ಬೈಲಹೊಂಗಲ 31: ಪ್ರತಿ ರೈತರಿಂದ 10 ಕ್ವಿಂಟಲ್ ಹೆಸರು ಖರೀದಿಸಬೇಕು, ಮಾಯಸ್ಚರ್ ತೇವಾಂಶ ಮಾನದಂಡ ಕೈಬಿಡಬೇಕು ಎಂಬಿತ್ಯಾದಿ ಬೇಡಿಕೆಗಳ ರೈತರ ಹತ್ತಾರು ಹೋರಾಟಗಳ
ನಡುವೆಯೇ ಆರಂಭಿಸಲಾಗಿದ್ದ ಸರಕಾರದ ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿಯನ್ನು
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಯಾವುದೇ ಮುನ್ಸೂಚನೆ ನೀಡದೇ ಧಿಡೀರ ಸ್ಥಗಿತಗೊಳಿಸಿ ಮಂಗಳವಾರ ಆದೇಶಿಸಿದೆ.
ಸರಕಾರ ಮತ್ತು ಮಂಡಳದ ಈ ಕೊಟ್ಟು ಕಸಿದುಕೊಳ್ಳುವ
ನೀತಿಯಿಂದ ಆತಂಕಕ್ಕೊಳಗಾದ ತಾಲೂಕಿನ ದೊಡವಾಡ ಗ್ರಾಮದ ರೈತರು ಅಲ್ಲಿನ ಕೊಪ್ಪದ ಅಗಸಿಯಲ್ಲಿನ ಪಿಕೆಪಿಎಸ್ ಗೋದಾಮನ್ನು ಬಂದ್ ಮಾಡಿ ಈಗಾಗಲೇ
ಖರೀದಿಸಿದ್ದ ಹೆಸರು ಕಾಳನ್ನು ಲೋಡ್
ಮಾಡಿಕೊಂಡು ಬೈಲಹೊಂಗಲಕ್ಕೆ ಹೊರಟಿದ್ದ ಲಾರಿಗಳನ್ನು ತಡೆದು ಚಾಲಕರನ್ನು ಕೆಳಗಿಳಿಸಿ ಪ್ರತಿಭಟನೆ ನಡೆಸಿದರು.
ನವೆಂಬರ್ 5 ರವರೆಗೂ ಹೆಸರು ಖರೀದಿ ವಿಸ್ತರಿಸಿ ತಾನೇ ಹೊರಡಿಸಿದ್ದ ಆದೇಶ
ಪಾಲಿಸದ ಮಾರಾಟ ಮಹಾಮಂಡಳ ರೈತರ ಜೀವನದ ಜತೆ
ಚೆಲ್ಲಾಟವಾಡುತ್ತಿದೆ. ಈಗಾಗಲೇ ನೋಂದಣಿ ಮಾಡಿಸಿರುವ ಗ್ರಾಮದ ಸಾವಿರಾರು ರೈತರು 4 ಕ್ವಿಂಟಲ್ನಷ್ಟಾದರೂ ಖರೀದಿಯಾಗುವುದು ಎಂಬ
ನಿರೀಕ್ಷೆ ಇಟ್ಟುಕೊಂಡು ತಾವು ಬೆಳೆದ ಹೆಸರು
ಕಾಳಿನೊಂದಿಗೆ ತಮ್ಮ ಸರದಿಗಾಗಿ ಖರೀದಿ
ಕೇಂದ್ರಗಳ ಮುಂದೆ ಹಗಲು ರಾತ್ರಿ ಕಾಯುತ್ತಿದ್ದಾರೆ.
ಈಗ 23000 ಮೆಟ್ರಿಕ್ ಟನ್ ಖರೀದಿ ಮಿತಿ
ದಾಟಿದೆ ಎಂಬ ನೆಪ ಒಡ್ಡಿ
ಖರೀದಿ ಸ್ಥಗಿತಗೊಳಿಸಿರುವ ಮಂಡಳ ಆದೇಶದಿಂದ ರೈತರಿಗೆ
ಆಕಾಶವೇ ಕಳಚಿ ಬಿದ್ದಂತಾಗಿದೆ.
ಧಾರವಾಡದಲ್ಲಿಯೂ ಇದೇ ಸಮಸ್ಯೆ ಉಂಟಾಗಿ
ರೈತರು ಪ್ರತಿಭಟನೆ ನಡೆಸಿದ್ದರಿಂದ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಿಂದ ಖರೀದಿ ಪ್ರಕಿಯೆ ಮುಂದುವರೆಸಲಾಗಿದೆ ಎಂದು ರೈತ ಮುಖಂಡ
ಶ್ರೀಧರ ರಡ್ಡೇರ ಹೇಳಿದರು.
ಜಿಪಂ. ಸದಸ್ಯ ಶಂಕರ ಮಾಡಲಗಿ ನೇತೃತ್ವದಲ್ಲಿ ಗ್ರಾಮದ
ಪಿಕೆಪಿಎಸ್ನ ಆಡಳಿತ ಮಂಡಳಿ ನಿದರ್ೇಶಕರು ಹಾಗೂ ರೈತರ ತಂಡ ಮಂಗಳವಾರವೇ
ಬೆಳಗಾವಿಗೆ ತೆರಳಿ
ಈ ಬಗ್ಗೆ ಪರಿಶೀಲನೆ ನಡೆಸಿ ಪುನ: ಖರೀದಿ ಪ್ರಕ್ರಿಯೆ
ಆರಂಭಿಸಿಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಪಿಕೆಪಿಎ