ಲೋಕದರ್ಶನವರದಿ
ಸಿರುಗುಪ್ಪ07: ಜೀವ ವಿಕಾಸದ ಫಲ ಸಮತೋಲನ ವ್ಯವಸ್ಥೆ ವಿಶ್ವವನ್ನೇ ಕಾಡುತ್ತಿರುವ ಕೊರೊನ ವೈರಸ್ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಉಸಿರಾಟ ತೊಂದರೆ ಜ್ವರ ಕೆಮ್ಮು ಮತ್ತು ನೆಗಡಿ ಕಂಡು ಬಂದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಮಾಲಿನ್ಯ ಅಳಿಸಿ ದಕ್ಷತಾ ಸಕರ್ಾರದ ಕ್ರಮಗಳನ್ನು ಪಾಲಿಸಿ ಪರಿಸರವನ್ನು ಸಂರಕ್ಷಿಸಿ ಎಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸಂಸ್ಥೆ ಪ್ರಕೃತಿ ವಿಕೋಪ ಸಮಿತಿ ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸದಸ್ಯರಾದ ಪರಿಸರ ಪ್ರೇಮಿ ಎ ಅಬ್ದುಲ್ ನಬಿ ಅಭಿಪ್ರಾಯ ಪಟ್ಟರು. ನಗರದ ಇಬ್ರಾಹಿಂ ಮಂಜಿಲ್ನಲ್ಲಿ ವಿಶ್ವ ಪರಿಸರ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ನಮ್ಮ ಪರಿಸರ ಹಸಿರಾಗಿಸಿ ಮನೆ ಅಂಗಳದಲ್ಲಿ ಸಸಿ ನೆಟ್ಟು ನಿರಂತರ ಪೋಷಿಸಿ ಆರೋಗ್ಯಕ್ಕೆ ಶುದ್ಧ ಗಾಳಿ ಉತ್ಪತ್ತಿ ಯಾಗಿಸಿ ಪರಿಸರ ಎಲ್ಲ ಜೀವರಾಶಿಗಳ ಜೀವತಾಣ ಗಿಡ ಮರ ಪ್ರಾಣಿ ಪಕ್ಷಿ ನೆಲ ಜಲ ವಾಯು ಜೀವನದ ಸಂಪತ್ತು ಇವನ್ನು ರಕ್ಷಿಸಿ ನಾವು ಸೇವಿಸುವ ಆಹಾರ ಉಸಿರಾಡುವ ಗಾಳಿ ಕುಡಿಯುವ ನೀರು ವಾಸ ಯೋಗ್ಯ ಗೃಹ ಉತ್ತಮ ವಾತಾವರಣ ಎಲ್ಲವೂ ಮನುಕುಲದ ಪ್ರಕೃತಿಯ ವರದಾನ ಆಗಿದೆ ಎಚ್ಚರಗೊಳ್ಳುವ ಈ ವರ್ಷ ವಿಶ್ವಸಂಸ್ಥೆಯು ಪ್ರಕೃತಿಯ ಈ ಸಮಯ ಎಂಬ ಸಂದೇಶ ಘೋಷ ವಾಕ್ಯದೊಂದಿಗೆ ವಿಶ್ವ ಪರಿಸರ ಜಾಗೃತಿ ಮೂಡಿಸುತ್ತದೆ.
ನಮ್ಮ ಸರಕಾರಗಳು ಅರಣ್ಯ ಮತ್ತು ವನ್ಯ ಜೀವಿಗಳಿಗೆ ಜಮೀನು ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಪರಿಸರ ಜಾಗೃತಿ ಅರಿವು ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿ ಯಶಸ್ವಿಯಾಗಿ ಸಾಗಬೇಕು ಅರಣ್ಯ ಪರಿಸರ ಸಂರಕ್ಷಣೆಗೆ ಮುಂದಿನ ಪೀಳಿಗೆಗೆ ದೃಢ ಸಂಕಲ್ಪದೊಂದಿಗೆ ಇದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕಿದೆ ಎಂಬುದನ್ನು ಎ ಅಬ್ದುಲ್ ನಬಿ ಸರ್ವರಲ್ಲೂ ವಿನಂತಿಸಿಕೊಂಡಿದ್ದಾರೆ ಸಾಕ್ಷರತಾ ತಾಲ್ಲೂಕು ಗೌರವ ಸಂಯೋಜಕರಾದ ಜೆ ನಾಗೇಂದ್ರ ಗೌಡ ಏ ಮೊಹಮ್ಮದ್ ಇಬ್ರಾಹಿಂ ಏ ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಅಲಿ ಎ ಮೊಹಮ್ಮದ್ ನಿಜಾಮುದ್ದೀನ ಎ ಮೊಹಮ್ಮದ್ ಹಾಜಿ ಇದರು.