ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ 14: ಜಿಲ್ಲಾ ಹಡಪದ ಸಮಾಜ ಹಾಗೂ ಕ್ಷೌರಿಕರ ಹಿತ ರಕ್ಷಣೆ ವೇದಿಕೆವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಡಿ. 16ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹಡಪದ ಸಮಾಜ ಅಧ್ಯಕ್ಷ ಮಂಜುನಾಥ ಹಂದ್ರಾಳ ತಿಳಿಸಿದ್ದಾರೆ.

ಡಿ. 17ರಂದು ಬೆಂಗಳೂರಿನಲ್ಲಿ ಟೌನ್ಹಾಲ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳಾದ ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ನೀಡಬೇಕು. ಸಮಾಜ ಪ್ರವರ್ಗ2 ಎ ದಲ್ಲಿ ಬರುವದರಿಂದ ಒಳ ಮೀಸಲಾತಿ ನೀಡಬೇಕು, ಹಜಾಮಾ ಪದ ಬಳಸಿದರೆ ಜಾತಿ ನಿಂದನೆ ಪ್ರಕರಣ ದಾಖಲಿಸಲು ಕಾನೂನು ರಚಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಕ್ಷೌರಿಕರ ಕುಟೀರಗಳನ್ನು ನಿಮರ್ಿಸಬೇಕು, ರಾಜಕೀಯವಾಗಿ ವಂಚಿತರಾದ ಹಡಪದ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ಕ್ಷೌರಿಕ ವೃತ್ತಿ ಮಾಡುವವರಿಗೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಲಾಗುವುದು.

ಡಿಸೆಂಬರ್ 16ರಂದು ಜಿಲ್ಲಾ ಹಡಪದ ಸಮಾಜ ಹಾಗೂ ಕ್ಷೌರಿಕರ ಹಿತ ರಕ್ಷಣೆ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಈ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಡಿ. 16ರಂದು ಸಮಾಜ ಬಾಂಧವರು ಕೊಪ್ಪಳ ರೇಲ್ವೆ ನಿಲ್ದಾಣಕ್ಕೆ ಸಂಜೆ 7-30ಕ್ಕೆ ಆಗಮಿಸಬೇಕು ನಂತರ ಹಂಪಿ ಎಕ್ಸ್ಪ್ರೆಸ್ ಮೂಲಕ ಬೆಂಗಳೂರು ತಲುಪಲಾಗುವುದು ಎಂದು ಹಡಪದ ಸಮಾಜದ ಮುಖಂಡರಾದ ನಿಂಗಪ್ಪ ಹಂದ್ರಾಳ, ಶರಣಪ್ಪ ದದೇಗಲ್, ಬಸಪ್ಪ ಹಲಿಗೇರಿ, ಗವಿಸಿದ್ದಪ್ಪ ಕಾಟ್ರಳ್ಳಿ, ಆನಂದ ಮಾದಿನೂರು, ರಮೇಶ ಹಿಟ್ನಾಳ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಡಪದ ಸಮಾಜ ಅಧ್ಯಕ್ಷ ಮಂಜುನಾಥ ಹಂದ್ರಾಳ ಮೊ. 7019855879 ಸಂಪಕರ್ಿಸುವಂತೆ ತಿಳಿಸಿದ್ದಾರೆ.