ನಾಳೆ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ- ಮನವಿ

ಲೋಕದರ್ಶನ ವರದಿ

ಬೆಳಗಾವಿ, 10: ಕೇರಳದ ಶಬರಿಮಲೈ ಶ್ರೀ ಅಯ್ಯಪ್ಪ ಮಂದಿರಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ದರ್ಶನ ನಡೆಯಬಹುದು ಎಂಬ ಸುಪ್ರೀಂ ಆದೇಶ ಮರು ಪರಿಶೀಲನೆಗೆ ಆಗ್ರಹಿಸಿ ದಿ.12 ರಂದು ಬೆಳಿಗ್ಗೆ  10ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಶ್ರೀ ಅಯ್ಯಪ್ಪ ಸೇನಾ ಸಂಘಟನೆ ನೇತೃತ್ವದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವದು ಎಂದು ಸುರೇಂದ್ರ ಗುರುಸ್ವಾಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಶ್ರೀ ಅಯ್ಯಪ್ಪ ಮಂದಿರಕ್ಕೆ ಅದರದೇ ಯಾದ ಪರಂಪರೆ, ಪಾವಿತ್ರ್ಯತೆ ಇದೆ ಸದ್ಯದ ಸುಪ್ರೀಂ ಆದೇಶದಿಂದ ಅದು ಹಾಳಾಗುವ ಸಾಧ್ಯತೆ ಇದೆ 10 ವರ್ಷದ ನಂತರ ಹಾಗೂ 50 ವರ್ಷದ ಒಳಗಿನ ಮಹಿಳೆಯರು ದೇವಾಲಯ ಪ್ರವೇಶ ಮಾಡುವದು ಪರಂಪರೆ ಹಾಗೂ ಪಾವಿತ್ರ್ಯತೆಗೆ ವಿರುದ್ಧವಾದದ್ದು ಈ ನಿಟ್ಟಿನಲ್ಲಿ ಸುಪ್ರೀಂ ಆದೇಶ ಮರು ಪರಿಶೀಲಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ಕುರಿತು ಸೋಮವಾರ ಪ್ರತಿಭಟನೆ ನಡೆಯಲಿದೆ ಎಂದರು.

ಯುವ ಧುರೀಣ ಮಹಾಂತೇಶ ರಣಗಟ್ಟಿಮಠ ಮಾತನಾಡಿ ನವೆಂಬರ 13ರ ಒಳಗೆ ಸರಕಾರ ಸೂಕ್ತ ನಿಧರ್ಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಸುಮಾರು ನಾಲ್ಕು ಕೋಟಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಲ್ಲಿದ್ದಾರೆ. ಇದು ಉದ್ದೇಶ ಪುರ್ವಕವಾಗಿ ಹಿಂದೂ ದೇವಾಲಯಗಳ ಮೇಲೆ ಮಾಡುವ ದಾಳಿ ಆಗಿದೆ ಎಂದರು.

ಶ್ರೀನಾಗನಾಥ ಶ್ರೀಗಳು ಕೃಷ್ಣಾಜಿ ಭಟ್, ಜಯಶ್ರೀ ಮಂಡ್ರೊಳಿ ಇವರು ಮಾತನಾಡಿದರು. ಕೃಷ್ಣಾ ಗುರುಸ್ವಾಮಿ, ಸತೀಶ ಶೆಟೆ, ಶ್ರೀಕಾಂತ ಕದಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.