ಬಡ, ಪತ್ರಿಭಾವಂತ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡಲು ಆಗ್ರಹಿಸಿ ಎಬಿವಿಪಿಯಿಂದ ಸಕರ್ಾರದ ವಿರುದ್ದ ಪ್ರತಿಭಟನೆ


ಬಳ್ಳಾರಿ.ಜು.18: ಕಳೆದ ಶೈಕ್ಷಣಿಕ ವರ್ಷದಲ್ಲಿರಾಜ್ಯ ಸಕರ್ಾರದ 2018-19ನೇ ಸಾಲಿನ ವಾಷರ್ಿಕ ಬಜೆಟ್ನಲ್ಲಿ ಎಸ್ಸಿ/ಎಸ್ಟಿ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಇಂದಿನ ರಾಜ್ಯ ಸಕರ್ಾರ ಆ ಯೋಜನೆಯನ್ನು ಜಾರಿಗೋಳಿಸದೆ ಉಳಿದ ವಿದ್ಯಾಥರ್ಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸಕರ್ಾರದ ಈ ವಿದ್ಯಾಥರ್ಿ ವಿರೋಧಿಕ್ರಮವನ್ನು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇರಾಜ್ಯದ ಸಾರಿಗೆ ಸಚಿವರು ಉಚಿತ ಬಸ್ಪಾಸ್ ನೀಡಲಾಗುವುದಿಲ್ಲ ಎಂದು ಹೇಳಿದ ಹೇಳಿಕೆಯನ್ನು ತಿವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೆಕರೆ ನೀಡಿದೆ. ಗ್ರಾಮೀಣ ಭಾಗದ ಬಡ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡುವುದು ಅತಿ ಹೆಚ್ಚು ಶಾಲಾ-ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಉಚಿತ ಬಸ್ಪಾಸ್ ವಿತರಣೆಯಿಂದ ರಾಜ್ಯ ಸಕರ್ಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಬದಲಿಗೆ ವಿದ್ಯಾಥರ್ಿಗಳನ್ನು ಶಾಲಾ-ಕಾಲೆಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. 

ಸಕರ್ಾರ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ರಾಜ್ಯ ಸಕರ್ಾರದ ಗಮನಸೆಳೆದು ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿಕೊಂಡರು. ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಈಗಾಗಲೇ ಉಚಿತ ಬಸ್ಪಾಸ್ಗಾಗಿ ರಾಜ್ಯಾದ್ಯಂತ ಹೋರಾಟವನ್ನು ನಡೆಸಿ, ರಾಜ್ಯದಶಿಕ್ಷಣ, ಹಣಕಾಸು ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು ಇಲ್ಲಿಯವರೆಗೂ ಯಾವುದೇ ಪತ್ರಿಕ್ರಿಯೆಯನ್ನು ನೀಡಿಲ್ಲ. ರಾಜ್ಯಾದ್ಯಂತ ದಿನಾಂಕ 07.06.2018 ರಿಂದ ಬಸ್ಪಾಸ್ಗಳನ್ನು ವಿತರಿಸಲಾಗುತ್ತಿದೆ. ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ವಿದ್ಯಾಥರ್ಿಗಳ ಪ್ರಬಲ ಬೇಡಿಕೆಯಾದ ಉಚಿತ ಬಸ್ಪಾಸ್ ನೀಡಲು ವಿಫಲವಾಗಿರುವ ಕನರ್ಾಟಕರಾಜ್ಯ ಸಕರ್ಾರದ ವಿದ್ಯಾಥರ್ಿ ವಿರೋಧಿ ಧೋರಣೆಯನ್ನು ಖಂಡಿಸಿ ಬಳ್ಳಾರಿಯಲ್ಲಿ ಬುಧವಾರ ಬೃಹತ್ ಹೋರಾಟ ಮಾಡಿದರು.

ರಾಜ್ಯ ಸಕರ್ಾರವುಕೂಡಲೇ ಮದ್ಯ ಪ್ರವೇಶಿಸಿ ರಾಜ್ಯದ ಬಡ, ಪ್ರತಿಭಾವಂತ ವಿದ್ಯಾಥರ್ಿಗಳಿಗಾಗಿ ಈ ಹಿಂದೆ ಕಾಂಗ್ರೇಸ್ ನೇತೃತ್ವ ಸಿದ್ದರಾಮಯ್ಯ ಸಕರ್ಾರದ ಬಜೆಟ್ನಲ್ಲಿ ಘೋಷಿಸಿದಂತೆ ಎಲ್ಲಾ ವಿದ್ಯಾಥರ್ಿಗಳಿಗೆ ಉಚಿತವಾಗಿ ಬಸ್ಪಾಸ್ ನೀಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ. ಈ ಕುರಿತು ನಗರದ ಪ್ರಮುಖ ರಸ್ತೆಗಳಿಂದ ಸಾವಿರಾರು ವಿದ್ಯಾಥರ್ಿಗಳ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ  ಮನವಿ ಪತ್ರ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಯುವರಾಜ್, ಶ್ರೀಕಾಂತ್ ರೆಡ್ಡಿ, ಹೇಮಾರೆಡ್ಡಿ, ಹನುಮಂತ ರೆಡ್ಡಿ, ಹರೀಶ್, ದಿನೇಶ್, ಸೇರಿದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಹಾಗೂ ಸಾಔಇರಾರು ಜನ ವಿದ್ಯಾಥರ್ಿಗಳು ಭಾಗವಹಿಸಿದ್ದರು.