ದಲಿತ ಬಾಲಕಿಯ ಅತ್ಯಾಚಾರ ಕೋಲೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಯಲಬುರ್ಗಾ: ಇತ್ತಿಚೀಗೆ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡು ಅತ್ಯಾಚಾರ ಮಾಡಿ ಕೋಲೆ ಮಾಡಲಾಗುತ್ತಿದೆ ಇದರಿಂದ ದಲಿತರು ನೆಮ್ಮದಿಯಿಂದ ಬದುಕಲು ಸಾದ್ಯವಾಗುತ್ತಿಲ್ಲಾ ಎಂದು ತಾಪಂ ಸ್ಥಾಯಿ ಸಮಿತಿ ಅದ್ಯಕ್ಷ ರುದ್ರಪ್ಪ ಮರಕಟ್ ಹೇಳಿದರು,

ರೇಣುಕಾ ಮಾದರ ಹತ್ಯಾಚಾರ ಕೊಲೆ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ದಲಿತ ಹೆಣ್ಣು ಮಕ್ಕಳೆಂದರೆ ಅತ್ಯಂತ ಅಸಡ್ಡೆಯಾಗಿ ಕಾಣಲಾಗುತ್ತಿದೆ ಇದರಿಂದ ನಮ್ಮ ಸಮುದಾಯದ ಮಹಿಳೆಯರು ಮಕ್ಕಳು ಮನೆಯಿಂದ ಹೊರಗಡೆ ಹೋದರೆ ಮರಳಿ ಸುರಕ್ಷಿತವಾಗಿ ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇಲ್ಲದಂತಾಗಿದೆ ಇಂತಹ ಕಾಮುಕರಿಗೆ ಕಾನೂನಿನ ಭಯವಿಲ್ಲಾ ರೇಣುಕಾ ಮಾದರ ವಿಷಯದಲ್ಲಿ ಪೋಲಿಸ್ ಇಲಾಖೆಯ ಬೇಜವಾಬ್ದಾರಿ ಕಂಡು ಬರುತ್ತಿದ್ದು ಅಲ್ಲಿ ಪೋಲಿಸ್ ಇಲಾಖೆಯ ಪಿಎಸ್ಐ ಹಾಗೂ ಸಿಪಿಐ ಅವರನ್ನು ಕಾಯಂ ಅಮಾನತ್ತು ಮಾಡಬೇಕು ಹಾಗೂ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದರು.

ಡಿಎಸ್ಎಸ್ ಅಂಬೇಡ್ಕರ್ವಾದದ ಜಿಲ್ಲಾ ಸಂಚಾಲಕ ಪುಟ್ಟರಾಜ ಪೂಜಾರ ಮಾತನಾಡಿ ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಾಗ ಯಾವ ಸಮುದಾಯದವರು ಅದನ್ನು ವಿರೋಧಿಸುವದಿಲ್ಲಾ ಇದೊಂದು ಘೋರ ದುರಂತವಾಗಿದೆ ರೇಣುಕಾಳನ್ನು ಅಪಹರಿಸಿ ಹತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ದೂರು ನೀಡಲು ಹೋದ ಪಾಲಕರ ಮೇಲೆ ದೂರು ದಾಖಲಿಸಿಕೊಳ್ಳುವದಾಗಿ ಅಲ್ಲಿಯ ಪಿಎಸ್ಐ ದೌರ್ಜನ್ಯ ಮಾಡಿದ್ದಾನೆ ಅಷ್ಟೆ ಅಲ್ಲದೆ ಸ್ವಲ್ಪ ದಿನಗಳ ನಂತರ ಮತ್ತೆ ದೂರು ನೀಡಲು ಹೋದರೆ ಅಲ್ಲಿಯ ಸಿಪಿಐ ಆರೋಪಿಗಳ ಜೊತೆ ಪೋಲಿಸ್ ಠಾಣೆಯಲ್ಲೆ ಮಾತನಾಡುತ್ತಾ ಕುಳಿತಿರುವದನ್ನು ನೋಡಿದರೆ ಇದಕ್ಕೆ ಪೋಲಿಸರ ಕುಮ್ಮಕ್ಕು ಇದೆ ಅವರಿಂದ ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲಾ ಮೊದಲು ಅವರಿಗೆ ಶಿಕ್ಷೆ ಆಗಬೇಕು ಇದನ್ನೇಲ್ಲಾ ನೋಡಿಕೊಂಡು ಸುಮ್ಮನಿರುವ ನಮ್ಮ ರಾಜ್ಯದ ಗೃಹ ಮಂತ್ರಿ ಯಾಕೆ ಬೇಕು ನಮ್ಮ ಮಕ್ಕಳನ್ನು ನೋಡಿದರೆ ನಮಗೆ ಅವರನ್ನು ಕಾಪಾಡುವದು ಹೇಗೆ ಎಲ್ಲಿ ಕಷ್ಟ ಪಟ್ಟು ಬೆಳೆಸಿದ ಮಕ್ಕಳನ್ನು ಯಾರು ಕೊಲೆ ಮಾಡುತ್ತಾರೋ ಎನ್ನುವ ಆತಂಕ ಪಾಲಕರಲ್ಲಿ ಕಾಡುತ್ತಿದೆ ಆದ್ದರಿಂದ ಅಫರಾದಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ದಲಿತ ಸಂಘಟನೆಗಳು ಒಗ್ಗೂಡಿಕೊಂಡು ರಾಜ್ಯಾದ್ಯಂತ ಉಘ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು,

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಡಿ ಕೆ ಪರಶುರಾಮ ಛಲವಾದಿ, ಸುರೇಶ ನಡುಲಮನಿ, ಯಲ್ಲಪ್ಪ ನಾಯಕ, ಶಶೀಧರ ಛಲವಾದಿ, ಯಲ್ಲಪ್ಪ ಹಂದ್ರಾಳ, ನಾಗರಾಜ ತಲ್ಲೂರು, ಶಿವಾನಂದ ಬಣಕಾರ, ರಾಜಪ್ಪ ಹಗೇದಾಳ, ಎಂ ಸಿದ್ದಪ್ಪ, ಹನುಮಂತಪ್ಪ ಕೆಂಪಳ್ಳಿ, ಸೇರಿದಂತೆ ಅನೇಕರು ಹಾಜರಿದ್ದರು.