ಬ್ಯಾಡಗಿ14: ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ರೈತರಿಗೆ ಬಾರದಿರುವ ಬೆಳೆವಿಮೆ ಹಣವನ್ನು ಕೂಡಲೇ ಅವರ ವರ ಖಾತೆಗಳಿಗೆ ಹಾಕವುದು, ಹಗಲುವೇಳೆ ತ್ರಿಫೇಸ್ ವಿದ್ಯುತ್ ಪೂರೈಕೆ, ಮುಖ್ಯರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕನರ್ಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಸೋಮವಾರ ತಹಶೀಲ್ದಾರ ಕಛೇರಿ ಪ್ರತಿಭಟನೆ ನಡೆಸಿ ಬಳಿಕ ತಹಶೀಲ್ದಾರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರ ಲ್ಲದೇ, ಸುಭಾಸ ವೃತ್ತದ ಬಳಿ ಮಾನವ ಸರಪಳಿ ನಿಮರ್ಿಸಿ ಸುಮಾರು 1 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರ ಕಚೇರಿ ಎದುರು ಸುಮಾರು 4 ತಾಸುಗಳಿಗೂ ಅಧಿಕ ಕಾಲ ಧರಣಿ ನಡೆಸಿದರು, ಈ ಸಂದರ್ಭದಲ್ಲಿ ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ಘೋಷಣೆ ಕೂಗಿದರು.
ಸಿಂಥೆಟಿಕ್ ಸಮೀಕ್ಷೆ ಒಪ್ಪಲು ಸಾಧ್ಯವಿಲ್ಲ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಬಳ್ಳಾರಿ, ಅತೀವೃಷ್ಟಿಯಿಂದ ತಾಲೂಕಿನ ರೈತರ್ಯಾರೂ ಒಂದು ಕಾಲು ಕೂಟ ಬೆಳೆಯಲು ಸಾಧ್ಯವಾಗಿಲ್ಲ ಬೆಳೆ ಸಮೀಕ್ಷೆಯಂತೆ ತಾಲೂಕಿನ ಎಲ್ಲಾ ಭಾಗಗಳಲ್ಲಿಯೂ ಶೂನ್ಯ ಇಳುವರಿ ಎಂಬುದಾಗಿ ಅಧಿಕಾರಿಗಳು ಸಕರ್ಾರಕ್ಕೆ ವರದಿ ಸಲ್ಲಿಸಿದ್ದಾರೆ ಆದರೆ ಹೊಸ ನಾಟಕ ಹೂಡಿರುವ ಶ್ರೀರಾಮ್ ವಿಮಾ ಕಂಪನಿಯು ಇದೀಗ ಸಿಂಥೆಟಿಕ್ ಸವರ್ೇ ಎಂಬ ಹೊಸದಾಳವೊಂದನ್ನು ಉರುಳಿಸಿದ್ದು ರೈತರಿಗೆ ಪರಿಹಾರದ ಮೊತ್ತ ಬರದಂತೆ ನೋಡಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಸಗಣಿ ಎಸದವರೇ ಸಚಿವರಾಗಿದ್ದಾರೆ: ರೈತರ ಪರ ಸಕರ್ಾರವೆಂದು ಹೇಳಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಈ ಹಿಂದೆ ಬೆಳೆ ವಿಮೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಗಣಿ ಎಸೆದವರೇ ಇಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ, ಅಂದು ತೋರಿದಂತಹ ಆಸಕ್ತಿ ಅಧಿಕಾರ ಸಿಕ್ಕ ಮೇಲೇಕಿಲ್ಲ..? ಎಂದು ಪ್ರಶ್ನಿಸಿದ ಅವರು, ತಾವೊಬ್ಬ ರೈತನ ಮಗನಾಗಿದ್ದರೇ ಇಂದೇ ಬೆಳೆವಿಮೆ ಪರಿಹಾರಕ್ಕೆ ರೈತ ಸಂಘವು ಕಳೆದ 4 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದೆ, ಇನ್ನಾದರೂ ಆಡಳಿತಾ ರೂಢ ಸಕರ್ಾರಗಳು ಎಚ್ಚೆತ್ತುಕೊಳ್ಳುವ ಮೂಲಕ ಕೂಡಲೇ ಪರಿಹಾರದ ಮೊತ್ತವನ್ನ ರೈತರ ಖಾತೆಗಳಿಗೆ ಬಿಡುಗಡೆಗೊ ಳಿಸುವಂತೆ ಆಗ್ರಹಿಸಿದರು.
ಹಗಲು ವೇಳೆ ತ್ರಿಫೇಸ್ ನೀಡಿ:ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ರಾತ್ರಿ ವೇಳೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದ್ದು ಇದರಿಂದ ರೈತರು ನೀರು ಹಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಜೀವ ಕೈಯಲ್ಲಿ ಹಿಡಿದುಕೊಂಡು ರೈತರು ನೀರು ಹಾಯಿಸುತ್ತಿದ್ದಾರೆ ಆದ್ದರಿಂದ ಹಗಲು ಹೊತ್ತಿನಲ್ಲಿ 12 ಗಂಟೆ ನಿರಂತರ ತ್ರಿಪೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿದರು. ಹೆಸ್ಕಾಂ ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ ಸುಟ್ಟ ಟಿಸಿಗಳ ಮರು ಅಳವಡಿಕೆಗೆ ಹಣ ಪಡೆಯುತ್ತಿ ರುವ ಅಧಿಕಾರಿಗಳು ಇದಕ್ಕಾಗಿ ಮಧ್ಯವತರ್ಿಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಗಲೀಕರಣ ಮಾಡದಿದ್ದರೇ ಮುಖ್ಯರಸ್ತೆ ಸ್ಥಗಿತ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಎರಡು ತಿಂಗಳ ಕಾಲಾವಕಾಶ ಕೊಡಿ ಮುಖ್ಯರಸ್ತೆ ಅಗಲೀಕರಣ ಮಾಡಿಯೇ ತಿರುತ್ತೇನೆ ಎಂಬುದಾಗಿ ಭರವಸೆ ನೀಡಿದ್ದ ಶಾಸಕರು, ಇದೀಗ ಅಧಿಕಾರಿಗಳ ತೋರಿಸಿ ಪಲಾಯನ ವಾದ ಮಾಡುತ್ತಿದ್ದಾರೆ, ಕಳೆದ 11 ವರ್ಷಗಳ ನಿರಂತರ ಹೋರಾಟ ಅಗಲೀಕರಣಕ್ಕೆ ನಡೆಯುತ್ತಿದೆ, ಮುಖ್ಯರಸ್ತೆಯಲ್ಲಿ ಯಾರೂ ಮಾಲೀಕರಿಲ್ಲ ಬದಲಾಗಿ ಸಕರ್ಾರದ ಜಾಗವನ್ನೇ ನುಂಗಿದವರು ದಬ್ಬಾಳಿಕೆ ನಡೆಸುತ್ತಿದ್ದಾರೆ, ಕೂಡಲೇ ಅಗಲೀಕರಣ್ಕೆ ಮುಂದಾಗಬೇಕು ಇಲ್ಲವೇ ಮುಖ್ಯರಸ್ತೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೆಕಾಗುತ್ತದೆ ಎಂದು ಎಚ್ಚ ರಿಸಿದರು.
ಮುಖ್ಯಮಂತ್ರಿಗಳಿಂದಲೇ ಸುಳ್ಳು ಪ್ರಮಾಣ ಪತ್ರ: ಕಿರಣಕುಮಾರ ಗಡಿಗೋಳ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಋಣಮುಕ್ತ ಪ್ರಮಾಣಪತ್ರ ನೀಡುವ ಮೂಲಕ ರೈತರಿಗೆ ಮೋಸವೆಸಗಿದ್ದಾರೆ, ಅವರ ಪ್ರಮಾಣಪತ್ರಕ್ಕೆ ಪ್ರಸ್ತುತ ಸಕರ್ಾ ರದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ, ಆದರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ನೋಟಿಸ್ ನೀಡುವುದನ್ನು ನಿಲ್ಲಿಸಿಲ್ಲ, ನಿಯತ್ತಿನಿಂದ ನಡೆದುಕೊಳ್ಳಬೇಕೆನ್ನುವ ಸಾಲಮನ್ನಾ ವಿಚಾರದಲ್ಲಿ ರೈತರಿಗೆ ಬಡ್ಡಿ ಹೊರೆಯಾಗುತ್ತಿದೆ ಎಂದರು.
15 ದಿವಸ ಕಾಲವಕಾಶ ಕೊಡಿ:ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಶರಣಮ್ಮ ಕಾರಿ, ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಮತ್ತು ಬ್ಯಾಂಕ್ ವ್ಯವಸ್ಥಾಪಕರು, ವಿಮೆ ಕಂಪನಿ ಅಧಿಕಾರಿಗಳು ಹಾಗೂ ರೈತರ ನ್ನೊಳಗೊಂಡ ಸಭೆಯನ್ನು ನಡೆಸುವ ಮೂಲಕ ಹದಿನೈದು ದಿನಗಳಲ್ಲಿ ಮುಂಗಾರು, ಹಿಂಗಾರು ಬೆಳೆವಿಮೆ, 2015 ಸಾಲಿನ ಟೋಮ್ಯಾಟೋ ವಿಮೆ, ಟಿಸಿ ಅಳವಡಿಕೆ ಸೇರಿದಂತೆ ರೈತರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಕೆ.ವಿ.ದೊಡ್ಡಗೌಡ್ರ, ನಿಂಗಪ್ಪ ಹೆಗ್ಗಣ್ಣನವರ, ಸುರೇಶ ಛಲವಾದಿ, ಪರಮೇಶ ನಾಯಕ್, ಈಶಪ್ಪ ಮಠದ, ಶಿವನಗೌಡ ಪಾಟೀಲ, ಚಿಕ್ಕಪ್ಪ ಛತ್ರದ, ಮಂಜುನಾಥ ತೋಟದ, ಶಿವಯ್ಯ ಹಿರೇಮಠ, ಶಶಿಧರಸ್ವಾಮಿ ಛತ್ರದಮಠ, ಮಲ್ಲೇಶಪ ಡಂಬಳ, ಪ್ರವೀಣ ಹೊಸಗೌಡ್ರ, ಜಾನ್ ಪುನೀತ್, ಜಗದೀಶ ಎಲಿ, ಬಸವರಾಜ ಬಳ್ಳಾರಿ, ಈಶಪ್ಪ ಮಠದ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.