ಲೋಕದರ್ಶನವರದಿ
ಗುಳೇದಗುಡ್ಡ21: ಐಟಿಐ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವ ಕ್ರಮ ಸರಿಯಾದುದಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಕೂಡಲೇ ಆನ್ಲೈನ್ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಖಾಸಗಿ ಹಾಗೂ ಸರಕಾರಿ ಐಟಿಐ ಕಾಲೇಜುಗಳ ವಿದ್ಯಾಥರ್ಿಗಳು ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಜಿ.ಎಂ.ಕುಲಕಣರ್ಿ ಅವರಿಗೆ ಮನವಿ ಸಲ್ಲಿಸಿದರು.
ಐಟಿಐ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಂದ ಬಂದಿರುವವರಾಗಿದ್ದು, ಅದರಲ್ಲಿ ಹೆಚ್ಚಿನವರು ಬಡವರಾಗಿದ್ದು, ಅವರಿಗೆ ಸರಿಯಾಗಿ ಕಂಪ್ಯೂಟರ ಶಿಕ್ಷಣ ಇರುವದಿಲ್ಲ. ಐಟಿಐ ಕೌಶಲ್ಯ ತರಬೇತಿಯಾಗಿದ್ದು ರೇಖಾಚಿತ್ರ ಹಾಗೂ ಕೈ ಬರಹ ಪರೀಕ್ಷೆ ಮಾಡುವದರಿಂದ ಪರಿಣಾಮಕಾರಿಯಾಗಿವಿದ್ಯಾರ್ಥಿಗಳು ಗುಣಮಟ್ಟ ಹೆಚ್ಚಿಸಲು ಸಾಧ್ಯವಿರುತ್ತದೆ. ಐಟಿಐ ಪಾಸಾದ ನಂತರ ಕಾಖರ್ಾನೆಗಳಲ್ಲಿ ಕೇವಲ ಕಾರ್ಮಿಕನಂತೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಈ ಪರೀಕ್ಷೆ ಏಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಎಲ್ಲ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಏಕ ಕಾಲಕ್ಕೆ ಬರೆಯುವಷ್ಟು ಕಂಪ್ಯೂಟರ್ ಸೌಲಭ್ಯ ಇರುವದಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳ ಹೆಸರಿಗೆ ಧಕ್ಕೆ ಬರುವಂತಾಗಬಹುದು. ಆದ್ದರಿಂದ ಐಟಿಐ ವಿದ್ಯಾರ್ಥಿಗಳಿಗೆ ನಡೆಸುವ ಆನ್ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಾದಾಮಿ ತಾಲೂಕು ಸಂಚಾಲಕ ಉದಯ ಕಂಠಿ, ನಗರ ಕಾರ್ಯದರ್ಶ ಸಂದೀಪ ಮಣ್ಣೂರ, ಗಣೇಶ ಕಲಾಲ, ಶುಭಂ ಪಾಂಡೆ, ಪ್ರಮೋದ, ಸುನೀಲ, ಅಭೀಷೇಕ ಸೇರಿದಂತೆ ಪಟ್ಟಣದ ಖಾಸಗಿ ಹಾಗೂ ಸರಕಾರಿ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.