7 ರಂದು ಶಾಸಕ ಎ.ಎಸ್.ಪಾಟೀಲ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡಹಳ್ಳಿ ಗಲಭೆಪೂರಿತ ಮಾತುಗಳನ್ನು ನಿಲ್ಲಿಸಲಿ: ಶ್ರೀಕಾಂತ

ಲೋಕದರ್ಶನ ವರದಿ

ತಾಳಿಕೋಟೆ 03:ತಾಲೂಕಿನ ತಮದಡ್ಡಿ ಗ್ರಾಮದ ದಲಿತ ಕೇರಿಗೆ ಹೊಂದಿಕೊಂಡು ಇರುವ ಬಯಲು ಶೌಚಾಲಯ ವಿಷಯವಾಗಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ದಲಿತರ ಮತ್ತು ಸವಣರ್ಿಯರ ನಡುವೆ ಗಲಭೆ ಶೃಷ್ಠಿಸುವಂತಹ ಮಾತುಗಳನ್ನಾಡಿರುವದು ಖಂಡನಾರ್ಹವಾಗಿದೆ ಅವರ ಹೇಳಿಕೆಯನ್ನು ವಿರೋಧಿಸಿ ಇದೇ ದಿ. 7 ರಂದು ತಾಳಿಕೋಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಶ್ರೀಕಾಂತ ಚಲವಾದಿ ಅವರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಮದಡ್ಡಿ ಗ್ರಾಮದಲ್ಲಿ ದಲಿತ ಕೇರಿಗೆ ಹೊಂದಿಕೊಂಡು ಇರುವ ಬಯಲು ಶೌಚಾಲಯವನ್ನು ತೆರವುಗೊಳಿಸಬೇಕೆಂದು ಸಾಕಷ್ಟು ಭಾರಿ ಡಿ.ಎಸ್.ಎಸ್.ಸಂಘಟನೆಗಳ ಹಾಗೂ ಮುಖಂಡರುಗಳು ಗ್ರಾಂ ಪಂಚಾಯ್ತಿಯಿಂದ ಹಿಡಿದು ತಹಶಿಲ್ದಾರರ ವರೆಗೆ ಮನವಿ ಮಾಡುತ್ತಾ ಬರಲಾಗಿದೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನಿನ್ನೇದಿನ ತಮದಡ್ಡಿ ಗ್ರಾಮಕ್ಕೆ ಬೆಟ್ಟಿ ಕೊಟ್ಟಿದ್ದಲ್ಲದೇ ಕುಂದುಕೊರತೆ ನೆಪದ ಮೇಲೆ ಕೆಲವು ಇಲಾಖಾ ಅಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದಿದ್ದಾರೆ ಆದರೆ ಚಲವಾದಿ ಸಮಾಜದವರ ಯಾರೋಬ್ಬರನ್ನೂ ಕರೆಯಿಸದೇ ಚಚರ್ೆಗಳನ್ನು ಮಾಡಿದ್ದಾರೆ ಮತ್ತು ದಲಿತ ಕೇರಿಗೆ ಹೊಂದಿಕೊಂಡು ಇರುವ ಬಯಲು ಶೌಚಾಲಯವನ್ನು ತೆರವುಗೊಳಿಸುವ ವಿಷಯವಾಗಿ ತಮ್ಮ ಸ್ವಜಾತಿಯವರ ಹಿತಾಶಕ್ತಿಗೊಸ್ಕರ ಬಯಲು ಶೌಚಾಲಯವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬೇಡಿ ಬೇಕಿದ್ದರೆ ದಲಿತ ಕೇರಿಯನ್ನೇ ಬೇರೆಡಿ ಸ್ಥಳಾಂತರಿಸೋಣ ಎಂಬ ಉಢಾಫೆ ಸೂಚನೆಯನ್ನು ನೀಡಿದ್ದಾರೆಂದು ಶ್ರೀಕಾಂತ ಚಲವಾದಿ ಅವರು ಆರೋಪಿಸಿದರು.

     ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದಲ್ಲಿಯೇ ಬಯಲು ಶೌಚಾಲಯ ಮುಕ್ತಮಾಡಲು ಪಣ ತೊಟ್ಟು ಕೆಲಸ ಮಾಡುತ್ತಿದ್ದರೆ ಅವರದೇ ಪಕ್ಷದ ಶಾಸಕರಾದ ನಡಹಳ್ಳಿ ಅವರು ಬಯಲು ಶೌಚಾಲಯಕ್ಕೆ ಉತ್ತೇಜನ ನೀಡುತ್ತಿರುವದು ಸರಿಯಾದ ಕ್ರಮವಲ್ಲಾ ಬೇಕಿದ್ದರೆ ಸಕರ್ಾರವೇ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಸಾಕಷ್ಟು ದುಡ್ಡು ನೀಡುತ್ತಿದೆ ಆ ವಿಷಯವಾಗಿ ಪ್ರಚಾರ ಕೈಗೊಳ್ಳಲಿ ಜನರಲ್ಲಿ ಜಾಗೃತಿ ಮೂಡಿಸಲಿ ಅದನ್ನು ಬಿಟ್ಟು ತಮದಡ್ಡಿ ಗ್ರಾಮದಲ್ಲಿ ದಲಿತರು ಮತ್ತು ಸವಣರ್ಿಯರು ಒಂದೇ ಕುಟುಂಬದವರಂತೆ ಜೀವನ ಸಾಗಿಸುತ್ತಿದ್ದವರನ್ನು ಚಿದ್ರಗೊಳಿಸಿ ದಲಿತ ಮತ್ತು ಸವಣರ್ಿಯರ ನಡುವೆ ಗಲಭೆ ಸೃಷ್ಠಿಸುವಂತಹ ಕೆಲಸ ಶಾಸಕ ನಡಹಳ್ಳಿ ಅವರು ಮಾಡಿದ್ದಾರೆಂದು ಆರೋಪಿಸಿದರು.

ಶಾಸಕರಾದವರು ಯಾವುದೇ ಜಾತಿಗೆ ಸೀಮಿತರಂತೆ ನಡೆದುಕೊಳ್ಳಬಾರದು ಆದರೆ ನಡಹಳ್ಳಿ ಅವರು ಕೇವಲ ಓಟ್ ಬ್ಯಾಂಕಿಗಾಗಿ ಸ್ವಜಾತಿಯವರ ಹಿತಾಶಕ್ತಿಗೋಸ್ಕರ ಗಲಭೆ ಸೃಷ್ಠಿಸುವಂತಹ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು ಕೂಡಲೇ ದಲಿತ ಕೇರಿಗೆ ಹೊಂದಿಕೊಂಡು ಇರುವ ಬಯಲು ಶೌಚಾಲಯವನ್ನು ತೆರವುಗೊಳಿಸಿ ದಲಿತರಿಗೆ ಆರೋಗ್ಯವಂತ ಬಧುಕನ್ನು ನಡೆಸಲು ಸಹಕರಿಸಬೇಕೆಂದು ಹೇಳಿದರು.

ದಲಿತ ಕೇರಿಯ ಬಯಲು ಶೌಚಾಲಯ ವಿಷಯವಾಗಿ ನಡಹಳ್ಳಿ ಅವರ ಹೇಳಿಕೆಯನ್ನು ವಿರೋದಿಸಿ ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಇದೇ ದಿ. 7 ರಂದು ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತಿಮರ್ಾನಿಸಲಾಗಿದೆ.

ಕೂಡಲೇ ದಲಿತ ಕೇರಿಗೆ ಹೊಂದಿಕೊಂಡು ಇರುವ ಬಯಲು ಶೌಚಾಲಯವನ್ನು ತೆರವುಗೊಳಿಸದಿದ್ದರೆ ತಹಶಿಲ್ದಾರ ಕಚೇರಿಯ ಎದುರು ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆಂದು ಮುಖಂಡ ಶ್ರೀಕಾಂತ ಚಲವಾದಿ ಅವರು ಹೇಳಿದರು.

ಈ ಸಮಯದಲ್ಲಿ ಡಿ.ಎಸ್.ಎಸ್.ವಿಧ್ಯಾಥರ್ಿ ಘಟಕದ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ತಾಲೂಕಾ ಸಂಚಾಲಕ ಕಾಶಿನಾಥ ಕಾರಗನೂರ, ಸಿದ್ದು ಬಾರಿಗಿಡದ, ದ್ಯಾಮಣ್ಣ ಶಿರೋಳ, ಗುರುಪ್ರಸಾದ ಬಿ.ಜಿ, ಪ್ರಭು ಚಲವಾದಿ, ಶಿವಾನಂದ ಬೂದಿಹಾಳ, ಯಮನಪ್ಪ ನಾಟೀಕಾರ, ದೇವು ಗೊಟಗುಣಕಿ, ಮಾಂತು ಮೈಲೇಶ್ವರ, ಎಸ್.ಟಿ.ಚಲವಾದಿ, ಬಸವರಾಜ ಚಕ್ರವತರ್ಿ, ಬಾಬು ಚಲವಾದಿ, ಶರಣು ತಳವಾರ, ಮೊದಲಾದವರು ಉಪಸ್ಥಿತರಿದ್ದರು.