ಅವಿನಾಶ ಯುವಕ ಕಾಣೆ

ಅವಿನಾಶ ಯುವಕ ಕಾಣೆ Avinash missing

ಬೆಳಗಾವಿ, ಮೇ.04: ತಾಲೂಕಿನ ಶಿವಾಪೂರದ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದ ಅವಿನಾಶ ಅಣ್ಣಾಸಾಹೇಬ ತೊಡಕರ ಎಂಬ 26 ವರ್ಷದ ಯುವಕ  ಏ.13 ರಂದು ಮಠದಲ್ಲಿ ಯಾರಿಗೂ ಹೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಯುವಕನ ಚಹರೆ: 5 ಫೂಟ. ಎತ್ತರ, ಉದ್ಯೋಗ ಖಾಲಿ (ಬುದ್ದಿಮಾಂದ್ಯ ್ಘ ಸರಿಯಾಗಿ ಮಾತನಾಡಲು ಬರುವುದಿಲ್ಲ), ಸಾದಾ ಬಿಳಿ ಮೈಬಣ್ಣ,  ಮೈಯಿಂದ ಸಡಪಾತಳ, ದುಂಡು ಮುಖ, ಉದ್ದ ಮೂಗು, ಕಪ್ಪು ಕೂದಲು ಇರುತ್ತದೆ ಹಾಗೂ ಕಪ್ಪು ಬಣ್ಣದ ಫುಲ್ ಶರ್ಟ ್ಘ ನೀಲಿ ಬಣ್ಣದ ನೈಟ ಪ್ಯಾಂಟ ಧರಿಸಿರುತ್ತಾನೆ. 

ಕಾಣೆಯಾದ  ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ಕಾಕತಿ ಪೊಲೀಸ ಠಾಣೆ ದೂರವಾಣಿ ಸಂಖ್ಯೆ 08312405203, 948080115, 9480804083 ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.