ವಿವಿಧ ಬೇಡಿಕೆಗೆ ಒತ್ತಾಯಿಸಿ ಕುರಿ-ಉಣ್ಣೆ ಉತ್ಪಾದಕರ ಸಂಘದಿಂದ ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ 20: ಪಶು ಸಂಗೊಪನೆ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶಿವರಾಜ ಶೆಟ್ಟರ್ ಇವರನ್ನು ಇಲ್ಲಿಂದ್ ವರ್ಗಾವಣೆ  ಮಾಡಬೇಕು. ಇವರ ವಿರುದ್ಧ ವಿಚಾರಣೆ ನಡೆಸಬೇಕು ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ಸಕರ್ಾರ ಮುತವಜರ್ಿ ವಹಿಸಿ ಅಗತ್ಯ ಕ್ರಮ ಕೈಗೊಂಡು ನಮ್ಮ ನ್ಯಾಯಯುತ ಬೇಡಿಕೆಗಳ ಇಡೇರಿಕರಗಾಗಿ ಪ್ರಮಾಣಿಕವಾಗಿ ಶ್ರಮಿಸಬೇಕು ಎಂದು ಮಾರುತೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಒತ್ತಾಯಿಸಿದೆ.

ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಕುರಿಗಳಿಗಾಗಿ ಮತ್ತು ಜಾನುವಾರುಗಳಿಗಾಗಿ ಕುಡಿಯುವ ನೀರು ಮೇವು ಇತ್ಯಾದಿ ಸೌಕರ್ಯಗಳನ್ನು  ಸೇರಿದಂತೆ ಗೋಸಾಲೆಗಳನ್ನು ಒದಗಿಸಿಕೊಡಬೇಕು ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುದು ಎಂದರು.

ರೈತರು ಮತ್ತು ಕುರಿಗಾರರ ಮೇಲೆ ದೌರ್ಜನ್ಯ ನಡೆಸುತ್ತ ಕೆಟ್ಟ ಬೆಗುಳದಿಂದ ಬೈಯುತ್ತಾರೆ. ಆಸ್ಪತ್ರೆ ಮೆಟ್ಟಲು ಹತ್ತಬೇಡಿ ಎಂದು ಬೆದರಿಸುತ್ತಾರೆ. ಕಳೆದ ಒಂದು ವರ್ಷದಿಂದ ಪಶುವೈದ್ಯಾಧಿಕಾರಿಗಳಾಗಲಿ ಮತ್ತು ಸಿಬಂದ್ದಿ ವರ್ಗದವರಾಗಲಿ ಕುರಿಗಾರರಿಗೆ-ರೈತರಿಗೆ ಬೆಂಬಲಿಸುತ್ತಿಲ್ಲ, ಹಿಗಾಗಿ ಪರಿಸ್ಥಿತಿ ಹತೊಟಕ್ಕೆ ಬರುತ್ತಿಲ್ಲ, ಕೂಡಲೆ ಸಕರ್ಾರ ಎಚ್ಚೆತ್ತು ಕೊಳ್ಳಬೇಕು ಕೊಪ್ಪಳ ಜಿಲ್ಲೆ ಬರಗಾಲ ಪ್ರದೇಶ ಎಂದು ಘೊಷಿಸಬೇಕು, ಗ್ರಾಮಿಣ ಜನರಿಗೆ, ದನ-ಕರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಗುಡದಪ್ಪ ಬಾನಪ್ಪನವರ ಹಲಗೇರಿ ಸಕರ್ಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಮಾರುತೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕೊಪ್ಪಳದ ವತಿಯಿಂದ ಸಕರ್ಾರಕ್ಕೆ ಒತ್ತಾಯಿಸಿದ ಈ ಸಂದರ್ಭದಲ್ಲಿ ಗುಡದಪ್ಪ ಹಲಗೇರಿ, ಹನುಮಪ್ಪ ಜಂತ್ಲಿ, ಯಮನೂರಪ್ಪ ಬಸಪ್ಪ, ದೇವಪ್ಪ ಹೈರಾಣಿ ತಾವರಗೇರಿ, ಹನುಮಂತ್ ಜಂತ್ಲಿ, ಬಸವರಾಜ ಕುರಿ, ಬಸವರಾಜ ಮುಂಡರಗಿ ಸೇರಿದಂತೆ ಮಾಳಪ್ಪ ಹೇರವಾಡಿ, ಯಮನೂರಪ್ಪ ದೊಡ್ಡಮನಿ, ಅಪ್ಪಣ್ಣ ಗಬ್ಬೂರ, ನಾಗಪ್ಪ ಯಲಮಗೇರಿ, ಮಂಜಪ್ಪ ಗಬ್ಬೂರ, ರಾಜಪ್ಪ ಅಲ್ಲನಗರ, ಹೇಮಂತ್ ಬಿಸರಳ್ಳಿ, ಬಸಪ್ಪ ಹುಲಸನಹಟ್ಟಿ, ರಾಮಸ್ವಾಮಿ ಹುರಕಡ್ಲಿ, ಸಿದ್ದಪ್ಪ ಕಾಮನೂರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.