ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

ಲೋಕದರ್ಶನವರದಿ

ಗೋಕಾಕ18: ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಫೂಲ್ವಾಮಾ ಜಿಲ್ಲೆಯ ಅವಂತಿಪೂರದಲ್ಲಿ ನಡೆದ ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕನರ್ಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲದಾರ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಿದರು.

ನಗರದ ಮಿನಿ ವಿಧಾನ ಸೌಧದ ಮುಂದೆ ಸೇರಿದ ರೈತ ಸಂಘದ ಕಾರ್ಯಕರ್ತರು ವೀರ ಮರಣ ಹೊಂದಿದ ಸೈನಿಕರ ಶ್ರದ್ಧಾಂಜಲಿ ಸಲ್ಲಿಸಿ, ಉಗ್ರಗಾಮಿಗಳು ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯೆಕ್ತಪಡಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಭೀಮಶಿ ಗದಾಡಿ ಮಾತನಾಡಿ ಭಾರತ ದೇಶದ ಬೆನ್ನಲುಬುಗಳಾದ ರೈತರು ಮತ್ತು ಸೈನಿಕರು ಇಂದು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಲ-ಶೂಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇತ್ತ ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು ಹಗಲು ರಾತ್ರಿಯೆನ್ನದೇ ದೇಶದ ಗಡಿಯನ್ನು ಕಾಯುತ್ತಿದ್ದಾನೆ. ರೈತ ಮತ್ತು ಸೈನಿಕ ದೇಶ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ಹೆಗಲಿಗೆ ಹೆಗಲಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಕರ್ಾರ ತಮ್ಮ ಕಾರ್ಯವನ್ನು ಮಾಡಬೇಕಾಗಿದೆ. ಸೈನಿಕರ ಬಲಿದಾನಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗಿದೆ. ನಮ್ಮ ದೇಶದಲ್ಲಿ ಇದ್ದು ದೇಶದ ಅನ್ನ ತಿಂದು ದೇಶದ್ರೋಹಿಗಳಿಗೆ ಆಶ್ರಯ ನೀಡುವ ಮತ್ತು ಅವರ ಪರವಾಗಿ ಮಾತನಾಡುವ ದ್ರೋಹಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ರಾಜ್ಯ ಸಂಚಾಲಕ ಗಣಪತಿ ಈಳಿಗೇರ, ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ, ಮುತ್ತೆಪ್ಪ ಬಾಗನ್ನವರ, ಮಂಜುನಾಥ ಪೂಜೇರಿ, ಗೋಪಾಲ ಕುಕನೂರ, ಭರಮು ಖೇಮಲಾಪೂರೆ, ಬಾಳಯ್ಯ ಹಿರೇಮಠ, ರಾಜು ಹೂಲಿಕಟ್ಟಿ, ರಾಜು ಸಾಂಗಲಿ, ಎಸ್.ಎಮ್.ಬಿಳ್ಳೂರ, ಯಲ್ಲಪ್ಪ ತಿಗಡಿ, ಸಿದ್ಲಿಂಗ ಪೂಜೇರಿ, ರಾಮಪ್ಪ ಡಬಾಜ, ಸಿದ್ರಾಮ ಪೂಜೇರಿ, ಪುಂಡಲೀಕ ನಿಡಸೋಸಿ, ಮಹಾದೇವ ಗೋಡೆರ, ಪ್ರಕಾಶ ಹಾಲನ್ನವರ, ಶಂಕರ ಮದಿಹಳ್ಳಿ, ಮಲ್ಲಿಕಾಜರ್ುನ ಈಳಿಗೇರ ಸೇರಿದಂತೆ ಅನೇಕರು ಇದ್ದರು.