ವೃತ್ತ ನಿರ್ಮಾಣಕ್ಕೆ ಧರಣಿ, ಭೋವಿ ಸಮಾಜದ ಮುಖಂಡರನ್ನು ಬಂಧಸಿ ಬಿಡುಗಡೆ
Protest against construction of circle, Bhovi community leaders arrested and released
ಲೋಕದರ್ಶನ ವರದಿ
ಮಹಾಲಿಂಗಪುರ 21 : ವೃತ್ತ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದ ಭೋವಿ ಸಮಾಜದ ಕೆಲವು ವ್ಯಕ್ತಿಗಳನ್ನು ರಬಕವಿ/ ಬನಹಟ್ಟಿ ತಾಲೂಕಿನ ವೃತ್ತ ನೀರೀಕ್ಷಕರಾದ ಆರ್. ಆರ್. ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳು ಬಂಧಿಸಿ ಬಿಡುಗಡೆಗೊಳಿಸಿದರು.
ಪೋಲೀಸ್ ಸ್ಟೇಷನ್ ಎದುರಿಗೆ ಜತ್ ಜಾಂಬೋಟಿ ಅಂತರ್ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸ್ವಾತಂತ್ರ್ಯ ಯೋಧ ವಡ್ಡರ ಯಲ್ಲನ್ನ ವೃತ್ತ ನಿರ್ಮಾಣ ಮಾಡಬೇಕೆಂದು ಪುರಸಭೆಯಲ್ಲಿ ಭೋವಿ ಸಮಾಜದ ಅರ್ಜುನ್ ಬಂಡಿವಡ್ಡರ ನೇತೃತ್ವದಲ್ಲಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ 8/10 ದಿವಸಗಳಿಂದ ಧರಣಿ ಸತ್ಯಾಗ್ರಹ ನಡೆದಿತ್ತು.
ಈ ಸತ್ಯಾಗ್ರಹಕ್ಕೆ ಮಾನ್ಯತೆ ನೀಡಿ ಕೆಲ ದಿನಗಳ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಖುದ್ದು ಸ್ಥಳ ಪರೀಶೀಲನೆ ನಡೆಸಿ, ಸದರಿ ಜಾಗೆಯಲ್ಲಿ ವೃತ್ತ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದರಿತು, ಪೋಲೀಸ್ ಇಲಾಖೆ, ತಮ್ಮ ಅಧಿಕಾರಿಗಳು ಮತ್ತು ಕೆಲವು ಊರ ಪ್ರಮುಖರ ಜೊತೆಯಲ್ಲಿ ವೃತ್ತ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದರು.
ನಂತರದ ಬೆಳವಣಿಗೆಗಳಲ್ಲಿ ಧರಣಿ ನಿರತರಿಗೆ ವೃತ್ತ ನಿರ್ಮಾಣಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ, ಇದು ಕಾನೂನು ಬಾಹಿರ ಎಂಬ ಅಂಶವನ್ನು ಮನವರಿಕೆ ಮಾಡಿ, ಬೇರೆಡೆ ಕಾನೂನು ರೀತಿಯಲ್ಲಿ ವೃತ್ತ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದಿದ್ದ ಅಧಿಕಾರಿಗಳ ಮಾತಿಗೆ ಕೆಲವು ಊರ ಪ್ರಮುಖರು ಸಹಿತ ಸಮ್ಮತಿ ಸೂಚಿಸಿದ್ದರು.
ಏನಿದ್ದರೂ ಕಾನೂನು ರೀತಿಯಲ್ಲಿಯೇ ವರ್ತಿಸಬೇಕು. ನಾವು ವೃತ್ತ ನಿರ್ಮಾಣಕ್ಕೆ ಯಾವುದೇ ಅರ್ಜಿ ಅಥವಾ ಪರವಾಣಿಗೆ ಪಡೆದಿಲ್ಲ. ಕಾನೂನು ವಿರುದ್ಧವಾಗಿ ನಾವು ನಡೆದುಕ್ಕೊಳ್ಳುವುದು ಬೇಡ, ಯೋಗ್ಯ ಸ್ಥಳದಲ್ಲಿ ವೃತ್ತ ನಿರ್ಮಿಸೋಣವೆಂದು ಕಿವಿ ಮಾತು ಹೇಳಿದರು ಇವರು ಕೇಳಿಲ್ಲ, ಈಗ ನಾವು ಅಸಹಾಯಕರು ಎಂದು ಮುಖಂಡರೊಬ್ಬರು ತಿಳಿಸಿದರು.
ನಾಜುಕು ಅಂಶ ಒಳಗೊಂಡ ಈ ಬೆಳವಣಿಗೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಸುಖಾಂತ್ಯಗೊಳಿಸಿ ಪುರಸಭೆ ಆವರಣವನ್ನು ತೆರುವುಗೊಳಿಸಿರುವ ಪೋಲಿಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲ್ಯಾಘನೆ ವ್ಯಕ್ತವಾಗಿದೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 