ಅಂಗನವಾಡಿ ಪಡಿತರ ದುರುಪಯೋಗ ಖಂಡಿಸಿ ಪ್ರತಿಭಟನೆ

ರಾಯಬಾಗ 10: ತಾಲೂಕಿನ ಜಲಾಲಪೂರ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ನಗರದಲ್ಲಿನ ಅಂಗನವಾಡಿ ಕೇಂದ್ರ ಸಂಖ್ಯೆ 2ರ ಅಂಗನವಾಡಿ ಕಾರ್ಯ ಕತರ್ೆ ಮತ್ತು ಸಹಾಯಕಿ ಇವರು ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಅಕ್ರಮವಾಗಿ ಮನೆಗೆ ಸಾಗಿಸುತ್ತಿದ್ದಾರೆಂದು ಆರೋಪಿಸಿ ದಲಿತಯುವಕರು ಮಂಗಳವಾರ ದಂದು ಅಂಗನವಾಡಿ ಕೇಂದ್ರಕ್ಕೆ ಕೀಲಿ ಹಾಕಿ ಪ್ರತಿಭಟನೆ ನಡೆಸಿದರು. 

ದಲಿತ ಮುಖಂಡ ಉತ್ತಮಕುಮಾರ ಕಾಂಬಳೆ ಮಾತನಾಡಿ, ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರ ಸಂಖ್ಯೆ 2ರ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಕಳೆದ ಒಂದು ವರ್ಷಗಳಿಂದ ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳನ್ನು ರಾಜಾರೋಷವಾಗಿ ತಮ್ಮ ಮನೆಗಳಿಗೆ ಅಕ್ರಮವಾಗಿ ಸಾಗಿಸುವಲ್ಲಿ ನಿರತರಾಗಿದ್ದಾರೆ. ಮತ್ತು ಆಹಾರವನ್ನು ಮಾರಿಕೊಳ್ಳುತ್ತಿದ್ದಾರೆ. ಈ ವಿಷಯವಾಗಿ ಸಾಕಷ್ಟು ಬಾರಿ ಸಿಡಿಪಿಒ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಇವರ ವಿರುದ್ಧಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ, ಅಧಿಕಾರಿಗಳು ಸಹಿತ ಇದರಲ್ಲಿ ಭಾಗಿಯಾಗಿರುವುದು ಕಾಣುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಈ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ವಿರುದ್ಧ ಪ್ರತಿಗ್ರಾಮ ಸಭೆಯಲ್ಲಿ ಕೂಡಧ್ವನಿ ಎತ್ತಿದರೂ ಯಾವುದೇ ಪ್ರಯೋಜನ ವಾಗಿಲ್ಲವೆಂದರು. ಅಷ್ಟೇ ಅಲ್ಲದೇ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸುತ್ತಾರೆ ಎಂದು ಆರೋಪಿಸಿದರು. ಸೋಮವಾರ ಅಂಗವಾಡಿ ಕಾರ್ಯಕರ್ತೆ ತನ್ನ ಮಗನೊಂದಿಗೆ ಸೇರಿ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗುವಾಗ ಗ್ರಾಮದ ಸಂದೀಪ ಕುರಣೆ ಅವರ ಕೈಗೆ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದಾಗ ಅವರ ವಿರುದ್ಧ ಹಲ್ಲೆ ಮಾಡಲು ಪ್ರಯತ್ನಿಸಿದ್ದು ಇದನ್ನು ತಾವುತೀವ್ರವಾಗಿ ಖಂಡಿಸುವುದಾಗಿ ಹೇಳಿದ ಅವರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಇವರನ್ನು ಕೂಡಲೇ ಅಮಾನತ್ತು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಸಂದೀಪ ಕುರಣೆ, ರಾಜು ಕಾಂಬಳೆ, ಮಹಾವೀರ ಕಾಂಬಳೆ, ಪರಶುರಾಮ ಕಾಂಬಳೆ, ರಾಮಚಂದ್ರಕುರಣೆ, ಸುನೀಲ ಕಾಂಬಳೆ, ಹೌಸಾಬಾಯಿ ಕಾಂಬಳೆ, ನಿಖಿತಾಕುರಣೆ, ರೋಷನ ಕಾಂಬಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕೋಟ್:

1] ಸಂತೋಷ ಕಾಂಬಳೆ, ಸಿಡಿಪಿಒ ರಾಯಬಾಗ: "ಜಲಾಲಪೂರ ಗ್ರಾಮದ ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರ ನಂ.2 ರ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ."