ಲೋಕದರ್ಶನವರದಿ
ಮಹಾಲಿಂಗಪೂರ : ನಗರದ ಪಿ.ಡಿ ಬುದ್ನಿ ಸೂರ್ಯ ಲಾಡ್ಜ ಒಂದರಲ್ಲಿ ವೇಶಾವಾಟಿಕೆ ನಡೆದಿರುವ ಪ್ರಕರಣವು ಮಹಾಲಿಂಗಪೂರ ನಗರ ಠಾಣೆಯಲ್ಲಿ ದಾಖಲಾಗಿದೆ.
ನ.27ರಂದು ಬುಧವಾರ ದಿವಸ ಸಾಯಂಕಾಲ 07.20 ಕ್ಕೆ ಮುಧೋಳ ಸಿಪಿಐ ಎಚ್.ಆರ್.ಪಾಟೀಲ್,ಸ್ಥಳೀಯ ಠಾಣಾಧಿಕಾರಿ ಆರ್.ವಾಯ್.ಬೀಳಗಿ ಹಾಗೂ ಸಿಬ್ಬಂದಿ ವರ್ಗ ಸೇರಿ ಲಾಡ್ಜ ಮೇಲೆ ದಾಳಿ ಮಾಡಿದರು. ಆರೋಪಿತರಲ್ಲಿ ಲಾಡ್ಜ ವ್ಯವಸ್ಥಾಪಕ ಲಕ್ಷ್ಮಣ.ಬಾಬು.ಪಾತ್ರೋಟ್( 27) ಹಾಗೂ ನಾಲ್ಕು ಜನ ಹೆಣ್ಣುಮಕ್ಕಳನ್ನು ಬಂಧಿಸಿ ಪ್ರಕರಣ 104/2019 ಕಲಂ:03 ಮತ್ತು 05 ಆಯ್.ಟಿ.ಪಿ ಅಕ್ಟ-1956 ಗುನ್ನಾ ದಾಖಲಿಸಿ ಇವರುಗಳನ್ನು ಮಹಿಳಾ ಸಾ0ತ್ವನ ಕೇಂದ್ರಕ್ಕೆ ರವಾನಿಸಲಾಯಿತು.
ಲಾಡ್ಜ ವ್ಯವಸ್ಥಾಪಕನಾದ ಆರೋಪಿಯು ಲಕ್ಷ್ಮಣ ಪಾತ್ರೋಟ್ ಸಂಗಾನಟ್ಟಿಯ ಓರ್ವ ಹಾಗೂ ಜಮಖಂಡಿಯ ಮೂವರು ಹೆಣ್ಣು ಮಕ್ಕಳನ್ನು ತಂದು ಹಣ ಸಂಪಾದನೆ ಮಾಡುವ ಉದ್ದೇಶದಿಂದ ವೇಶಾವಾಟಿಕೆಗೆ ಬಳಸಿಕ್ಕೊಳ್ಳುತ್ತಿದ್ದನೆಂದು ತಿಳಿದು ಬಂದಿರುತ್ತದೆ.
ನಗರದಾದ್ಯಂತ ಬಾರಗಳು ರಾಜ್ಯ ಹೆದ್ದಾರಿ, ಜನನಿ ಬೀಡ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವುದಲ್ಲದೆ ಅನೇಕ ಕುಟುಂಬಗಳು ವಾಸಿಸುತ್ತಿವೆ. ವಿದ್ಯಾಥರ್ಿಗಳಿಗೆ,ಸಣ್ಣ ಸಣ್ಣ ಮಕ್ಕಳಿಗೆ ಸಭ್ಯ ಗ್ರಹಸ್ಥರ ಮೇಲೆ ಗಾಢವಾದ ದುಷ್ಪರಿಣಾಮ ಬೀರುತ್ತಿವೆ.ಸರಕಾರ ಸಾರ್ವಜನಿಕ ಸ್ಥಳ ಮತ್ತು ರಾಜ್ಯ ಹೆದ್ದಾರಿಯಿಂದ ಇಂತಿಷ್ಟು ದೂರದಲ್ಲಿ ಬಾರಗಳು ಇರಬೇಕೆಂಬ ನಿಯಮಗಳಿವೆ.ಆದರೆ ನಿಯಮ ಪಾಲಿಸುವ0ತೆ ಅಂಗಡಿಕಾರರಿಗೆ ಸಮ್ಮ0ಧಿಸಿದ ಇಲಾಖೆಗಳು ಜಾಗ್ರತಿ ಮೂಡಿಸಬೇಕೆಂದು ಜನರು ಮಾತನಾಡುತ್ತಿದ್ದಾರೆ.
ಈ ಕಾಯರ್ಾಚರಣೆಯಲ್ಲಿ ಅಶೋಕಸವದಿ, ಮಲ್ಲುಕನಶೆಟ್ಟಿ, ಎಂ.ಎಸ್.ಸಣ್ಣಕ್ಕಿ, ಬಿ.ಸಿ.ಮುದಿಬಸನಗೌಡ,ಎಂ.ಎನ್.ಕಾಗವಾಡ,ಜೆ.ಜಿ.ಪಾಟೀಲ,ದಾದಾಪೀರ ಅತ್ರಾವತ,ಇಂಡೀಕರ ಹಾಗೂ ಮಹಿಳಾ ಸಿಬ್ಬಂದಿ ಎಸ್.ಎಚ್.ನಾವಿ,ಆರ್.ಎಸ್.ಪಾಟೀಲ ಭಾಗವಹಿದ್ದರು ಹೆಚ್ಚಿನ ತನಿಖೆಗಾಗಿ ಆರಕ್ಷಕರು ಜಾಲ ಬೀಸಿದ್ದಾರೆ.