ಲೋಕದರ್ಶನ ವರದಿ
ಕಾಗವಾಡ 12: ರಾಜ್ಯದಲ್ಲಿ ರೈತರ ಪರ ಸರಕಾರ ಇದ್ದರೂ ಕೆಲ ಅಧಿಕಾರಿಗಳಿಂದ ರೈತರ ಮೇಲೆ ಅನ್ಯಾಯವಾಗುತ್ತಿದೆ. ಕೃಷ್ಣಾ ನದಿಯಿಂದ ಐನಾಪುರ ಏತ ನೀರಾವರಿ ಯೋಜನೆ ಮುಖಾಂತರ ಮಳೆಗಾಲದಲ್ಲಿ ಮಾತ್ರ ನೀರು ಪೂರೈಸಿದರು. ಈಗ ಬೆಳೆಗಳು ಬೆಳೆದಿದ್ದು, ಕಳೆದ 20 ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಬೆಳೆಗಳು ಕಮರಿ ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಮಂಗಸೂಳಿ ಗ್ರಾಮದ ರೈತರು ಪ್ರತಿಭಟನೆ ಮಾಡಿದರು.
ಗುರುವಾರ ದಿ. 11ರಂದು ಮಂಗಸೂಳಿ ಗ್ರಾಮದ ಮುಖಂಡರು, ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಇವರ ನೇತೃತ್ವದಲ್ಲಿ ನೂರಾರು ರೈತರು ಒಂದೂಗುಡಿ ಐನಾಪುರ ಏತ ನೀರಾವರಿ ಯೋಜನೆ ಪಂಪಿಂಗ್ ಹೌಸ್ದ ಎದುರು ನೀರಾವರಿ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.
ಮಂಗಸೂಳಿ ಗ್ರಾಮ ಪಂಚಾಯತಿ ಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಪಿಎಲ್ಡಿ ಬ್ಯಾಂಕಿನ ಸದಸ್ಯ ಭರತ ಮಾಳಿ, ಗ್ರಾಪಂ ಸದಸ್ಯರಾದ ಅಮರ್ ಪಾಟೀಲ, ಗೋಪಾಳ ಇನಾಮದಾರ್, ರಾಜು ಭಾನುಶೆ, ರಾವಸಾಬ ಸಮಜಗೆ, ಮಹಾವೀರ ಸಮಜಗೆ, ಸುಭಾಷ ಜಾಧವ್, ಪ್ರಭು ಕಾಂಬಳೆ, ಸುಭಾಷ ಭಜಂತ್ರಿ, ಅಶೋಕ ಶಿಂದೆ ಸೇರಿದಂತೆ ಅನೇಕ ರೈತರು ನೀರಾವರಿ ಇಲಾಖೆವತಿಯಿಂದ ಕಳೆದ 20 ದಿನಗಳಿಂದ ವಿದ್ಯುತ ಪೂರೈಕೆಯಲ್ಲಿ ತೊಂದರೆಯಾಗುತ್ತಿದ್ದರಿಂದ ಯೋಜನೆ ಸ್ಥಗಿತಗೊಳಿಸಿದ್ದೇವೆ ಎಂಬ ಹೇಳಿಕೆ ಇಲಾಖೆಯ ಅಭಿಯಂತರಾದ ಅರುಣ ಯಲಗುದ್ರಿ ಹೇಳುತ್ತಿದ್ದು, ಇದು ಸುಳ್ಳು ಎಂದು ಆರೋಪಿಸಿದರು.
ಮಳೆಗಾಲದಲ್ಲಿ ಮಳೆಯಾಗದೆ ಇದಿದ್ದರಿಂದ ನಾವು ಸಮಸ್ಯೆಯಲ್ಲಿದ್ದೇವೆ. ಸುದೈವದಿಂದ ನೀರಾವರಿ ಯೋಜನೆಯಿದೆ. ಆದರೂ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಿ ಈಗ ಕೊನೆಗೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಮಂಗಸೂಳಿ, ಕೆಂಪವಾಡ, ನವಲಿಹಾಳ, ಮೋಳೆ ಸೇರಿದಂತೆ ಅನೇಕ ಗ್ರಾಮಗಳಲ್ಲಿಯ ಸಾವಿರಾರು ರೈತರ ಕೋಟಿಗಳ ಬೆಲೆಬಾಳುವ ಬೆಳೆಗಳು ಕೈಗೆ ಬರುವ ಹಂತದಲ್ಲಿದ್ದವು. ಈಗ ನೀರು ಪೂರೈಸದೆ ಇದ್ದಿದ್ದರಿಂದ ಕಮರಿ ಹೋಗುತ್ತಿವೆ. ಬೆಳೆಗಳು ನಮ್ಮ ಕಣ್ಣು ಮುಂದೆ ನಾಶವಾಗುತ್ತಿರುವದನ್ನು ಕಂಡು ನೋವಾಗುತ್ತಿದೆ ಎಂದು ರಾವಸಾಬ ಸಮಜಗೆ, ಮಹಾವೀರ ಸಮಜಗೆ, ಬಾಬಾ ಪಾಟೀಲ, ಪ್ರಭು ಕಾಂಬಳೆ ಹೇಳಿದರು.
ಮಂಗಸೂಳಿ ಮತ್ತು ಸುತ್ತು-ಮುತ್ತಲಿನ ಗ್ರಾಮಗಳ ರೈತರಿಗೆ ಐನಾಪುರ ಎತ ನೀರಾವರಿ ಯೋಜನೆ ಸಂಜೀವಿನಿಯಾಗಿದ್ದರು. ಯೋಜನೆಯ ಅಧಿಕಾರಿಗಳ ದುರ್ಲಕ್ಷದಿಂದ ರೈತರು ಸಮಸ್ಯೆಯಲ್ಲಿದ್ದಾರೆ. ಸ್ಥಗಿತಗೊಳಿಸಿದ ಯೋಜನೆಯಿಂದ ಪುನಃ ನೀರು ಹರಿಸದೆ ಹೋದರೆ, ರಸ್ತೆ ತಡೆ ಮಾಡುವದಾಗಿ ರವೀಂದ್ರ ಪುಜಾರಿ ನೀರಾವರಿ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ನೀರು ಹರಿಸದೆ ಹೋದರೆ, ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಎಚ್ಚರಿಕೆ: (ಮಹಾವೀರ ಸಮಜಗೆ, ಸುಭಾಷ ಜಾಧವ್)
ಮುಂಗಾರು ಹಂಗಾಮಿನ ಬೆಳೆ ಬರಬಹುದು ಈ ಆಸೆಯಿಂದ ಬೆಲೆಯುಳ್ಳದ ಬೀಜಗಳು ತಂದು ಭಿತ್ತನೆಮಾಡಿ ನೀರಾವರಿ ಇಲಾಖೆದವರು ನೀರು ಬಿಟಿದ್ದರಿಂದ ಬೆಳೆಗಳು ಬೆಳಿಸಿದ್ದೇವೆ. ಕೋನೆಗೆ ನೀರು ಸ್ಥಗಿತಗೊಳಿಸಿದ್ದರಿಂದ ಕಮರಿ ಹೋಗುತ್ತಿವೆ. ಕೈಗೆ ಬಂದ ತುತ್ತ, ಬಾಯಿಗೆ ಬರದಂತಾಗಿದೆ. ನೀರು ಹರಿಸದೆ ಇದ್ದರೆ ಆತ್ಮಹಹತ್ಯೆ ಒಂದೆ ದಾರಿ ಎಂದು ರೈತರಾದ ಮಹಾವೀರ ಸಮಜಗೆ ಮತ್ತು ಸುಭಾಷ ಜಾಧವ್ ಎಚ್ಚರಿಕೆ ನೀಡಿದರು.
90 ದಿನ ನೀರು ಪುರೈಕೆ: ಅರುಣ ಯಲಗುದ್ರಿ(ಐನಾಪುರ ಎತ ನೀರಾವರಿ ಮುಖ್ಯ ಅಧಿಕಾರಿಗಳು)
ಐನಾಪುರ ಎತ ನೀರಾವರಿ ಯೋಜನೆಯಿಂದ ಕಳೇದ ವರ್ಷಕ್ಕಿಂತ ಈ ವರ್ಷ ರೈತರಿಗೆ ಹೆಚ್ಚಿನ ನೀರು ಪುರೈಕೆವಾಗಿದೆ. 90 ದಿನ ಯೋಜನೆಯಿಂದ ಪುರೈಸಿದ ನೀರು ಮಂಗಸೂಳಿ, ಕೆಂಪವಾಡ, ಮದಭಾವಿ, ಮಸಗುಪ್ಪಿ ಕೆರೆಗಳು ತುಂಬುವದೊಂದಿಗೆ ರೈತರ ಬೆಳೆಗಳಿಗೆ ನೀರು ಪುರೈಸಲಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರೆದ ಬರುವ ಒಳಹರಿ ನೀರು ಸ್ಥಗಿತಗೊಂಡಿದೆ. ನದಿಯಲ್ಲಿಯ ಸ್ಥೀರ ನೀರು ಸೇವನೆಗಾಗಿ ಬಳಿಸಲಾಗುತ್ತಿದೆ. ಮತ್ತು ಪ್ರಾರಂಭವಾದಲ್ಲಿ ನೀರು ಪುರೈಸುವ ಬಗ್ಗೆ ಮೇಲಾಧಿಕಾರಿಗಳು ಆದೇಶ ನೀಡಬಹುದು ಎಂದು ನೀರಾವರಿ ಇಲಾಖೆ ಅಧಿಕಾರಿ ಅರುಣ ಯಲಗುದ್ರಿ ತಿಳಿಸಿದರು.