ವಿದ್ಯಾಥರ್ಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಹೂವಿನಹಿಪ್ಪರಗಿ 18:  ರಾಜ್ಯದ ಬಡ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡದಿರುವ ರಾಜ್ಯ ಸರಕಾರದ ವಿದ್ಯಾಥರ್ಿ ವಿರೋಧಿ ನೀತಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪಟ್ಟಣದಲ್ಲಿ ಬುಧುವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

   ಪಟ್ಟಣದ ದೇವರಹಿಪ್ಪರಗಿ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾಥರ್ಿಗಳು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಎಲ್ಲ ಸಮುದಾಯದ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕೆಂದು ಆಗ್ರಹಿಸಿ ರಾಜ್ಯದ ಕರೆಯ ಮೇರೆಗೆ ಪ್ರತಿಭಟನಾ ರ್ಯಾಲಿ ಮುಖಾಂತರ ಸ್ಥಳೀಯ ಪರಮಾನಂದ ವೃತ್ತದಲ್ಲಿ ಆಗಮಿಸಿದ ಸಾಂಕೇತಿಕ ಧರಣಿ ನಡೆಸಿದರು.

    ಈ ಸಂದರ್ಭದಲ್ಲಿ ತಾಲೂಕ ಸಂಚಾಲಕ ಶಿವಾನಂದ ಬಂಡಿವಡ್ಡರ, ಬಸವನಬಾಗೇವಾಡಿ ನಗರ ಕಾರ್ಯದಶರ್ಿ ಸುರೇಶ ಜಂಗೋಣಿ ಮಾತನಾಡಿ ರಾಜ್ಯ ಸರಕಾರ 2018-19ನೇ ಸಾಲಿನ ಬಜೆಟ್ನಲ್ಲಿ ಎಸ್ಸಿ, ಎಸ್ಟಿ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವದು ಎಂದು ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದ್ದು ಆದರೇ ಗ್ರಾಮೀಣ ಪ್ರದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಪಟ್ಟಣ-ನಗರ ಪ್ರದೇಶಗಳಿಗೆ ಬಡ ಪ್ರತಿಭಾನ್ವಿತ ವಿದ್ಯಾಥರ್ಿಗಳು ಅಧ್ಯಯನಕ್ಕೆ ಆಗಮಿಸುತ್ತಿದ್ದು ವಿದ್ಯಾಥರ್ಿಗಳಿಗೆ ಆಥರ್ಿಕ ಹೊರೆ ಉಂಟಾಗುತ್ತದೆ ಕೂಡಲೇ ರಾಜ್ಯ ಸರಕಾರ ಎಲ್ಲ ಸಮುದಾಯದ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.

ಕಳೆದ ಎರಡು ತಿಂಗಳಿಂದ ವಿದ್ಯಾಥರ್ಿ ಸಮುದಾಯ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ಆದರೇ ರಾಜ್ಯ ಸರಕಾರ ಮಾತ್ರ ವಿದ್ಯಾಥರ್ಿ ವಿರೋಧಿ ನೀತಿಯನ್ನು ಕೈಬಿಡುತ್ತಿಲ್ಲ ಅಲ್ಲದೆ ಶಿಕ್ಷಣ ಕ್ಷೇತ್ರವನ್ನು ಲಾಭದ ಕುರಿತಾಗಿ ಸರಕಾರ ಯೋಚನೆ ಮಾಡಬಾರದು, ಶಿಕ್ಷಣ ಕಲಿಯಲು ಗ್ರಾಮೀಣ ಪ್ರದೇಶ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುವದು ರಾಜ್ಯ ಸರಕಾರದ ಆದ್ಯ ಕರ್ತವ್ಯವಾಗಿದ್ದು ರಾಜ್ಯ ಸರಕಾರ ತನ್ನ ಕಠಿಣ ನಿಲುವಿನಿಂದ ಹೊರಬಾರದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವದು ಎಂದು ಎಚ್ಚರಿಸಿದರು.

ಪ್ರತಿಭಟನಾ ರ್ಯಾಲಿಯಲ್ಲಿ ಶಿವಲಿಂಗಯ್ಯ ಮಠಪತಿ, ರವಿಕುಮಾರ ನಾಲತವಾಡ, ಕರೆಪ್ಪ ಮಾದರ, ಯಲ್ಲಪ್ಪ ರತ್ನಾಳ, ಬಾಲು ಅಪ್ತಾಗಿರಿ, ಅಮೀತ ರಾಠೋಡ, ಮುತ್ತು ಹಾಲಿಹಾಳ, ಅಕ್ಷತಾ ಚಲವಾದಿ, ಅಶ್ವಿನಿ ಗೌಡರ, ನಿಂಗಮ್ಮ ಯಾಳವಾರ, ಕಾಶೀಬಾಯಿ ಗಾಳಿ, ಶಿಲ್ಪಾ ಜರೇನಾಳ, ಮಡಿವಾಳಮ್ಮ ಢವಳಗಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು, ಉಪತಹಶೀಲದಾರ ಶ್ರೀನಿವಾಸ ಕಲಾಲ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು