ಲೋಕದರ್ಶನ ವರದಿ
ಬೆಳಗಾವಿ 14: "ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕನರ್ಾಟಕದ ಗಡಿಭಾಗದಲ್ಲಿಯ ಭಾಷಾ ಸೌಹಾರ್ದಕ್ಕೆ ಧಕ್ಕೆಯಾಗುವ ಚಟುವಟಿಕೆಗಳು ನಡೆದಿದ್ದು ಮಹಾರಾಷ್ಟ್ರದಿಂದ ಬರುವ ನಾಯಕರು ಹಾಗೂ ಸಾಹಿತಿಗಳು ಬೆಳಗಾವಿಯ ನೆಲದಲ್ಲಿಯೇ ನಿಂತು ಕನರ್ಾಟಕ ಹಾಗೂ ಕನ್ನಡಿಗರ ವಿರುದ್ಧ ಬೆಂಕಿಯಂಥಹ ಭಾಷೆಯನ್ನು ಬಳಸುತ್ತಿದ್ದಾರೆ. ಇಂತಹ ನಾಯಕರು ಹಾಗೂ ಸಾಹಿತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.
ಮರಾಠಿ ಸಾಹಿತ್ಯ ಸಮ್ಮೇಳನಗಳ ನೆಪದಲ್ಲಿ ಗಡಿ ವಿವಾದವನ್ನು ಕೆದುಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರದ ನಾಯಕರು ಕನರ್ಾಟಕಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಬೇಕು. ಬೆಳಗಾವಿ ಕನ್ನಡಿಗರಿಗೆ ಹಾಗೂ ಇಲ್ಲಿಯ ಜಿಲ್ಲಾಡಳಿತಕ್ಕೆ ಬೆನ್ನಲುಬಾಗಿ ರಾಜ್ಯ ಸರಕಾರ ಗಟ್ಟಿಯಾಗಿ ನಿಲ್ಲಬೇಕು. ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಬೆಳಗಾವಿಗೆ ಭೆಟ್ಟಿ ನೀಡಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು ಸೋಮವಾರ ರಾಜ್ಯ ಸರಕಾರವನ್ನು ಒತ್ತಾಯಿಸಿತ್ತಲ್ಲದೇ ಮಹಾರಾಷ್ಟ್ರ ಶಿವಸೇನೆ ಸರಕಾರದ ಹಾಗೂ ನಾಯಕರ ವಿರುದ್ಧ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧಿಕ್ಕಾರ ಕೂಗಿ ಪ್ರತಿಭಟಿಸಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಉತ್ತರ ವಲಯದ ಐಜಿಪಿ ರಾಘವೇಂದರ ಸುಹಾಸ ಹಾಗೂ ಡಿಸಿಪಿ ಸೀಮಾ ಲಾಟ್ಕರ್ ಅವರೊಂದಿಗೆ ಚಚರ್ೆ ನಡೆಸಿದ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರ ಪದಾಧಿಕಾರಿಗಳು, ಮರಾಠಿ ಸಾಹಿತ್ಯ ಸಮ್ಮೇಳನಗಳಿಗೆ ಅಹ್ವಾನಿಸಲಾಗುತ್ತಿರುವ ಮಹಾರಾಷ್ಟ್ರದ ನಾಯಕರು ಸಾಹಿತಿಗಳೇ ಅಲ್ಲ. ನಿನ್ನೆ ಖಾನಾಪೂರದ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಬಂದಿದ್ದ ಶ್ರೀಪಾಲ ಸಬ್ನಿಸ್ ಅವರು ಮರಾಠಿ ಪತ್ರಕರ್ತರ ಪತ್ರಿಕಾ ಪರಿಷತ್ನಲ್ಲಿ ಬಳಸಿದ ಭಾಷೆ ಪ್ರಚೋದನಾತ್ಮಕವಾಗಿದ್ದು ಇಂದಿನ ಮರಾಠಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಂಥವರ ವಿರುದ್ಧ ಪ್ರಕರಣ ದಾಖಲಿಸಬೇಕು. ನಿಪ್ಪಾಣಿಯಲ್ಲಿ ನಡೆಯಲಿರುವ ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಜನೇವರಿ 17 ರಂದು ಎಂ.ಇ.ಎಸ್. ಆಚರಿಸುವ ಹುತಾತ್ಮ ದಿನದಂದು ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದು ಗಡಿ ವಿವಾದವನ್ನು ಕೆದಕುವ ಹಾಗೂ ಕನ್ನಡಿಗರನ್ನು ಪ್ರಚೋದಿಸುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾ ಪೋಲಿಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಬೇಕೆಂದು ಒತ್ತಾಯಿಸಿದರು.
ಕ್ರಿಯಾ ಸಮಿತಿಯ ಆತಂಕ ಮತ್ತು ಕಳವಳಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಐಜಿಪಿ ಸುಹಾಸ ಅವರು ಗಡಿ ಭಾಗದಲ್ಲಿಯ ಚಟುವಟಿಕೆಯ ಸಂಬಂಧ ಪೋಲಿಸರು ಕೈಕೊಂಡ ಕ್ರಮಗಳ ಹಾಗೂ ಮುಂದೆ ಕೈಕೊಳ್ಳಲಿರುವ ಕ್ರಮಗಳ ಬಗ್ಗೆ ವಿವರಿಸಿದರು. ಗೃಹ ಸಚಿವರು ಬೆಳಗಾವಿಗೆ ಭೆಟ್ಟಿ ನೀಡಬೇಕೆಂಬ ಕ್ರಿಯಾ ಸಮಿತಿಯ ಒತ್ತಾಯದ ಕುರಿತು. ಶೀಘ್ರವೇ ಗೃಹ ಸಚಿವರ ಗಮನಕ್ಕೆ ತರಲಾಗುವದೆಂದು ಐಜಿಪಿ ಭರವಸೆ ನೀಡಿದರು.
ಕ್ರಿಯಾ ಸಮಿತಿಯ ಇಂದಿನ ಪ್ರತಿಭಟನೆಯಲ್ಲಿ ಹಾಗೂ ಚಚರ್ೆಯಲ್ಲಿ ಎಂ.ಜಿ. ಮಕಾನದಾರ, ಬಿ.ತಿಪ್ಪೇಸ್ವಾಮಿ, ಶಿವಪ್ಪ ಶಮರಂತ, ಸಾಗರ ಬೋರಗಲ್ಲ, ಕಸ್ತೂರಿ ಭಾವಿ, ಕುಂದರಗಿ, ಆನಂದ ಹುಳಬತ್ತೆ, ಮಂಜುನಾಥ ಪಾಟೀಲ, ಓಂಕಾರ ಮೊಳೆ, ಪ್ರೇಮಾ, ವೀರೇಂದ್ರ ಗೋಬರಿ ಮುಂತಾದವರು ಭಾಗವಹಿಸಿದ್ದರು.