ಬೆಳಗಾವಿ : ನಗರದ ಪಿರನವಾಡಿ ನಾಕಾ ಬಳಿಯಲ್ಲಿ ಕ್ರಾಂತಿವೀರ ಸಂಗೊಳಿ ರಾಯಣ್ಣ ಪ್ರತಿಮೆವನ್ನು ಪ್ರತಿಷ್ಠಾನ ಮಾಡಬೇಕು ಎಂದು ಆಗ್ರಹಿಸಿ ರಾಯಣ್ಣ ಅಭಿಮಾನಿಗಳು ಹಾಗೂ ಕುರುಬ ಜನಾಂಗದ ನೂರಾರು ನಾಗರಿಕರು ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದರು.
ಬುಧವಾರ ದಿನದಂದು ನಗರದ ಚನ್ನಮ್ಮ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ನಾಗರಿಕರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ರಾಜ್ಯದ ಕೆಲವು ಜಿಲ್ಲೆಯಗಳಲ್ಲಿ ಈಗಾಗಲೇ ಕ್ರಾಂತಿವೀರ ರಾಯಣ್ಣ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ ಭಕ್ತ ರಾಯಣ್ಣ ಅವರ ಪ್ರತಿಮೆಯನ್ನು ನಗರದಲ್ಲಿ ಪ್ರತಿಷ್ಠಾಪನೆ ಬಗ್ಗೆ ಪ್ರಯತ್ನ ಸಹ ಮಾಡದೆ ಇರುವದು ದರಂತವಾಗಿದೆ.
ಈ ಹಿನ್ನೆಲೆಯಲ್ಲಿ ರಾಯಣ್ಣ ಮೂತರ್ಿಯನ್ನು ಪ್ರತಿಷ್ಠಾಪಿಸಬೇಕು ಎಂದು ಕುರುಬರ ಸಮಾಜ ಒತ್ತಾಯಿಸುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.
ಇಂದಿನ ಪ್ರತಿಭಟನೆಯಲ್ಲಿ ನಾಗರಾಜ ಶಾಹಪೂರ, ಮಾಂಹಾತೇಶ ಅನಗೋಳ, ಬಸ್ಸು ಕತೆಗಾರ, ಪಕಿರಪ್ಪಾ ಹೆಗಡೆ, ಸಾಗರ ಉಮನಗಟ್ಟಿ, ಅಪ್ಪನ್ನಾ ಮುನವಳಿ ಸೇರಿದಂತೆ ರಾಯಣ್ಣ ಅಭಿಮಾನಿಗಳು ಮತ್ತು ಅನೇಕ ಕುರುಬ ಜನಾಂಗದ ನಾಗರಿಕರು ಉಪಸ್ಥಿತರಿದ್ದರು.