕ್ಕಾಗಿ ಸರ್ಕಾರದ ಗಮನಕ್ಕೆ ತಂದಿದ್ದೆವೆ. ಬಿಸಿಯೂಟ ನೌಕರರ ಪ್ರಮುಖ ಬೇಡಿಕೆಗಳಾದ ಚುನಾವಣಾ ಸಂದರ್ಭದ ಭರವಸೆಯಂತೆ ವೇತನ ಹೆಚ್ಚಳ, ಎಪ್ರೀಲ್ ಹಿ ಮೇ ತಿಂಗಳಿನಲ್ಲಿ ಬರಗಾಲ ಘೋಷಿತ ಜಿಲ್ಲೆಗಳಲ್ಲಿ ಕೆಲಸ ಮಾಡಿದ ವೇತನ ಬಿಡುಗಡೆಗಾಗಿ., ಅಡುಗೆ ಕೇಂದ್ರಗಳ ಪುನಶ್ಚೇತನಕ್ಕಾಗಿ ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು, ತಿಂಗಳಿಗೆ ಸರಿಯಾಗಿ ಗೌರವಧನ, ಸಾದಿಲ್ವಾರು ಹಣ, ಮೊಟ್ಟೆ ಹಣಗಳು ಸೂಕ್ತವಾಗಿ ಬಿಡುಗಡೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ಅಕ್ಷರದಾಸೋಹ ನೌಕರರು ತಮ್ಮ ಕೆಲಸ ಸ್ಥಗಿತ ಗೊಳಿಸಿ ಬೆಂಗಳೂರಿನಲ್ಲಿ ಮಾರ್ಚ 4 ಮತ್ತು 5 ರಂದು ಹೋರಾಟದಲ್ಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮನವಿ ತಿಳಿಸಿದರು.                                

ಸೈನಾಜ ಮುಲ್ಲಾ, ರೇಣುಕಾ ಸುಣಗಾರ, ಜಯಶ್ರೀ ಪಾರತನಳ್ಳಿ ಸುಭದ್ರಾ ತಿಳಗೊಳ, ಸುಮಿತ್ರಾ ತೆಲಗಬಾಳ, ಭೀಮಬಾಯಿ ಸುಲ್ಪಿ, ಶ್ರೀದೇವಿ ಗಾಣಿಗೇರ, ನೀಲಮ್ಮ ಅಡವಿ ಇದ್ದರು.