ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ

    ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ   Protest demanding resolution of issues

ಲೋಕದರ್ಶನ ವರದಿ 

ದಾಂಡೇಲಿ  18: ದಾಂಡೇಲಿಯ ಪೇಪರಮಿಲ್ ಮಜ್ದೂರ ಸಂಘದಿಂದ ಅಂಬೇವಾಡಿಯಲ್ಲಿರುವ ತಹಶೀಲದಾರ ಕಛೇರಿಯ ಎದುರು ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ತಹಶೀಲದಾರ ಮೂಲಕ ಮನವಿ ಸಲ್ಲಿಸಿದರು.   

ಮನವಿಯಲ್ಲಿ ರಾಜ್ಯ ಸರ್ಕಾರವು ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆಯನ್ನು ಸ್ವಾಗತಿಸಿರುವ ಸಂಘವು ಸರ್ಕಾರ ಬದಲಾವಣೆಯಾದ ಈ ಸಂದರ್ಭದಲ್ಲಿ ಜಾರಿಗೊಳಿಸಿದ ಅಧಿಸೂಚನೆಯನ್ನು ಜಾರಿಗೊಳಿಸದೆ ಪುನ: ಸ್ಥಗಿತಗೊಳಿಸುವ ವಿಚಾರ ಮಾಡಿರುವದನ್ನು ತೀವ್ರವಾಗಿ ಖಂಡಿಸಿದೆ. ಕನಿಷ್ಟ ವೇತನವನ್ನು ಜಾರಿಗೊಳಿಸಬೇಕು.

ಬಂಡವಾಳಶಾಹಿಗಳ ಹಾಗೂ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ಪುನರ್ ಪರೀಶೀಲಿಸುವ ಸರ್ಕಾರದ ನಿರ್ಧಾರ ಸರಿಯಲ್ಲ, ಇದರಿಂದ  ಲಕ್ಷಾಂತರ ಬಡ ಕಾರ್ಮಿಕರ ಭವಿಷ್ಯಕ್ಕೆ ತೊಂದರೆಯಾಗಲಿದೆ ಇದನ್ನು ಬಿಎಮ್‌.ಎಸ್‌. ಮತ್ತು ರಾಜ್ಯ ಕಾರ್ಮಿಕ ಸಮೂಹಗಳು ತೀವ್ರವಾಗಿ ಖಂಡಿಸುತ್ತದೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ  ಕನಿಷ್ಟ ವೇತನ ಅಧಿಸೂಚನೆಯನ್ನು ಹಿಂಪಡೆಯದೆ ತಕ್ಷಣ ಜಾರಿಗೊಳಿಸಬೇಕು.

ಇ.ಪಿ.ಎಫ್‌-95 ಪಿಂಚಣಿಯನ್ನು 1 ಸಾವಿರದಿಂದ 7,500 ಕ್ಕೆ ಹೆಚ್ಚಿಸಬೇಕು. ಇ.ಎಸ್‌.ಐ ವ್ಯಾಪ್ತಿಯ ಮಿತಿಯನ್ನು 42 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಮತ್ತು ಹೆಚ್ಚು ಕಾರ್ಮಿಕರಿಗೆ ಸೌಲಭ್ಯ ಸಿಗುವಂತಾಗಬೇಕು

ಇ.ಪಿ.ಎಫ್ ವಂತಿಕೆ ಮಿತಿಯನ್ನು 30 ಸಾವಿರಕ್ಕೆ ಹೆಚ್ಚಿಸಬೇಕು. ಉಪಧನವನ್ನು 15 ದಿನದಿಂದ ಒಂದು ತಿಂಗಳಿಗೆ ಹೆಚ್ಚಿಸಬೇಕು ಮತ್ತು ಅದರ ಮಿತಿಯನ್ನು 20 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಬೇಕು. ಬೋನಸ್ ಮಿತಿಯನ್ನು 7 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿಸಬೇಕು. ಇನ್ನು ಹಲವು ಬೇಡಿಕೆಗಳನ್ನು ಮಂಡಿಸಲಾಗಿದೆ.  

ಈ ಸಂದರ್ಭದಲ್ಲಿ ಪೇಪರ ಮಿಲ್ ಮಜ್ದೂರ ಸಂಘದ ಪ್ರಧಾನ ಕಾರ್ಯದರ್ಶಿ ಭರತ ಪಾಟೀಲ್, ಭವರ್ ಸಿಂಗ್, ಶಿವಬಸಪ್ಪಾ, ಮೋಹನ ಸಿಂಗ್, ಗೋಪಾಲ ಸಿಂಘ್, ಗುರುದಾಸ, ನಾಗರಾಜ ಕಲ್ಲಬಾವಿ, ವಿರುಪಾಕ್ಷಿ, ಅರ್ಜುನ ಗವಸ, ಸುರೇಶ ಪಾಟೀಲ್, ಸೋಮಶೇಖರ್, ಗಣಪತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಿಸಿದರು,