ಮುಧೋಳ: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಅನುಷ್ಠಾನಗೊಳಿಸದೆ ಸಂಪೂರ್ಣವಾಗಿ ಕೈಬಿಡುವಂತೆ ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟವು ಮಂಗಳವಾರ ಮುಧೋಳ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದ.ಸಂ.ಸ (ಸಾಗರ ಬಣ)ಜಿಲ್ಲಾ ಸಂಘಟನಾ ಸಂಚಾಲಕ ರವಿ ಕಾಂಬಳೆ,ದ.ಸಂ.ಸ (ಭೀಮವಾದ)ಜಿಲ್ಲಾ ಸಂಘಟನಾ ಸಂಚಾಲಕ ಸತೀಶ ಗಾಡಿ,ದ.ಸಂ.ಸ (ಪ್ರೊ,ಬಿ.ಕೃಷ್ಣಪ್ಪ) ಜಿಲ್ಲಾ ಸಂಚಾಲಕ ಗಣೇಶ ಮೇತ್ರಿ,ದ.ಸಂ.ಸ (ಭೀಮವಾದ) ತಾಲೂಕಾ ಸಂಚಾಲಕ ಪ್ರಕಾಶ ಮಾಂಗ,ದ.ಸಂ.ಸ(ಎನ್.ಮೂತರ್ಿ)ತಾಲೂಕಾ ಸಂಘಟನಾ ಸಂಚಾಲಕ ಭೀಮಶಿ ಮೇತ್ರಿ, ದ.ಸಂ.ಸ(ಎನ್.ಮೂತರ್ಿ)ತಾಲೂಕಾ ಸಂಘಟನಾ ಸಂಚಾಲಕ ಸದಾಶಿವ ಮೇತ್ರಿ,ದ.ಸಂ.ಸ(ಪ್ರೊ.ಬಿ. ಕೃಷ್ಣಪ್ಪ)ತಾಲೂಕಾ ಸಂಚಾಲಕ ಹಣಮಂತ ಮೇತ್ರಿ,ನಗರಸಭೆ ಮಾಜಿ ಸದಸ್ಯ ಮಾರುತಿ ಬಂಡಿವಡ್ಡರ ಪ್ರತಿಭಟನೆಯ ನೇತೃತ್ವವಹಿಸಿದ್ದರು.
ಹಕ್ಕೊತ್ತಾಯಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಕೆ ಃ-
ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅಮಾಯಕರು ಸಾವನ್ನಪ್ಪಿದ್ದು ಈ ಕುರಿತು ನ್ಯಾಯಾಂಗ ತನಿಖೆಯಾಗಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು,ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದ ವಿದ್ಯಾಥರ್ಿಗಳ ಮೇಲೆ ದಾಖಲಾಗಿರುವ ಕೇಸುಗಳನ್ನು ಯಾವುದೇ ಷರತ್ತುಗಳಿಲ್ಲದೆ ಹಿಂಪಡೆಯಬೇಕು.
ಇತ್ತೀಚಿಗೆ ಪ್ರವಾಹಕ್ಕೆ ಸಿಲುಕಿ ನೆರೆ ಸಂತ್ರಸ್ತರಾದ ಬಸವ ವಸತಿ ಯೋಜನೆ,ಆಶ್ರಯ ಯೋಜನೆಯ ಫಲಾನುಭವಿ ಗಳಾಗಿರುವ ಬಡಜನರ ಮನೆಗಳು ಬಿದ್ದು ಹೋಗಿದ್ದರೂ ಅಂತಹವರಿಗೆ ಯಾವುದೇ ಪರಿಹಾರ ನೀಡದೆ ತಾರತಮ್ಯ ಎಸಗಲಾಗಿದ್ದು,ಇಂತಹ ಫಲಾನುಭವಿಗಳಿಗೆ ಶೀಘ್ರದಲ್ಲೆ ಸರಕಾರ ನಿಗದಿಪಡಿಸಿದ ಪರಿಹಾರ ಧನ ಮಂಜೂರು ಮಾಡಬೇಕು. ರೈತರ ಸಾಲ ಮನ್ನಾ ಆಗಬೇಕು,ಪರಿಶಿಷ್ಠ ಜಾತಿ,ಪರಿಶಿಷ್ಠ ಪಂಗಡ,ಹಿಂದುಳಿದ ವರ್ಗ,ಅಲ್ಪಸಂಖ್ಯಾತರು ಉದ್ಯೋಗ ಕ್ಕಾಗಿ ಪಡೆದ ಸಾಲವನ್ನು ಮನ್ನಾ ಮಾಡಬೇಕು,ಮಹಿಳೆಯರು ಮೈಕ್ರೋಪೈನಾನ್ಸ್ಗಳ ಮೂಲಕ ಪಡೆದ ಸಾಲ ಮನ್ನಾ ಆಗಬೇಕು.
ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲು ಸೂಕ್ತ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗದಂತೆ ಕೈಗಾರಿಕೆಗಳ ಸ್ಥಾಪನೆ ಯಾಗಬೇಕು,ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ತಹಶೀಲ್ದಾರರಿಗೆ ನೀಡಿರುವ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.
ಸಾವಿರಾರು ವರ್ಷಗಳ ಮಹಾನ್ ಇತಿಹಾಸ ಹೊಂದಿರುವ ಭಾರತ ಸರ್ವ ಧರ್ಮಗಳ ಸಮನ್ವಯ ದೇಶವಾಗಿ ಪ್ರಪಂಚದಲ್ಲಿಯೇ ಮಹತ್ವದ ಸ್ಥಾನ ಪಡೆದಿದೆ, ಭಾರತದ ಪ್ರದೇಶದೊಳಗೆ ಹುಟ್ಟಿದವರು,ಸಂವಿಧಾನ ಅಂಗೀಕರಿಸಿದ ದಿನದಿಂದ ಹಿಡಿದು ಹಿಂದಿನ ಐದು ವರ್ಷಗಳವರೆಗೆ ಭಾರತದಲ್ಲಿ ನೆಲೆಸಿದವರು ಭಾರತದ ಪ್ರಜೆಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 2019 ನೇ ಡಿಸೆಂಬರ 9 ಲೋಕಸಭೆಯಲ್ಲಿ ಹಾಗೂ ಡಿಸೆಂಬರ 11 ರಂದು ರಾಜ್ಯಸಭೆಯಲ್ಲಿ ಅನುಮೋದನೆ ಗೊಂಡು ರಾಷ್ಟ್ರಪತಿಗಳಿಂದ ಅಂಕಿತ ಪಡೆದಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಸಾಮಾನ್ಯ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುವ ಭೀತಿ ಕಾಡುತ್ತಿದೆ.
ಇಂತಹ ಅವೈಜ್ಞಾನಿಕ ಹಾಗೂ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ದವಾಗಿರುವ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ ನಮ್ಮ ಶಾಂತಿ,ಸಹಬಾಳ್ವೆ, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಹಾಗೂ ವಿವಿಧತೆಯಲ್ಲಿ ಏಕತೆ ಎಂಬ ಶ್ರೇಷ್ಠ ಕಲ್ಪನೆ ಮತ್ತು ಬದುಕಿಗೆ ಜಾಗತಿಕ ಮಟ್ಟದಲ್ಲಿ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿರುವ ಬುದ್ದ, ಬಸವ,ಗಾಂಧೀ,ಅಂಬೇಡ್ಕರರ ನಮ್ಮ ಭಾರತ ಅಂತಯರ್ುದ್ದ ಹಾಗೂ ಜನಾಂಗೀಯ ಕಲಹದ ರಣ ಭೂಮಿ ಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನೆರೆಯ ಬಾಂಗ್ಲಾದೇಶ,ಪಾಕಿಸ್ತಾನ,ಅಪಘಾನಿಸ್ತಾನ ದೇಶಗಳಿಂದ 2014 ಕ್ಕಿಂತ ಮುಂಚೆ ಭಾರತದಲ್ಲಿ ಬಂದು ನೆಲೆಸಿದ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದು, ಸಿಖ್,ಪಾಸರ್ಿ, ಕ್ರಿಶ್ಚಿಯನ್, ಬೌದ್ದ ಮುಂತಾದವರಿಗೆ ಭಾರತದ ಪೌರತ್ವ ನೀಡಲಾಗುವುದು ಎಂಬುದು ಸಕರ್ಾರದ ವಾದವಾಗಿದೆ ಇದರಿಂದ ಭಾರತದ ನಾಗರಿಕರಿಗೆ ಯಾವ ತೊಂದರೆಯೂ ಇಲ್ಲ ಎಂಬ ಸಮಜಾಯಷಿಯನ್ನು ಸಹ ನೀಡಲಾಗುತ್ತಿದೆ.
ನಗರದ ಅಂಬೇಡ್ಕರ ಸರ್ಕಲ್ ದಿಂದ ಹೊರಟ ಪ್ರತಿಭಟನೆ ಮೆರವಣಿಗೆ ತಹಶೀಲ್ದಾರರ ಕಚೇರಿಗೆ ತಲುಪಿತು,ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ರು ಬಿಗಿ ಬಂದೋಬಸ್ತ ಕೈಗೊಂಡಿದ್ದರು.