ನಿರಂತರ ಯೋಗ ಅಭ್ಯಾಸದಿಂದ ಸಮೃದ್ಧಿ ಪ್ರಾಪ್ತಿ: ಪ್ರೊ. ಸಿ.ಎಂ. ತ್ಯಾಗರಾಜ್
Prosperity is achieved through continuous yoga practice: Prof. C.M. Thyagaraj
ಬೆಳಗಾವಿ 20: ಮನುಷ್ಯನ ದೇಹ ಮತ್ತು ಮನಸ್ಸು ಯೋಗದಿಂದ ನಿಯಂತ್ರಿಸಬಹುದು. ಯೋಗದಿಂದ ದೇಹ ಮತ್ತು ಮನಸ್ಸಿನಲ್ಲಿರುವ ಅನಾವಶ್ಯಕ ಸಂಗತಿಗಳನ್ನು ಹೊರ ಹಾಕಬಹುದು. ಆದ್ದರಿಂದ ನಿರಂತರವಾಗಿ ಯೋಗದಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಮಾನ್ಯ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್ ಇವರು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಯೋಗ ಶಿಕ್ಷಣ ಅಧ್ಯಯನ ವಿಭಾಗ ಸಹಯೋಗದಲ್ಲಿ ಜಾಗತಿಕ ಯೋಗ ದಿನಾಚರಣೆ ನಿಮಿತ್ತ ವಿವಿಯ ಕುವೆಂಪು ಸಭಾಭವನದಲ್ಲಿ ಯೋಗದಿಂದ ಯಶಸ್ಸು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗದಿಂದ ಮನಸ್ಸಿನಲ್ಲಿರುವ ಚಂಚಲತೆ ಮತ್ತು ನಕಾರಾತ್ಮಕ ಯೋಚನೆಗಳನ್ನು ನಿಯಂತ್ರಿಸುವುದರ ಜೊತೆಗೆ ಸದಾ ಮನಸ್ಸಿನಲ್ಲಿ ಉಲ್ಲಾಸ ಮತ್ತು ಉತ್ಸಾಹ ನೆಲೆಸುವಂತೆ ಮಾಡಬಹುದು. ದೇಹದಲ್ಲಿರುವ ಆಲಸ್ಯ ತೊಲಗಿ ದೇಹ ಸದಾ ಚಟುವಟಿಕೆಯಲ್ಲಿ ಕ್ರೀಯಾಶೀಲವಾಗಿರುವಂತೆ ಯೋಗ ಮಾಡಬಹುದು ಎಂದರು.
ಇಶಾ ಫೌಂಡೇಷನ್ ಬೆಳಗಾವಿ ಘಟಕದ ಮುಖ್ಯಸ್ಥ ದಯಾನಂದ ಪಾಟೀಲ ಇಶಾ ಫೌಂಡೇಶನ್ ಕುರಿತಾದ ಪ್ರಾಥಮಿಕ ಮಾಹಿತಿ ನೀಡುವುದರ ಜೊತೆಗೆ ಯೋಗ ಮತ್ತು ಧ್ಯಾನದ ಮಹತ್ವ ಮತ್ತು ಪ್ರಸ್ತುತತೆ ಬಗ್ಗೆ ತಿಳಿಸಿದರು. ನಂತರ ಕೆಲ ಆರಂಭಿಕ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಪ್ರಾತ್ಯಾಕ್ಷಿಕೆಯನ್ನು ಕೂಡಾ ನೀಡಿದರು.
ಡಾ. ಎಸ್.ಸಿ. ಪಾಟೀಲ ಇವರು ಉಪಸ್ಥಿತರಿದ್ದರು.
ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ಸುಷ್ಮಾ. ಆರ್ ಸ್ವಾಗತಿಸಿದರು, ಡಾ. ಕನಕಪ್ಪ ಪೂಜಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 