ಲೋಕದರ್ಶನ ವರದಿ
ಗದಗ 05: ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಕಾರಿ ಮಾತನಾಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಗದಗ-ಬೆಟಗೇರಿ ಅಂಜುಮನ-ಎ-ಇಸ್ಲಾಂ ಸಂಸ್ಥೆಯಿಂದ ನಗರದ ಗಾಂಧಿ ವೃತ್ತದಲ್ಲಿ ಸೋಮಶೇಖರ ರೆಡ್ಡಿಯ ಪ್ರತಿಕೃತ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಪೌರತ್ವ ತಿದ್ದುಪಡಿ ಮಸೂದೆ ಸ್ವಾಗತಿಸಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಮಾತನಾಡಿ ರಾಷ್ಟ್ರೀಯ ಪೌರತ್ವ ಕಾಯ್ದೆ ಅಂಂ ವಿರುದ್ಧ ಹೋರಾಟ ಮಾಡುವವರಿಗೆ ಬಹಿರಂಗವಾಗಿ ಜೀವ ಬೇದರಿಕೆ ಹಾಕಿ ಎಚ್ಚರಿಕೆ ನೀಡಿದ್ದಾರೆ. ಅಂಂ ಮತ್ತು ಓಖಅ ವಿರೋಧಿ ಹೋರಾಟಗಾರರ ಮೇಲೆ ಹಲ್ಲೆ ಮತ್ತು ಕೊಲೆಗೆ ಪ್ರಚೋದನೆ ನೀಡಿ ಪ್ರಜಾಪ್ರಭುತ್ವವದ ಕಗ್ಗೂಲೆಯನ್ನು ನಡೆಸಿದ್ದಾರೆ.
ಸಮಾಜದ ಸ್ವಾಸ್ಥ ಮತ್ತು ಶಾಂತಿಗೆ ಭಂಗ ತರುವ ಪ್ರಯತ್ನ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ, ಸೋಮಶೇಖರ ರೆಡ್ಡಿಯ ವಿರುದ್ಧ ಘೋಷಣೆಯನ್ನು ಕೂಗಿದ್ದ ಪ್ರತಿಭಟನಾಕಾರರು ಇಂತಹ ಜಾತಿವಾದಿಯನ್ನು ರಾಜ್ಯದಿಂದ ಗಡಿಪಾರ ಮಾಡಬೇಕೆಂದು ಆಗ್ರಹಿಸಿದ್ದಾರೆ. ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ನಮ್ಮ ನಾಡಿನಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತುತ್ತಿರುವ ಇಂತಹ ಕೋಮುವಾದಿಯ ಮೇಲೆ ರಾಜ್ಯದ ಮುಖ್ಯಂತ್ರಿಗಳು ಕಠಿಣ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯದಲ್ಲಿ ಸೌಹಾರ್ದತೆ ವಾತಾವರಣ ಕೆಡಸಲು ಶಾಸಕ ಸೋಮಶೇಖರ ರೆಡ್ಡಿ ಇಂತಹ ಬಹಿರಂಗ ಹೇಳಿಕೆ ನೀಡಿರುವುದನ್ನು ಗದಗ-ಬೆಟಗೇರಿ ಅಂಜುಮನ-ಎ-ಇಸ್ಲಾಂ ಸಂಸ್ಥೆ ಬಲವಾಗಿ ಖಂಡಿಸುತ್ತದೆ. ಕೊಡಲೇ ಇಂತಹವರ ವಿರುಧ್ದ ಕ್ರಮ ಕೈಗೊಳ್ಳಲು ರಾಜ್ಯದ ಮುಖ್ಯಮಂತ್ರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ರಾಜ್ಯಾದಂತ ಅಲ್ಪಸಂಖ್ಯಾತರ ಸಮುದಾಯಗಳಿಂದ ಮತ್ತು ಪ್ರಗತಿಪರ ಸಂಘಟನೆಗಳಿಂದ ರಾಜ್ಯ ಸಕರ್ಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗತ್ತದೆ ಎಂದು ಮನವಿಯ ಮೂಲಕ ಎಚ್ಚರಿಕ್ಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕಳುಹಿಸಲಾಯಿತ್ತು. ಗದಗ-ಬೆಟಗೇರಿ ಅಂಜುಮನ-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಕಾರ್ಯದರ್ಶಿ ಇಮ್ತಿಯಾಜ.ಆರ್.ಮಾನ್ವಿ, ಬಾಷಾಸಾಬ ಮಲ್ಲಸಮುದ್ರ, ಮುನ್ನಾ ಶೇಖ, ಅನ್ವರ ಶಿರಹಟ್ಟಿ, ಉಮರಫಾರುಖ ಹುಬ್ಬಳ್ಳಿ, ಎಂ.ಎನ್.ಶಾಲಗಾರ, ಜುನೇದ ಉಮಚಗಿ, ಇಲಿಯಾಸ ಖೈರಾತಿ, ಮುಜಫರ ಮುಲ್ಲಾ, ಮೆಹಬೂಬ ಧಾರವಾಡ, ಎಂ.ಡಿ.ಮಾಳೀಕೊಪ್ಪ, ವಿನೋದ ಶಿದ್ದಲಿಂಗ, ಮಹ್ಮದಸಾಬ ಮುಲ್ಲಾ, ಶಾಬಾಜ ಮುಲ್ಲಾ, ಮಕ್ತುಮ ಮುಲ್ಲಾ, ರಿಯಾಜ ಪಾಮಡಿ, ಮಲ್ಲಿಕ ಹಂಪಾಪಟ್ಟಣ, ನಿಜಾಮುದ್ದಿನ ಕಾತರಕಿ, ಅನ್ವರ ಬಾಗೇವಾಡಿ ಗದಗ-ಬೆಟಗೇರಿ ಅಂಜುಮನ್ ಸಂಸ್ಥೆ ಹಾಗೂ ನೌಜವಾನ ಕಮಿಟಿಗಳ ನೂರಾರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.