ಧಾರವಾಡ 13: ಮೆಣೆ.ಪಲ್ಲಕ್ಕಿ ಹೊರುವ ಮೂಲತ ಭೋವಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ಆಗ್ರಹಿಸಿ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಿ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಮೂಲತ ಅಂದರೆ ಅಂಬಿಗ, ಬೆಸ್ತ ಹಾಗೂ ವಡ್ಡರಲ್ಲದ, ಮೇಣೆ.ಪಲ್ಲಕ್ಕಿ ಹೊರುವ ಮೂಲ ಭೋವಿ ಜನಾಂಗದವರಾದ ಭೋವಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಸಂಬಂಧಿಸಿದ ತಹಶೀಲ್ದಾರರು ಸರಕಾರ ಕಾಲ, ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಪರಿಗಣಿಸದೆ ಭೋವಿ ಸಮಾಜದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸರಕಾರಿ ಉದ್ಯೋಗ ಬಯಸಿ ನೇಮಕವಾದವರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನಿರಾಕರಿಸುತ್ತಿರುದು ಸೇರಿದಂತೆ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಗೂ ಸಮಾಜದ ಏಳ್ಗೆಗಾಗಿ ಸರಕಾರದ ಸಂವಿಧಾನಬದ್ದ ಸೌಲಭ್ಯಗಳನ್ನು ಪಡೆಯಲು ಅಧಿಕಾರಿಗಳಿಂದಾಗುತ್ತಿರುವ ತೊಂದರೆಗಳನ್ನು ನಿವಾರಿಸುವುದು ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಪ್ರಾಂತಗಳ ಜಿಲ್ಲೆಗಳಿಂದ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಿಂದ ಪಾದಯಾತ್ರೆಯ ಆರಂಭಿಸಿದ್ದು. ಧಾರವಾಡ ಶಹರದಿಂದ ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರೋಡ ಮೂಲಕ ಬೆಳಗಾವಿಯ ಸುವರ್ಣಸೌಧ ತಲುಪಿ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.
ಅಧ್ಯಕ್ಷರಾದ ಲಕ್ಮಣ ಭೋವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಹುಚ್ಚಪ್ಪ ಭೋವಿ ರಾಜ್ಯ ಕಾರ್ಯಾಧ್ಯಕ್ಷರು, ವಿಠಲ ಭೋವಿ ಜಿಲ್ಲಾ ಅಧ್ಯಕ್ಷರು, ಯಲ್ಲಪ್ಪ ಭೋವಿ, ಹುಲಿಗಪ್ಪ ಭೋವಿ, ಕೃಷ್ಣ ಭೋವಿ, ನಾಗಪ್ಪ ಭೋವಿ, ಬೇಲೂರ್ಪ ಭೋವಿ, ಮುತ್ತಪ್ಪ ಜಾಲಿಹಾಲ, ಶಂಕರ್ಪ ಭೋವಿ, ಸುರೇಶ ಭೋವಿ, ಪುಂಡಲೀಕ ಭೋವಿ, ನಾಗಪ್ಪ ಭೋವಿ, ರಮೇಶ ಭೋವಿ, ಶರಣಪ್ಪ ಭೋವಿ, ಗೋವಿಂದ ಭೋವಿ ಸೇರಿದಂತೆ ಭೋವಿ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.