ಗೃಹರಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುನಂತೆ ಆಗ್ರಹಿಸಿ ಪ್ರತಿಭಟನೆ

Protest demanding fulfillment of various demands of home guards

ಬೆಳಗಾವಿ 16: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಿಗೆ 365 ದಿವಸ ಕರ್ತವ್ಯ ನಿರ್ವಹಿಸಲು ಕಲ್ಪಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಆಗ್ರಹಿಸಿ ಲೇಬರ್ ರೈಟ್ಸ್‌ ಫೋರಂ ವತಿಯಿಂದ ಪ್ರತಿಪಟಿಸಿದರು.   

ಗೃಹರಕ್ಷಕರಿಗೆ ಕರ್ತವ್ಯ ನಿರ್ವಹಿಸಲು ಗ್ರಾಮೀಣ ನಗರ ಹಾಗೂ ಮಹಾನಗರ ಸ್ಥಳಗಳಿಗೆ ಹೋಗಿ ಬರಲು ಉಚಿತ ಬಸ್ ಪಾಸ್ ನೀಡಿ,ಗೃಹರಕ್ಷಕರ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸರ್ಕಾರದ ಸೌಲಭ್ಯಗಳು ನೀಡುವುದು, ನಿವೃತ್ತ ಹೊಂದಿದಾಗ  ಕನಿಷ್ಠಪಕ್ಷ 20 ಲಕ್ಷದಿಂದ 30 ಲಕ್ಷದವರೆಗೆ ಪ್ರೋತ್ಸಾಹ ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಕೇಂದ್ರ ಸರ್ಕಾರ  ಗೃಹರಕ್ಷಕರ  ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.  

ಮುಖಂಡರಾದ ಪಾವಗಡ ಶ್ರೀರಾಮ, ಮಲ್ಲಪ್ಪ ಕೊಂಬೆ, ಕೋರಗೌಡ ನಾಗರಾಜ, ವಿನಾಯಕ ದಾವಣಗೆರೆ, ರಾಜು ಎಚ್, ರಮಾಕಾಂತ ಸೇರಿದಂತೆ ಇತರರಿದ್ದರು.