ದೇವರಹಿಪ್ಪರಗಿ 27: ತಾಲೂಕಿನ ಕೋರವಾರ ಗ್ರಾಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಛಾಟನೆ ಖಂಡಿಸಿ ಬಿಜೆಪಿ ಮಾಜಿ ಸಿಎಂ ಬಿ.ಎಸ್. ಯಡಿಯೂರ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೊಡಲೇ ಉಚ್ಛಾಟನೆ ಆದೇಶ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಬಿಜೆಪಿಗೆ ಬರುವಂತ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬಾಪುಗೌಡ ಬಿರಾದಾರ, ಅಪ್ಪುಗೌಡ ಪಾಟೀಲ, ಭೀಮನಗೌಡ ಕುಳೆಕುಮಟಗಿ, ನಿಂಗರಾಜ ಕೊಟಗಿ,ಮಾಂತಗೌಡ ಪಾಟೀಲ, ದಯಾನಂದ ಗುತ್ತರಗಿ,ಭರತ ಕೊಟಗಿ, ವಿದ್ಯಾನಂದ ಘಾಟಗಿ, ಮಹೇಶಗೌಡ ಬಿರಾದಾರ, ಗೌಡಪ್ಪಗೌಡ ಬುಳ್ಳಾ, ಕೃಷ್ಣ ರಾಠೋಡ, ಮಾಂತಗೌಡ, ಸಂಗಣ್ಣ, ಮಡುಸೌಕಾರ ಕುಳೆಕುಮಟಗಿ, ಬಾಬು ಸಿದ್ದರಡ್ಡಿ, ಮಲ್ಲು ಗಡೇದ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.