ಬೆಳಗಾವಿ : ನಿಲಜಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಶಿಂದೊಳ್ಳಿ ಮಹಾಲಕ್ಷ್ಮೀಪುರಣಂ ನಗರ ಮುಖ್ಯ ರಸ್ತೆ ಕಾಮಗಾರಿಯ ವಿಳಂಬ ಖಂಡಿಸಿ ಗುರುವಾರ ಕನರ್ಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಮನವಿ ಸಲ್ಲಿಸಿದರು.
ಗುರುವಾರ ಜಿಪಂ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಈ ಕುರಿತು ಮನವಿಯೊಂದನ್ನು ಸಲ್ಲಿಸಿ, ರಸ್ತೆ ದುರಸ್ತಿ ಮತ್ತು ನಿಮರ್ಾಣ ಅಭಿವೃದ್ಧಿ ಕಾಮಗಾರಿಯಲ್ಲಿ ಬಹಳಷ್ಟು ವಿಳಂಬವಾಗುವುದರಿಂದ ಸಾಕಷ್ಟು ರಸ್ತೆ ಅಪಘಾತ ಮತ್ತು ದುರ್ಘಟನೆಗಳು ನಡೆದು ದಿನನಿತ್ಯ ಸಂಚರಿಸುವರಿಗೆ ಪ್ರಾಣಕ್ಕೆ ಕುತ್ತು ತರುತ್ತದೆ. ಈ ನಿಲಜಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಶಿಂದೊಳ್ಳಿ ಮಹಾಲಕ್ಷ್ಮೀಪುರಣಂ ನಗರ ಮುಖ್ಯ ರಸ್ತೆ ಕಾಮಗಾರಿಯು ಕಳೆದ 6 ರಿಂದ 7 ತಿಂಗಳಗಳಿಂದ ಜಾರಿಯಲ್ಲಿದೆ. ಬೇಗನೆ ಕಾಮಗಾರಿ ಮುಗಿಯದ ಕಾರಣದಿಂದ ದಿನನಿತ್ಯ ಸಂಚರಿಸುವ ರಹವಾಸಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕಾಮಗಾರಿಯನ್ನು ಶೀಘ್ರವಾಗಿ ಕಡಿಮೆ ಅವದಿಯಲ್ಲಿ ಮುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಪ್ರಕಾಶ ಚಿಪ್ಪಲಕಟ್ಟಿ, ವಾಜಿದ್ ಹಿರೇಕೊಡಿ, ಆನಂದ ಬಡಿಗೇರ ಸೇರಿದಂತೆ ಮತ್ತಿತರರು ಹಾಜರಿದ್ದರು.