ತಮಿಳು ಚಿತ್ರನಟ ಕಮಲಹಾಸನ್ ಹೇಳಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ
Protest against controversial statement made by Tamil actor Kamal Haasan
ತಮಿಳು ಚಿತ್ರನಟ ಕಮಲಹಾಸನ್ ಹೇಳಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ
ಬಳ್ಳಾರಿ 04: ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ತಮಳು ನಟ ಕಮಲಹಾಸನ್ ರವರು ಹೇಳಿರುವ ಕನ್ನಡದ ಬಗ್ಗೆ ಅವಹೇಳನಾಕಾರಿ ಹೇಳಿಕೆಗೆ ಇಲ್ಲಿಯವರೆಗೆ ಯಾವುದೇ ರೀತಿಯಾದ ಕ್ಷಮೆಯಾಚಿಸದೆ ಉದ್ಘಟತನವನ್ನು ತೋರಿಸಿರುತ್ತಾರೆ. ಆದ ಕಾರಣ ಜಿಲ್ಲಾ ಅಧ್ಯಕ್ಷರಾದ ಹುಲುಗಪ್ಪ ರವರು ಮಾತನಾಡಿ ಇಂದು ಇಡೀ ಕರ್ನಾಟಕದಲ್ಲಿ ಚಿತ್ರ ಪ್ರದಶನಕ್ಕೆ ಸಜ್ಜಾಗಿರುತ್ತದೆ. ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಯವ ಚಿತ್ರಮಂದಿರದಲ್ಲಿ ಚಿತ್ರ ಪ್ರದಶನಕ್ಕೆ ಅವಕಾಶ ಇಲ್ಲ ಹೀಗೆಂದು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಒಂದು ವೇಳೆ ಸಿನಿಮಾ ರೀಲೀಜ್ಗೆ ಅವಕಾಶ ಮಾಡಿಕೊಟ್ಟಲ್ಲಿ ಕನ್ನಡಿಗರ ಕಿಚ್ಚು ಹೆಚ್ಚಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ರಾಜ್ಯ ಸಂಚಾಲಕರು ಅದ್ದಿಗೇರಿ ರಾಮಣ್ಣ ರವರು ಮಾತನಾಡಿ,ಚಿತ್ರಮಂದಿರವನ್ನು ಪುಡಿಪುಡಿ ಮಾಡಲಾಗುತ್ತದೆ ಮತ್ತು ಬ್ಯಾನರ್ಗಳನ್ನು ಹರಿದು ಹಾಕಲಾಗುತ್ತದೆ. ಇದಕ್ಕೆ ದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು ನಗರದ ಗಾಂಧಿನಗರದ ಪಕ್ಕದಲ್ಲಿರುವ ಫುಟಬಾಲ್ ಕ್ರೀಡಾಂಗಣದಿಂದ ರಾಯಲ್ ವೃತ್ತದಲ್ಲಿ ಕಮಲ ಹಾಸನ್ ಚಿತ್ರನಟರ ಭಾವಚಿತ್ರ ಹಾಗೂ ಆಕೃತಿಯನ್ನು ದಹನ ಮಾಡಿದರು. ನಂತರ ಇದೇ ವೇಳೆಯಲ್ಲಿ ಡಿ.ಸಿ. ಕಛೇರಿಯವರೆಗೆ ಪ್ರತಿಭಟನೆ ಮಾಡುತ್ತಾ ಹೋಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅದ್ದಿಗೇರಿ ರಾಮಣ್ಣ ಹುಲಗಪ್ಪ ಅಸುಂಡಿ ಸೂರಿ ವೆಂಕಟೇಶ್ ತಿಮ್ಮಪ್ಪ ರಮೇಶ್ ಆನಂದ್ ದುರ್ಗಾ ಪ್ರಸಾದ್ ಸಿದ್ದೇಶ್, ರಕ್ಷಣಾ ವೇದಿಕೆಯ ಸದಸ್ಯರು ವಿವಿಧ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 