ಲೋಕದರ್ಶನ ವರದಿ
ಹಾವೇರಿ: ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರ ರೇಜಾರ್ಟ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಿದರೆ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ಸರಕಾರ ರಚಿಸಿಕೊಂಡು ಮುಖ್ಯಮಂತ್ರಿಯಾಗಿರುವ ಬಿ.ಎಸ್ ಯಡಿಯೂರಪ್ಪನವರು ರೈತರ ಸಾಲ ಮನ್ನಾ ಬಗ್ಗೆ ಏನು ಮಾತನಾಡುತ್ತಿಲ್ಲ ನಮ್ಮಿಂದ ಸಾಲ ಕಟ್ಟಲು ಸಾಧ್ಯವಿಲ್ಲ ಬ್ಯಾಂಕನವರು ಸಾಲ ಕಟ್ಟಲು ಒತ್ತಾಯ ಮಾಡುವುದನ್ನು ನಿಲ್ಲಿಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮಹಾ ಮಳೆಯಿಂದ ಪ್ರವಾಹ ಪೀಡಿತಕ್ಕೆ ಸಿಲುಕಿ ಬಾರಿ ಪ್ರಮಾಣದ ಬೆಳೆ ಹಾನಿ ಮನೆ ಮಾರು ಕಳೆದುಕೊಂಡವರ ಬಗ್ಗೆ ಜಿಲ್ಲಾಡಳಿತಗಳು ಚುರಕಾಗಿ ಕೆಲಸ ಮಾಡಬೇಕು ಎಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಸರಕಾರಕ್ಕೆ ಆಗ್ರಹ ಮಾಡಿದರು.
ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಹಾವೇರಿ ನಗರದ ಮುರಘಾರಾಜೇಂದ್ರ ಮಠದಿಂದ ಬೃಹತ್ ರ್ಯಾಲಿಯೊಂದಿಗೆ ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಈ ಬಾರಿ ಮಹಾ ಮಳೆಯಿಂದ ಬೀಕರ ಪ್ರಮಾಣದ ಬೆಳೆ ಹಾನಿ ಪರಿಹಾರ ಹಾಗೂ ಹಾವೇರಿ ಜಿಲ್ಲೆಯ ಜಾನುವಾರುಗಳಿಗೆ ಮೇವು, ಬೆಳೆ ವಿಮೆ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಹೊಸಮನಿ ಸಿದ್ದಪ್ಪ ಸರ್ಕಲ್ನಲ್ಲಿ ರಸ್ತೆ ಬಂದ ಮಾಡಿ ಬಾರಿ ಪ್ರತಿಭಟನೆ ಕೈಗೊಂಡು ಜಿಲ್ಲಾಡಳಿತ ಕಚೇರಿ ಎದುರು ಬಾರಿ ಹೋರಾಟನಡೆಸಿದರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಬರಗಾಲದಿಂದ ರೈತರು ಬೆಳ ನಷ್ಟ ಅನುಭವಿಸಿ ಸಾಲಕ್ಕೆ ಗುರಿಯಾಗಿದ್ದಾರೆ. ಈಬಾರಿ ಆರಂಭದಲ್ಲಿ ಮಳೆ ಸಕಾಲಕ್ಕೆ ಬಾರದೇ ತಡವಾಗಿ ಬಿತ್ತನೆಯಾದ ನಂತರ ವಿಪರೀತ ಮಳೆಯಿಂದ ಬಿತ್ತನೆ ಮಾಡಿದ ಹತ್ತಿ ಮತ್ತು ಮೆಕ್ಕಜೋಳ ಸಂಪೂರ್ಣ ನೆಲ ಕಚ್ಚಿವೆ.
ಜಿಲ್ಲೆಯ ವರದಾ, ತುಂಗಭದ್ರಾ ಕುಮದ್ವತಿ ಧಮರ್ಾ, ನದಿಗಳು ಉಕ್ಕಿ ಹರಿದು ಪ್ರವಾಹದಿಂದ 26 ಹಳ್ಳಿಗಳಲ್ಲಿ ಜನರು ಬದುಕನ್ನೆ ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತ ಪ್ರವಾಹ ಪೀಡಿತ ಪ್ರದೇಶಕ್ಕೆ ಖುದ್ದಾಗಿ ಬೇಟಿ ಮಾಡಿ ಮನೆ , ಬೆಳೆ ನಾಶ, ಜಾನುಮಾರುಗಳಿಗೆ ಮೇವು ಬಗ್ಗೆ ತುತರ್ಾಗಿ ಕ್ರಮ ಕೈಗೊಂಡು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದ ಬಾರಿ ಪ್ರಮಾಣದ ಬೆಳೆ ಸಂಪೂರ್ಣ ನಾಶವಾಗಿ ರೈತರ ಕಂಗಾಲಾಗಿದ್ದಾರೆ.
ಇದು ರಾಜ್ಯದಲ್ಲಿ ಹೊರತಾಗಿಲ್ಲ. ಈ ಹಿಂದೆ ವಿರೋಧ ಪಕ್ಷದಲ್ಲಿ ಕುಳಿತಿದ್ದ ಬಿಎಸ್ವೈ ಅಧಿಕಾರಕ್ಕೆ ಬಂದರೆ ಸಾಲಾ ಮನ್ನಾ ಮಾಡುವುದಾಗಿ ಹೇಳಿದವರು ಈಗ ಅವರೇ ರಾಜ್ಯ ಮುಖ್ಯಮಂತ್ರಿಯಾಗಿ ತಿಂಗಳು ಕಳೆದರೂ ರೈತರ ಸಾಲ ಮನ್ನಾ ಕುರಿತು ಏನು ಮಾತನಾಡುತ್ತಿಲ್ಲ.
ಭೀಕರ ಮಳೆಯಿಂದ ಬಾರಿ ಬೆಳೆ ಹಾನಿ ಬಗ್ಗೆ ತುತರ್ಾಗಿ ಪರಿಹಾರ ನೀಡಿ ಎಂದರೇ ನೋಟ ಪ್ರಿಂಟ ಮಾಡಕೆ ನಮ್ಮ ಹತ್ತಿರ ಯಂತ್ರವಿಲ್ಲ ಎಂದು ಹೇಳುತ್ತಾರೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೇ ನಿಮ್ಮ ಸರಕಾರ ಬುಡಮೇಲ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತರು ನಾಲ್ಕು ವರ್ಷ ಬರದಿಂದ ಬೆಳೆ ಹಾನಿ ಅನುಭವಿಸಿದ್ದರೇ ಈಬಾರಿ ಭೀಕರ ಮಳೆಯಿಂದ ಬೆಳೆ ಬಾರದೇ ಮಾಡಿರುವ ಸಾಲಾ ಕಟ್ಟಲಾಗದೇ ದಿಕ್ಕು ಕಾಣದಂತಾಗಿದ್ದಾರೆ. ಯಾವ ಸರಕಾರಗಳು ಇದುವರೆಗೂ ರೈತರ ನೆರವಿಗೆ ಸರಿಯಾದ ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಬಳ್ಳಾರಿ. ಶಿವಬಸಪ್ಪ ಭೋವಿ, ಮಮ್ಮದಗೌಸ ಪಾಟೀಲ್, ದಿಳ್ಳೆಪ್ಪ ಮಣ್ಣೂರ, ಗಂಗಣ್ಣ ಎಲಿ, ಸುರೇಶ ಚಲವಾದಿ, ಗಂಗಮ್ಮ ಪಾಟೀಲ್, ಶಾರದಾ ಮಣ್ಣೂರ, ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.