ಸಿಎಎ, ಎನ್ಆರ್ ಸಿ ವಿರೋಧಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಅಥಣಿ 30: ಪೌರತ್ವ ತಿದ್ದುಪಡಿ (ಸಿಎಎ, ಎನ್ಆರ್ಸಿ)  ಕಾಯ್ದೆಯನ್ನು ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ  ಕರೆ ನೀಡಿದ್ದ ಭಾರತದ ಬಂದ್ ಗೆ ತಾಲೂಕಿನ ವಿವಿಧ ಸಂಘಟನೆಗಳಿಂದ ಭಾರಿ ಬೆಂಬಲ ವ್ಯಕ್ತವಾಯಿತು ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ಯುನೈಟೆಡ್ ವೆಲ್ಫೇರ್ ಕಮಿಟಿ ಅಥಣಿ, ದಲಿತ ಕ್ರಾಂತಿ ಸೇನೆ ಅಥಣಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಥಣಿ, ಜಮಿಯತ್ ಉಲೆಮಾ ಕಮಿಟಿ ಅಥಣಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಅಥಣಿ, ಅಂಜುಮನ್ ಇಸ್ಲಾಂ ಕಮಿಟಿ ಅಥಣಿ, ಕರ್ನಾಟಕ ರಕ್ಷಣಾ ವೇದಿಕೆ ಅಥಣಿ, ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ವಿವಿಧ ಸಮಾಜಗಳ ಮುಖಂಡರುಗಳು ಧರ್ಮಗುರುಗಳು ಭಾಗವಹಿಸಿ ಸುಮಾರು 2 ತಾಸಗಳವರೆಗೆ ಬಹಿರಂಗ ಸಭೆ ಮಾಡಿದರು. ಈ ಸಭೆಯಲ್ಲಿ  ಕೇಂದ್ರಸರ್ಕಾರ, ಮೋದಿ ಹಾಗೂ ಶಾ, ವಿರುದ್ಧ ಭಾರಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಮುಸ್ಲಿಂ  ಧರ್ಮಗುರುಗಳಾದ  ಮುಫ್ತಿ ಹಬೀಬುಲ್ಲಾ ಕಾಶ್ಮೀ , ಮೌಲಾನಾ ಅಬ್ದುಲ ಸಲಾಂ, ಮೌಲಾನಾ ಉಸ್ಮಾನ್, ಮೌಲಾನಾ ಇಮ್ತಿಯಾಜ, ಪ್ರತಿಭಟನೆಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಮಾತನಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವೆಲ್ಲ ಸಹೋದರತ್ವದಿಂದ ಬದುಕು ಸಾಗಿಸುತ್ತಿದ್ದು ಜಾತಿ ಸಂಘರ್ಷ ಹೊತ್ತಿಸುವ ಕಾಯಿದೆ ನಮಗೆ ಬೇಕಾಗಿಲ್ಲ.

ಧರ್ಮದ ಆಧಾರ ಮೇಲೆ ಪೌರ್ವತ ನೀಡಬಾರದು. ನಿಮಗೆ ಮತ ಹಾಕಿ ಅಧಿಕಾರಕ್ಕೆ ತಂದವರ ಪೌರತ್ವವನ್ನೆ ಪ್ರಶ್ನಿಸುವುದು ಯಾವ ನ್ಯಾಯ ಇದು ಭಾರತದ ಸಂವಿಧಾನದ ವಿರುದ್ಧವಾಗಿದೆ. ನಮ್ಮ ದೇಶ ಭಾವಕ್ಯತೆಯ ದೇಶ. ದೇಶದ ಜನರನ್ನು ಸಂಶಯಾಶ್ಪದವಾಗಿ ಕಾಣುವ ಸಿ ಎ ಎ, ಎನ್.ಆರ್ಸಿ. ಮತ್ತು ಎನ್ ಪಿಆರ್, ಜಾರಿಯಾಗಬಾರದು  ಅಗತ್ಯ ಇದ್ದರೆ ದಾಖಲೆ ಆಧಾರಗಳ ಬದಲಾಗಿ ಡಿ.ಎನ್.ಎ.ಆಧಾರಿತವಾಗಿ ಕಾಯ್ದೆ ಜಾರಿ ಮಾಡಲಿ  ಎಂದು ಹೇಳಿದರು. 

ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಿದ್ದಂತೆ, ದೇಶದಲ್ಲಿ ಇರುವ ಮೂಲ ಸೌಲಭ್ಯಗಳ ಕೊರತೆ ಮತ್ತು ಹಸಿವು, ಬಡತನ, ಹಾಗೂ ನಿರುದ್ಯೋಗ ತೊಲಗಿಸುವ ಕಾಯ್ದೆ ನಮಗೆ ಅಗತ್ಯವಾಗಿದೆ, ಜನಪರ ಆಥರ್ಿಕ ನೀತಿಯ ಅಗತ್ಯ ಇದೆ ಕುಸಿಯುತ್ತಿರುವ ಜಿಡಿಪಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯ ಇದೆ ಇಂಥ ಕಾಯ್ದೆಗಳಿಂದ ದೇಶದಲ್ಲಿ ಅಶಾಂತಿ ಅಸ್ಥಿರತೆ ಉಂಟಾಗಿ ಭಾರತದ ಪ್ರಗತಿ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಿದರು. ವಕೀಲರ ಸಂಘ ಅಥಣಿ, ಕೋರ್ಟ  ಕಲಾಪವನ್ನು ಬೈಕ್ವಾಟ್ ಮಾಡಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿಸಿ ನಡೆದ ಪ್ರತಿಭಟನೆಗೆ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಭಾರತ್ ಬಂದ್ ಗೆ ಬೆಂಬಲ ಸೂಚಿಸಿದರು. 

ಮುಖಂಡರುಗಳಾದ ಗಜಾನನ ಮಂಗಸೂಳಿ, ಮುಸ್ಲಿಂ ಸಂಘಟನೆಯಿಂದ ಅಯಾಜ್ ಮಾಸ್ಟರ್, ಅಸ್ಲಮ ನಾಲಬಂದ, ರಸೂಲಸಾಬ ನಂದಗಾಂವ, ನಸರುದ್ದಿನ್ ಮಾಸ್ಟರ್, ವಕೀಲರ ಸಂಘದಿಂದ ಸುನಿಲ್ ಸಂಕ ವಕೀಲರು, ಸುನಿಲ್ ವಾಘಮೋರೆ ವಕೀಲರು, ಮುಜಾಹೀದ ವಕೀಲರು, ರಾವ್ ವಕೀಲರು, ಸನದಿ ವಕೀಲರು, ಕರವೇಯಿಂದ ಬಸನಗೌಡ ಪಾಟೀಲ್,  ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ರಾಜೇಂದ್ರ ಐಹೊಳೆ, ದಲಿತ ಸಂಘಟನೆಗಳಿಂದ ಸಿದ್ದಾರ್ಥ ಸಿಂಗೆ, ಸಂಜು ಕಾಂಬಳೆ, ಗೌತಮ್ ಪರಾಂಜಪೆ, ಮಿಥೇಶ ಪಟ್ಟಣ, ಪೌರತ್ವ ಕಾಯ್ದೆ ವಿರುದ್ಧ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಧರ್ಮವಿರೋಧಿ ಜಾತಿವಿರೋಧಿ ಒಟ್ಟಾರೆ ಭಾರತದ ಸಂವಿಧಾನ ವಿರುದ್ಧವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ತಕ್ಷಣ ಜಾರಿಗೆ ಬರುವಂತೆ ಈ ಕಾಯ್ದೆಯನ್ನು ಹಿಂಪಡೆಯಬೇಕು ಅಥವಾ ರದ್ದುಗೊಳಿಸಬೇಕು ಎಂದು ಒಕ್ಕೂರಲಿನಿಂದ ಆಗ್ರಹಿಸಿದರು ಹಾಗೂ ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಕಿಡಿಕಾರಿದರು, ನಂತರ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ ತಾಲೂಕಾ ದಂಡಾಧಿಕಾರಿಗಳಾದ ಎಮ್,ಎನ್, ಬಳಿಗಾರ, ಆಗಮಿಸಿದರು.  

ಪ್ರತಿಭಟನೆಯಲ್ಲಿ ಭಾಗಿಯಾದ ವಿವಿಧ ಸಂಘಟನೆಯವರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ರಮೇಶ ಸಿಂದಗಿ, ಬಾಬು ಖೇಮಲಾಪೂರ, ಇಮ್ರಾನ ಪಟೇಲ್, ಮಂಜು ಹೋಳಿಕಟ್ಟಿ, ಮಹಾಂತೇಶ್ ಬಾಡಗಿ, ಇಮ್ತಿಯಾಜ್ ಹಿಪ್ಪರಗಿ, ಜುಬೇರ್ ಮುಲ್ಲಾ, ರವಿ ಭಡಕಂಬಿ, ಶಬ್ಬೀರ್ ಸಾತಬಚ್ಚೆ, ರಾಜು ಜಮಖಂಡಿಕರ, ಬೀರಪ್ಪ ಯಂಕಚ್ಚಿ, ಗಜಾನನ ಕಾಂಬಳೆ, ಇರ್ಫಾನ್ ತಾಂಬೋಳಿ, ಕಪಿಲ್ ಘಟಕಾಂಬಳೆ, ಇರ್ಫಾನ್  ದ್ರಾಕ್ಷಿ, ಯಾಶೀನ ಧಾರೆ, ಅನಿಲ ಭಜಂತ್ರಿ, ಜುಬೇರ್ ನಾಲಬಂದ, ಸೇರಿದಂತೆ ಇನ್ನೂ ಹಲವಾರು ಸಂಘಟನೆಗಳ ಸದಸ್ಯರು ಮುಖಂಡರುಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಸರ್ವಧರ್ಮದ ಜನ ಉಪಸ್ಥಿತರಿದ್ದರು.