ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ 

ಬಳ್ಳಾರಿ: ಕನರ್ಾಟಕ ರಾಜ್ಯ ವಿಕಲಚೇತನರ ವಿವಿದೋದ್ದೇಶ(ಒಖಘ) ಹಾಗೂ ಗ್ರಾಮೀಣ ಪುನರ್ವಸತಿ ಜಿಲ್ಲಾ ಕಾರ್ಯಕರ್ತರ ಒಕ್ಕೂಟ ಒಕ್ಕೂಟದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭುದುವಾರ ಪದಾಧಿಕಾಗಳಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ 8 ತಾಲೂಕಿನ ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ಎಂ.ಆರ್.ಡಬ್ಲ್ಯೂ ಪದಾಧಿಕಾರಿಗಳು ಗಾಂಧೀ ಭವನದಿಂದ ರಾಯಲ್ ಸರ್ಕಲ್ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿವರೆಗೆ ನೂರಾರು ಕಾರ್ಯಕರ್ತರು ಪ್ರತಿಭಟಿಸಿ ನಂತರ ಎಡಿಸಿ ಮಂಜುನಾಥ್ ಅವರಿಗೆ ಮೂಲಕ ರಾಜ್ಯ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. 

ಒಕ್ಕೂಟದ ಕಾರ್ಯದಶರ್ಿ ಬಳ್ಳಾರಿ ರುದ್ರೇಗೌಡರು, ಸಂಚಾಲಕರಾದ ಮಂಜುನಾಥ ಹಡಗಲಿ, ಧನರಾಜ ಹರಪನಹಳ್ಳಿ, ಬಸವರಾಜ ಕೂಡ್ಲಿಗಿ, ಲಕ್ಷ್ಮಣ ಹಗರಿಬೊಮ್ಮನಹಳ್ಳಿ, ಸಾಬೇಶ್ ಸಿರಗುಪ್ಪ, ಸಿ.ರಾಣಿ ಬಳ್ಳಾರಿ ಹಾಗೂ ಸಂಘದ ಪದಾಧಿಕಾರಿಗಳು  ಭಾಗವಹಿಸಿದ್ದರು.