ರಸ್ತೆ ನಿಯಮಗಳನ್ನು ಪಾಲಿಸಿ ಕುಟುಂಬವನ್ನು ಸಂರಕ್ಷಿಸಿ: ನ್ಯಾ. ಒಡೆಯರ್

ಲೋಕದರ್ಶನ ವರದಿ

ಶಿರಹಟ್ಟಿ 22: ಇತ್ತೀಚೆಗೆ ಸಾರಿಗೆ ಇಲಾಖೆ ಹೊರತಂದ ಹೊಸ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರಿ, ನಿಮ್ಮ ವಾಹನಗಳನ್ನು ಸಮಯಕ್ಕೆ ತಕ್ಕಂತೆ ಸಾರಿಗೆ ಇಲಾಖೆಯ ನಿಯಮಾನುಸಾರ ಚಾಲನಾ ಪರವಾನಿಗೆ, ವಾಯು ಮಾಲಿನ್ಯ ಪರೀಕ್ಷೆ ಹಾಗೂ ಜೀವ ವಿಮೆ ಮಾಡಿಸಿಕೊಂಡು ನಿಮ್ಮ ಕುಟುಂಬದ ನಿಮ್ಮ ಕುಟುಂಬಗಳ ರಕ್ಷಣೆ ಮಾಡಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ  ನ್ಯಾಯಾಧೀಶ ಎಂ. ಆರ್ ಒಡೆಯರ್ ಕರೆ ನೀಡಿದರು.

ಅವರು ತಾಲೂಕಿನ ರಣತೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕಿನ ಕಾನೂನು ಸೇವಾ ಸಮಿತಿ ವಕೀಲರ ಸಂಘ ಲಕ್ಷ್ಮೇಶ್ವರ-ಶಿರಹಟ್ಟಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಶಿರಹಟ್ಟಿ ಮತ್ತು ಗ್ರಾಮ ಪಂಚಾಯಿತಿ ರಣತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಂದುವರೆದು, ಸಾರಿಗೆ ನಿಯಮಗಳ ಉಲ್ಲಂಘನೆಯಾಗದಂತೆ ಪೋಲೀಸ್ ಇಲಾಖೆ ಎಲ್ಲರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಜನಸಾಮಾನ್ಯರು ಇಲಾಖೆಯ ಜೊತೆಗೆ ಕೈ ಜೋಡಿಸಿ ಸಹಕರಿಸಬೇಕು ಹಾಗೂ ಪಾಲಕರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಉತ್ತಮ ಶಿಕ್ಷಣ ಒದಗಿಸುವಲ್ಲಿ ಪಾಲಕರು ಮುಂದಾಗಬೇಕೇ ಹೊರತು ಬಾಲ್ಯ ವಿವಾಹಗಳಿಗೆ ಆಸ್ಪದ ನೀಡಿ ಅವರ ಭವಿಷ್ಯವನ್ನೇ ಚಿವುಟಲು ಮುಂದಾಗಬಾರದು ಎಂದು ಕರೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ರಣತೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಬಾರಕಿ, ದಿವಾಣಿ ನ್ಯಾಯಾಧೀಶ ಎನ್ ಪ್ರತಾಪಕುಮಾರ, ಸಹಾಯಕ ಸರ್ಕಾರಿ  ಅಭಿಯೋಜಕರು ಲಕ್ಷ್ಮೇಶ್ವರ ಮತ್ತು ಕಾರ್ಯನಿವರ್ಾಹಕ ಸದಸ್ಯ ಕಾರ್ಯದಶರ್ಿ ತಾಲೂಕಾ ಕಾನೂನು ಸೇವಾ ಸಮಿತಿ ಲಕ್ಷ್ಮೇಶ್ವರದ ಜಿ ಎಸ್ ಪಾಟೀಲ, ಶಿರಹಟ್ಟಿ ವಕೀಲರ ಸಂಘದ ಅಧ್ಯಕ್ಷ ಎಸ್ ವೈ ಗೊಬ್ಬರಗುಂಪಿ,  ಶಿರಹಟ್ಟಿ ವಕೀಲರ ಸಂಘದ ಉಪಾಧ್ಯಕ್ಷ ಅನಿಲ ಮಾನೆ, ಶಿರಹಟ್ಟಿ ವಕೀಲರ ಸಂಘದ ಕಾರ್ಯದಶರ್ಿ ಎ.ಎ ಬೇವಿನಗಿಡದ, ಸಹ ಕಾರ್ಯದರ್ಶಿ  ಆರ್ ಎಂ ಪೂಜಾರ, ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಿ ಎಸ್ ಪಾಟೀಲ, ಉಪಾಧ್ಯಕ್ಷ ಎನ್ ವೈ ಬೆಲ್ಲದ, ಕಾರ್ಯದರ್ಶಿ  ಎನ್ ಐ ಸೊರಟೂರ, ಕಾನೂನು ಸಲಹೆಗಾರರಾದ ಎನ್ಸಿ ಪಾಟೀಲ, ಎಸ್ಎಚ್ ಮುಳಗುಂದ, ಐಜಿ ಹುಲಬಜಾರ, ಎನ್ ಎಸ್ ಕೊರವಣ್ಣವರ, ವ್ಹಿಕೆ ನಾಯಕ್, ಶಿರಹಟ್ಟಿ ನ್ಯಾಯಾಲಯದ ನ್ಯಾಯವಾದಿ ಬಿಕೆ ಬುಡಪ್ಪನವರ ಹಾಗೂ ಸಹಾಯಕ ನಿದರ್ೇಶಕರು ಗ್ರಾಮೀಣ ಉದ್ಯೋಗ ತಾಲೂಕ ಪಂಚಾಯಿತಿ ಶಿರಹಟ್ಟಿಯ ಕೃಷ್ಣಪ್ಪ ಧರ್ಮರ ಹಾಗೂ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕ ನ್ಯಾಯವಾದಿಗಳು ಮತ್ತು ರಣತೂರ ಗ್ರಾಮಸ್ಥರು ಉಪಸ್ಥಿತರಿದ್ದರು.