ಹಾವೇರಿ: ಭಾರತಿ ನಗರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಭಾರತಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯದ ಸಂಚಾಲಕರಾದ ಲೀಲಾ ಜಿಯವರ ನೇತೃತ್ವದಲ್ಲಿ "ರಕ್ಷ ಬಂಧನ"ದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಕ್ಕಳಿಂದ ಹಿಡಿದು, ಎಲ್ಲಾ ವಯಸ್ಸಿನವರು ಭಾಗವಹಿಸಿ ರಾಖಿ ಕಟ್ಟಿಸಿಕೊಂಡರು. ಲೀಲಾ ಜಿಯವರ ಜೊತೆಗೆ ಅನ್ನಪೂಣರ್ಾ ಅಕ್ಕನವರು, ವೈಶಾಲಿ ಹಾಗೂ ಕಲಾ ಅಕ್ಕನವರು ಮತ್ತು ಭಾರತಿ ನಗರದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು. ವಿಶ್ವ ಬೃತೃತ್ವ, ಸದ್ಭಾವನೆ, ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವಂತಹ ಪ್ರೀತಿ, ಸ್ನೇಹದ ಸಂದೇಶಗಳನ್ನು ಬ್ರಹ್ಮಕುಮಾರಿ ಅಕ್ಕನವರು ನೀಡಿದರು. ಭಾರತಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನ ಮುಂದೆ ಶ್ರಾವಣ ಮಾಸದ ಪ್ರಯುಕ್ತ 3 ದಿನಗಳ ಕಾಲ "ಜ್ಞಾನ ಸಂಜೆ" ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿದೆ.