ಹಾವುಗಳ ರಕ್ಷಣೆ ನಮ್ಮ ಸಂವಿಧಾನ ಬದ್ಧ ಕರ್ತವ್ಯ: ಪ್ರೊ. ಗಂಗಾಧರ ಕಲ್ಲೂರ
Protecting snakes is our constitutional duty: Prof. Gangadhar Kallur
ಧಾರವಾಡ, ಜುಲೈ 16: “ಹಾವುಗಳನ್ನು ಗೌರವಿಸಿ, ಗಾಬರಿ ಪಡಬೇಡಿ: ನಿಸರ್ಗದ ಮೌನ ರಕ್ಷಕರನ್ನು ಕಾಪಾಡಿ” ಎಂಬುದು, 2025ನೇ ಸಾಲಿನ, ವಿಶ್ವ ಉರಗಗಳ ದಿನಾಚರಣೆ ಧ್ಯೇಯ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ -1972ರ ಅಡಿ ಹಾವುಗಳು, ಕಾನೂನಿನಡಿ ಸಂರಕ್ಷಿತ ಪ್ರಾಣಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅವುಗಳಿಗೆ ತೊಂದರೆ ಉಂಟುಮಾಡುವುದು ಶಿಕ್ಷಾರ್ಹ ಅಪರಾಧ ಎಂದು, ವನ್ಯಜೀವಿ ಕ್ಷೇಮಪಾಲಕ ಪ್ರೊ. ಗಂಗಾಧರ ಕಲ್ಲೂರ ಹೇಳಿದರು.
ಧಾರವಾಡದ ನಿಸರ್ಗ ಸಂಶೋಧನಾ ಕೇಂದ್ರ ಹಿ ಎನ್.ಆರ್.ಸಿ. ನಗರದ ಮಾಳಮಡ್ಡಿಯ, ಕೆ.ಇ. ಬೋರ್ಡ್ ಸಂಸ್ಥೆಯ, ಪ್ರೌಢ ಶಾಲೆ ಹಾಗೂ ಸಿ.ಬಿ.ಎಸ್.ಇ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ, ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆ, ಕೆರೆಹಾವು (ರಾ್ಯಟ್ ಸ್ನೇಕ್) ಹಾಗೂ ಆಭರಣ ಹಾವು (ಟ್ರಿಂಕಟ್)ಗಳ ಮೂಲಕ, ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿ, ಮಾತನಾಡಿದರು.
ಹಾವುಗಳು ಮನೆಗಳಲ್ಲಿ ಕಂಡುಬಂದಲ್ಲಿ, ವಿಷಕಾರಿಯೋ ಅಥವಾ ಅಲ್ಲವೋ ಎಂಬುದನ್ನು ಗುರುತಿಸುವ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರೂ ಹೊಂದಬೇಕು. ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗ ಅಥವಾ ತರಬೇತಿ ಪಡೆದ ಉರಗ ರಕ್ಷಕರು, ತುರ್ತು ಸಂದರ್ಭದಲ್ಲಿ, ಅಗ್ನಿ ಶಾಮಕ ದಳಕ್ಕೂ ವಿಷಯ ತಿಳಿಸಬಹುದು. ಅವರ ಬಳಿ ತರಬೇತಿ ಪಡೆದ ಸ್ವಯಂಸೇವಕರ ಪಟ್ಟಿ, ಉಪಕರಣ ಮತ್ತು ಇಲಾಖೆಯ ಸಿಬ್ಬಂದಿ ಇದ್ದಾರೆ ಎಂದರು.
ಇತ್ತೀಚೆಗೆ ಹಾವುಗಳ ಆವಾಸ ಸ್ಥಳದ ಅತಿಕ್ರಮಣ, ರಾತ್ರಿಯೂ ಹಗಲಿನಷ್ಟೇ ಮನುಷ್ಯರ ಚಟುವಟಿಕೆ, ಕಣ್ಣು ಕೋರೈಸುವಷ್ಟು ಬೆಳಕು, ಭೂಮಿಗೇ ಜ್ವರ ಬಂದಂತೆ ಕಾವು, ವಾಣಿಜ್ಜಿಕ ಬೆಳೆಗಳ ದೆಸೆಯಿಂದ ಆಹಾರದ ಅಲಭ್ಯತೆ, ರೈತನ ಮಿತ್ರನಾದ ಹಾವಿಗೆ ಆಹಾರ ಬೆಳೆಗಳ ತಾಕು ಕ್ಷೀಣಿಸಿ, ಬೆಳೆ ಪೀಡೆಗಳಾದ ಇಲಿ, ಹೆಗ್ಗಣ, ಮೊಲಗಳ ಸಂಖ್ಯೆಯಲ್ಲಿ ಇಳಿಮುಖವಾಗಿ ಆಹಾರ ಸರಪಳಿ ತುಂಡಾದ್ದೂ ಕಾರಣ ಎಂದು, ಪ್ರೊ. ಕಲ್ಲೂರ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದರೆಡ್ಡಿ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ವಿಷ್ಣು ಹುಕ್ಕೇರಿ, ಉರಗ ರಕ್ಷಕರಾದ ಮಂಜುನಾಥ, ಸೌರಭ ಸಬನೀಸ್, ಸಮೀರ ಕುಲಕರ್ಣಿ ಹಾಗೂ ಹರ್ಷವರ್ಧನ ಶೀಲವಂತ, ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.
ಬಾಕ್ಸ್ -1 ಮಕ್ಕಳ ಪ್ರಶ್ನೆ:
ಹಾವು ಏಕೆ ಕಚ್ಚುತ್ತದೆ?!
ಮಕ್ಕಳು ಹಾವುಗಳನ್ನು ಮುಟ್ಟಿ ನೋಡಿ, ಕುತೂಹಲ ತಾಳದೇ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ. ಗಂಗಾಧರ ಕಲ್ಲೂರ, ಹಾವುಗಳಲ್ಲಿರುವ ವಿಷ ‘ಪ್ರೋಟಿನ್’. ಬೇಟೆಯನ್ನು ಪ್ರಜ್ಞೆ ತಪ್ಪಿಸಲು, ಇಡಿಯಾಗಿ ನುಂಗಿದ ಆಹಾರ ಅರಗಿಸಿಕೊಳ್ಳಲು ಬಳಕೆಯಾಗುತ್ತದೆ. ಮನುಷ್ಯರನ್ನು ಕಚ್ಚಲು ಈ ವಿಷ ಅವುಗಳಲ್ಲಿಲ್ಲ! ಈ ವಿಷವೂ ತುರ್ತು ಸಂದರ್ಭದಲ್ಲಿ ಮನುಷ್ಯರಿಗೆ ಜೀವರಕ್ಷಕ ಓಷಧಿ! ಅನಗತ್ಯವಾಗಿ ಹಾವುಗಳು ಯಾರ ಮೇಲೂ, ಸೇಡಿನ ದಾಳಿ ಅಥವಾ ಬೆನ್ನಟ್ಟಿ ಕಚ್ಚುವುದಿಲ್ಲ! ನಮ್ಮ ಅಜಾಗರೂಕತೆಯಿಂದ, ಅವು ಭಯಭೀತಗೊಂಡಾಗ, ಪ್ರಾಣರಕ್ಷಣೆಯ ಕೊನೆ ಅಸ್ತ್ರವಾಗಿ ಕಚ್ಚುವುದು! ಹೀಗಾಗಿ, ಸುರಕ್ಷಿತ ಅಂತರ ನಮ್ಮ ಹೊಣೆ ಎಂದರು.
ಹಾವಿಗೆ ಕಿವಿ ಇದೆಯೇ?
‘ಜೇಕಬ್ ಸನ್ಸ್ ಆರ್ಗನ್’ ಹಾವಿನ ಬಾಯಿಯ ತುದಿ ಅಂಗಳದಲ್ಲಿ, ಮೂಗಿನ ಕೆಳಗಿರುವ ಈ ಅಂಗಕ್ಕೆ, ನಾಲಿಗೆಯ ಮೂಲಕ ಸಂಗ್ರಹಿಸಿದ ಮಾಹಿತಿ ರವಾನಿಸಿ, ವಿಶ್ಲೇಷಿಸುತ್ತವೆ. ಆಹಾರದ ದೂರ, ಗಾತ್ರ ಮತ್ತು ಬಿಸಿ ರಕ್ತ ಪ್ರಾಣಿಯ ಚಲನೆ ವೇಗ..ಹೀಗೆ. ನೆಲ ಕಂಪಿಸಿದಾಗ ದೇಹದಿಂದ ಸಂಜ್ಞೆ ಸಂಗ್ರಹಿಸುತ್ತವೆ. ‘ಹಾವಿಗೆ ಕಿವಿ ಇಲ್ಲ’! ಎಂಬ ಪ್ರೊ. ಕಲ್ಲೂರ ಮಾತಿಗೆ, ಮಕ್ಕಳು ಆಶ್ಚರ್ಯಚಕಿತರಾದರು.
ನಿರುಪದ್ರವಿ, ವಿಷಕಾರಿಯಲ್ಲದ ಆದರೆ, ಹೆಚ್ಚು ಸಾವೀಗೀಡಾಗುವ ಹಾವುಗಳು:
ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುವ ವಿಷರಿಹಿತ, ನಿರುಪದ್ರವಿ ಹಾವುಗಳೆಂದರೆ, ಕಾಮನ್ ವರ್ಮ್ ಸ್ನೇಕ್, ಪೆರೋಟೆಟ್ಸ್ ಶೀಲ್ಡ್‌ಟೇಲ್ ಸ್ನೇಕ್, ಇಂಡಿಯನ್ ರಾಕ್ ಪೈಥಾನ್, ಕಾಮನ್ ಸ್ಯಾಂಡ್ ಬೋವಾ, ರೆಡ್ ಸ್ಯಾಂಡ್ ಬೋವಾ, ಕಾಮನ್ ವೂಲ್ಫ್ ಸ್ನೇಕ್, ಬ್ಯಾಂಡೆಡ್ ಕುಕ್ರಿ, ಸ್ಟ್ರಿಪ್ಡ್ ಕೀಲ್ ಬ್ಯಾಕ್, ಗ್ರೀನ್ ಕೀಲ್ ಬ್ಯಾಕ್, ಚೆಕರ್ಡ ಕೀಲ್ ಬ್ಯಾಕ್ ವಾಟರ್ ಸ್ನೇಕ್, ಆಲಿವ್ ಕೀಲ್ ಬ್ಯಾಕ್ ವಾಟರ್ ಸ್ನೇಕ್, ಟ್ರಿಂಕೆಟ್ ಸ್ನೇಕ್, ರಾ್ಯಟ್ ಸ್ನೇಕ್, ಬ್ಯಾಂಡೆಡ್ ರೇಸರ್, ರಾಯಲ್ ಸ್ನೇಕ್, ಬ್ರಾಂಜ್ ಬ್ಯಾಕ್ ಟ್ರೀ ಸ್ನೇಕ್, ಫ್ಲೈಯಿಂಗ್ ಸ್ನೇಕ್, ವೈನ್ ಸ್ನೇಕ್, ಕಾಮನ್ ಕ್ಯಾಟ್ ಸ್ನೇಕ್, ಡಾಗ್ ಫೇಸ್ಡ್ ವಾಟರ್ ಸ್ನೇಕ್.
ವಿಷಕಾರಿ ಹಾವುಗಳು, ಹೆಚ್ಚು ಕೊಲ್ಲಲ್ಪಡುವ ಹಾವುಗಳು:
ಕಾಮನ್ ಕ್ರೇಟ್, ಬ್ಯಾಂಡೆಡ್ ಕ್ರೇಟ್, ಸ್ಲೆಂಡರ್ ಕೋರಲ್ ಸ್ನೇಕ್, ಸ್ಪೆಕ್ಟ್ಯಾಕಲ್ಡ್ ಕೋಬ್ರಾ, ಮೋನಕಲ್ಡ್ ಕೋಬ್ರಾ, ಕಿಂಗ್ ಕೋಬ್ರಾ, ಹುಕ್ ನೋಸ್ಡ್ ಸೀ ಸ್ನೇಕ್, ರಸ್ಸೆಲ್ಸ್ ವೈಪರ್, ಸಾ ಸ್ಕೇಲ್ಡ್ ವೈಪರ್, ಬಾಂಬೂ ಪಿಟ್ ವೈಪರ್ ನಮ್ಮ ರಾಜ್ಯದಲ್ಲಿ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕಾಣಸಿಗುತ್ತವೆ.
ರ್ಷವರ್ಧನ ವಿ. ಶೀಲವಂತ, ಧಾರವಾಡ.
ಕಾರ್ಯದರ್ಶಿ, ನೇಚರ್ ರಿಸರ್ಚ್ ಸೆಂಟರ್ (ಎನ್.ಆರ್.ಸಿ.), ಧಾರವಾಡ.
ಸಂಪರ್ಕ: 98865 21664
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 