ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಹೊಸಪೇಟೆ, ಜು.7: ಕೋರೋನಾ ಸಂಕಷ್ಟದಲ್ಲಿಯೂ ಸಹ ಕೇಂದ್ರದ ಬಿಜೆಪಿ ಸಕರ್ಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸತತವಾಗಿ ಏರಿಸುತ್ತಿರುವುದನ್ನು ಖಂಡಿಸಿ ಇಂದು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ ರವರ ನೇತೃತ್ವದಲ್ಲಿ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಕಛೆರಿಯಿಂದ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯು ಬೈಕ್ ನ ಅಣಕು ಶವ ಯಾತ್ರೆ  ಮೂಲಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕರ್ಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ  ಹೊರಟು ಡಾ|| ಅಂಬೇಡ್ಕರ್  ಸರ್ಕಲ್ ನಲ್ಲಿ ಡಾ|| ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ  ಮೂಲಕ  ಶಾನಭಾಗ್ ಸರ್ಕಲ್  ನಲ್ಲಿ  ಪ್ರತಿಭಟನಾಕಾರರು ಸೇರಿ ಪ್ರತಿಭಟನೆ ನಡೆಸಲಾಯಿತು.  ನಂತರ  ಮಾನ್ಯ ತಹಶೀಲ್ದಾರರ ಮುಖಾಂತರ ಗೌರವಾನ್ವಿತ ರಾಷ್ಟಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪ್ರ್ರತಿಭಟನೆಯ ನೇತೃತ್ವ ವಹಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ರವರು ಮಾತಾನಾಡಿ ಈಗಾಗಲೇ ಕೊರೋನಾ ರೋಗದ ಸಂಧರ್ಭದಲ್ಲಿನ ಲಾಕ್ ಡೌನ್ ನಿಂದ ಅಥರ್ಿಕ ಸಂಕಷ್ಟಕ್ಕೆ ಒಳಗಾಗಿ ಜನಸಾಮಾನ್ಯರೂ ತತ್ತರಿಸಿ ಹೋಗಿದ್ದಾರೆ, ಹಾಗೂ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿಮರ್ಾಣವಾಗಿದೆ ಇಂತಹ ಸಂಧರ್ಭದಲ್ಲಿ ಕೇಂದ್ರ ಸಕರ್ಾರ ದಿನನಿತ್ಯವೂ ಪೆಟ್ರೋಲ್ ಡಿಸೇಲ್ ದರವನ್ನು ಏರುಸುತ್ತಿರುವುದರಿಂದ ಜನತೆಯನ್ನು ಇನ್ನಷ್ಟೂ ಅಥರ್ಿಕ ಸಂಕಷ್ಟಕ್ಕೆ ದೂಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತರಾಷ್ಟೀಯ ಪಟ್ಟದಲ್ಲಿ ಕಚ್ಚಾ ತೈಲದ ಬೆಲೆ ಅತೀ ಕಡಿಮೆ ಇದ್ದರೂ ಸಹ ಯಾವ ಉದ್ದೇಶಕ್ಕಾಗಿ ಬಿಜೆಪಿ ಸಕರ್ಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸತತವಾಗಿ ಏರಿಸುತ್ತಿದೆ ಎಂದು ಜನ ಸಾಮಾನ್ಯರಿಗೆ ಉತ್ತರ ಕೊಡಬೇಕು ಎಂದು ಸಕಾರವನ್ನು ಒತ್ತಾಯಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ನಾಗರಾಜ್, ಅಮ್ಜಾದ್ ಪಟೇಲ್, ತಾರಳ್ಳಿ ವೆಂಕಟೇಶ್ ಮಾತಾನಾಡಿದರು, ಈ ಪ್ರತಿಭಟನೆಯಲ್ಲಿ ಕಮಲಾಪುರ ಬ್ಲಾಕ್ ಅಧ್ಯಕ್ಷರಾದ ಸೋಮಪ್ಪ ಹಾಗೂ ಕಾಂಗ್ರೆಸ್ ಮುಖಂಡರಾದ ಫಹೀಮ್ ಭಾಷಾ, ಕರೋಲಿನ್ ಸ್ಮಿತ್, ಎಂ.ವಿ. ವೀರಸ್ವಾಮಿ, , ವೆಂಕಟರಮಣ, ನಿಂಬಗಲ್ ರಾಮಕೃಷ್ಣ,  ಸತ್ಯ ನಾರಾಯಣ, ಬಿ,ಮಾರೆಣ್ಣ ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳಾದ ವಿನಯ್ ಶೆಟ್ಟರ್, ತೇಜಾನಾಯ್ಕ್, ವಿಜಯ ಕುಮಾರ್, ಜೆ.ಎನ್. ಕಾಳಿದಾಸ್, ಎಸ್.ಬಿ. ಮಂಜುನಾಥ, ಗುಜ್ಜಲ್ ರಾಘವೇಂದ್ರ,  ಮುನ್ನಿ ಖಾಸಿಂ, ಬಾಣದ ಗಣೇಶ್, ಸಿ.ಕೃಷ್ಣ, ಅಲಾನ್ ಭಕ್ಷಿ, ಶೇಖ್ ತಾಜುದ್ಧೀನ್, ಅಬುಲ್ ಕಲಾಂ, ಮೀರ್ ಜಾಫರ್, ಅಲ್ಲಾಭಕ್ಷಿ, ಜಾವೀದ್, ಬಾಬಾ, ತಬರೀಜ್, ಗೌಸ್, ಬಾನೂಬೀ, ರಜೀಯಾ ಬೇಗಂ, ಖಾಜಾ ಮೈನುದ್ದೀನ್, ಕುಬೇರ್ ದಲ್ಲಾಳಿ, ಗೀತಾ ತಿಮ್ಮಪ್ಪ, ಶಮಾ ಇತರರು ಭಾಗವಹಿಸಿದ್ದರು.