ಲೋಕದರ್ಶನ ವರದಿ
ಸಂಕೇಶ್ವರ 10: ಕೇಂದ್ರ ಸಕರ್ಾರ ಆಥರ್ಿಕ, ಕಾಮರ್ಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಲೇಟೇಕ್ಸ ಎಂಪ್ಲಾಯಿಜ್ ಯೂನಿಯನ್ ಫೇಡರೇಶನ್ ಸಂಘಟನೆಯು ಸಮೀಪದ ಕಣಗಲಾದಲ್ಲಿ ಪ್ರತಿಭಟನೆ ನಡೆಯಿತು. ಕಣಗಲಾ ಗ್ರಾಮದಲ್ಲಿನ ಹಿಂದೂಸ್ತಾನ್ ಲೇಟೇಕ್ಸ ಲಿಮಿಟೆಡ್ ಮುಂಭಾಗದಿಂದ ಪ್ರತಿಭಟನೆ ಆರಂಭಿಸಿ ನಂತರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಎಚ್. ಗೀರಿರಾಜ ಮಾತನಾಡಿ ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂ. ನಿಗದಿ ಆಗಬೇಕು. ಕಾಪರ್ೊರೇಟ್ ಬಂಡವಾಳದ ಪರವಾದ ಮತ್ತು ಕಾಮರ್ಿಕ ವಿರೋಧಿಯಾದ ಕಾಮರ್ಿಕ ಕಾನೂನುಗಳ ಸಂಹಿತೀಕರಣ ವಿರೋಧಿಸಿ ಎಲ್ಲಾ ಜಿಲ್ಲೆಗಳಲ್ಲಿ ಕಾಮರ್ಿಕ ಕೋಟರ್್ ಗಳನ್ನು ಸ್ಥಾಪಿಸಬೇಕು. ಎಲ್ಲರಿಗೂ ಸಕರ್ಾರದಿಂದಲೇ 10 ಸಾವಿರ ಕನಿಷ್ಠ ಖಾತ್ರಿ ಪಿಂಚಣಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆಥರ್ಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳ ವಿರುದ್ಧ, ಈ ನೀತಿಗಳಿಂದಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾಮರ್ಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ ಮಾಡಬೇಕು ಹಾಗೂ ಉದ್ಯೋಗ ಸೃಷ್ಠಿ ಮಾಡಬೇಕು. ಗ್ರಾಮೀಣ ಸಂಕಷ್ಟವನ್ನು ಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಹೂಡಿಕೆಗಾಗಿ ಬೆಲೆ ಏರಿಕೆ ನಿಯಂತ್ರಣ ಮಾಡುವಂತೆ ಒತ್ತಾಯಿಸಿದರು. ಎಲ್ಲಾ ನೌಕರರಿಗೆ ಎಲ್ಐಸಿ, ಆಧಾರಿತ ಪಿಂಚಣಿ ಜಾರಿ ಮಾಡಬೇಕು. ಎಲ್ಲಾ ನೌಕರರನ್ನು ಖಾಯಂ ಮಾಡಬೇಕು.
ಬೆಲೆ ಏರಿಕೆ ನಿಯಂತ್ರಿ ಸಬೇಕು. ಜೀವನಾವಶ್ಯಕ ವಸ್ತುಗಳನ್ನು ಸಾರ್ವ ಜನಿಕ ಪಡಿತರ ಮೂಲಕ ವಿತರಿಸುವ ವ್ಯವಸ್ಥೆ ಜಾರಿ ಮಾಡಬೇಕು. ಖಾಯಂ ಸ್ವರೂಪದ ಉದ್ಯೋಗಗಳನ್ನು ಸೃಷ್ಠಿಸುವಂತೆ ಪ್ರತಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎ.ಎಮ್.ಮುಲ್ಲಾ ಬಿ.ಆರ್.ಕುಟಗೋಳಿ, ಎಸ್.ಎಸ್.ಪಾಟೀಲ, ಆರ್.ಕೆ.ಕಾಂಬಳೆ ಹಾಗೂ ಅನೇಕರು ಭಾಗವಹಿಸಿದ್ದರು.