ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ: ರೈಲು ಸಂಚಾರಕ್ಕೆ ಅಡ್ಡಿ,

ಬೆಂಗಳೂರು-ಅಗರ್ತಲಾ ಎಕ್ಸ್‍ಪ್ರೆಸ್ ಸ್ಥಗಿತಗುವಾಹತಿ, 13- ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮುಂದುವರೆದಿರುವ  ಪ್ರತಿಭಟನೆಗಳಿಂದ ಅಸ್ಸಾಂನಲ್ಲಿ ರೈಲು ಸೇವೆಗಳಿಗೆ ತೀವ್ರ ಅಡ್ಡಿಯಾಗಿದ್ದು, ಶುಕ್ರವಾರ ದೂರ ಪ್ರಯಾಣದ ಸುಮಾರು 39 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಎರಡು ದಿನಗಳಿಂದ ಗುವಾಹತಿ-ದಿಬ್ರೂಗಢ ನಡುವಿನ ಇಂಟರ್‍ಸಿಟಿ ಪ್ಯಾಸೆಂಜರ್ ರೈಲುಗಳು ಮತ್ತು ಎಲ್ಲ ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೂರ ಪ್ರಯಾಣದ ಅನೇಕ ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಫ್ರಂಟಿಯರ್ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ದಿಬ್ರೂಗಢ-ಹೌರಾ ಕಮರುಪ್ ಎಕ್ಸ್‍ಪ್ರೆಸ್, ದಿಬ್ರೂಗಢ-ಕನ್ಯಾಕುಮಾರಿ ಬಿಬೆಕ್ ಎಕ್ಸ್‍ಪ್ರೆಸ್, ರಾಜೇಂದ್ರನಗರ್-ನ್ಯೂ ತಿನ್‍ಸುಕಿಯಾ ಎಕ್ಸ್‍ಪ್ರೆಸ್, ಅಗರ್ತಲಾ ಸಿಯಾಲ್ಡಾ ಕಾಂಚನ್‍ಜುಂಗಾ ಎಕ್ಸ್‍ಪ್ರೆಸ್ ಮತ್ತು ಬೆಂಗಳೂರು-ಅಗರ್ತಲಾ ಹಮ್‍ಸಫರ್ ಎಕ್ಸ್‍ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, 14020 ತ್ರಿಪುರ್‍ಸುಂದರಿ ಎಕ್ಸ್‍ಪ್ರೆಸ್ ರೈಲು ಬರ್ದಾಪುರ್ ದಿಂದ ಅಗರ್ತಲಾ ನಡುವೆ ಪ್ಯಾಸೆಂಜರ್ ರೈಲು ಆಗಿ ಸಂಚರಿಸುತ್ತದೆ. ಸಿಲ್ಚಾರ್-ಅಗರ್ತಲಾ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.