ನೌಕರರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹುನಗುಂದ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಇಸ್ಲಾಂಪೂರ ಯೋಜನೆ ಘಟಕದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.               

   ರಾಜ್ಯ ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾಜರ್ುನ ಎಚ್.ಟಿ. ಅವರು ಮಾತನಾಡಿ ಯೋಜನೆ ಪ್ರಾರಂಭದಿಂದಲೂ ನಾವು ವಾಟರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 9ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ. ಈ ವೇತನದ ಮೇಲೆ ನಮ್ಮ ಕುಟುಂಬ ನಿರ್ವಹಣೆ ಮಾಡಲು ಜೊತೆಗೆ ಮಕ್ಕಳ ಶಾಲಾ ಶುಲ್ಕವನ್ನು ತುಂಬಲು ಹರಸಾಹಸ ಪಡುವಂತಾಗಿದೆ. ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕಕವಾಗಿ ಮತ್ತು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ ವೇತನದ ಜೊತೆಗೆ ಪ್ರತಿ ತಿಂಗಳು ಪಿಎಫ್ ಹಣವನ್ನು ಕಟ್ ಮಾಡಿಕೊಳ್ಳುತ್ತಿದ್ದು ಅದು ಕೂಡಾ ಸರಿಯಾಗಿ ಪಾವತಿಸುತ್ತಿಲ್ಲ. ಇದರ ಜೊತೆಗೆ ಇನ್ನೂ ಹಲವಾರು ನಾವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವವರೆಗೂ ಅನಿಧರ್ಿಷ್ಟ ಕಾಲ ಪ್ರತಿಭಟನೆಯನ್ನು ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು. ಶರಣಪ್ಪ ಡೊಳ್ಳಿನ  ಅವರು ಮಾತನಾಡಿ ದಿನದ 24ಗಂಟೆ ಗ್ರಾಮೀಣ ಪ್ರದೇಶಕ್ಕೆ ಯೋಜನೆಯ ಕುಡಿಯುವ ನೀರಿನ ತೊಂದರೆಯಾಗದಂತೆ ನಾವು ಕೆಲಸ ನಿರ್ವಹಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿ ವರ್ಗ ನಮ್ಮತ್ತ ತಿರುಗಿ ನೋಡುತ್ತಿಲ್ಲ. ಸಮಸ್ಯೆಯನ್ನು ಆಲಿಸುತ್ತಿಲ್ಲ. ನಾವು ಅವರಂತೆ ಮನುಷ್ಯರೆಂಬುದನ್ನು ಅವರು ಮರೆತಂತೆ ಕಾಣುತ್ತದೆ. ಈಗಾಗಲಾದರೂ ನಮ್ಮ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವದಿಲ್ಲ. ತಾಲೂಕ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಅವರು ಎಚ್ಚರಿಸಿದರು. ಬಸವರಾಜ ವಾಲಿಕಾರ, ಚಂದಪ್ಪ ಕೊಪ್ಪದ, ಸುಬಾಸ ಕೋರಿ, ಬಸವರಾಜ ಹಾವರಗಿ, ಕವಿ ಕನಕೇರಿ, ಮಲ್ಲಪ್ಪ ರಾಂಪೂರ, ಶಿವಪ್ಪ ಮಾದರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.