ಹಾವೇರಿ 31: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಹಾವೇರಿ ಹಾಗೂ ಬೆಂಗಳೂರು ನಿಮ್ಹಾನ್ಸ ಸಹಯೋಗದಲ್ಲಿ 'ಯುವಸ್ಪಂದನದ ಅರಿವು ಹಾಗೂ ಜೀವನ ಕೌಶಲ್ಯ ಕಾರ್ಯಕ್ರಮ' ಗುರುವಾರ ಗಾಂಧಿಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಜರುಗಿತು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಗೊಂದಲಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾದರೆ ಜೀವನ ಕೌಶಲ್ಯ ಅವಶ್ಯಕವಾಗಿದೆ ಎಂದು ಯುವ ಪರಿವರ್ತಕ ಈಶ್ವರ ಹುಣಸಿಕಟ್ಟಿ ಹೇಳಿದರು.
ಪ್ರಾಚಾರ್ಯರಾದ ಬಿ.ಟಿ.ಲಮಾಣಿ ಅವರು ಮಾತನಾಡಿ, ವಿದ್ಯಾಥರ್ಿಗಳು ಆದರ್ಶ ವ್ಯಕ್ತಿಗಳಾಗಲು ಸ್ವಾಮಿ ವಿವೇಕಾನಂದರ ಮತ್ತು ಗಾಂಧೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಗುರಿ ಇಟ್ಟು ಕೊಂಡು ವಿದ್ಯಾರ್ಥಿಜೀವನ ನಿರ್ವಹಣೆ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.
ಯುವ ಜನತೆ ಆಧುನಿಕ ಯುಗದಲ್ಲಿ ಎದುರಿಸುತ್ತಿರುವ ಗೊಂದಲಗಳು ಹಾಗೂ ಮಾನಸಿಕ ಒತ್ತಡ ದೂರು ಮಾಡಲು ಈ ಕಾರ್ಯಕ್ರಮವು ಸಹಕರಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು.'ಯುವ ಸ್ಪಂದನ' ಕೇಂದ್ರದ ದೂರವಾಣಿ ಸಂಖ್ಯೆಗೆ 08375-232080 ಅಥವಾ ರಾಜ್ಯ ಯುವ ಸ್ಪಂದನ ಕೇಂದ್ರದ ಸಹಾಯವಾಣಿ ಸಂಖ್ಯೆಗೆ 18004251448 ಕರೆಮಾಡಬಹುದು ಅಥವಾ ಯುವಸ್ಪಂದನ ಕಛೇರಿ ಹಾವೇರಿಗೆ ಬಂದು ವಿವರ ಪಡೆಯಬಹುದು ಎಂದು ಯುವ ಸಮಾಲೋಚಕಿ ಕುಮಾರಿ ಸುಮಂಗಲಾ ಹಂಚಿನಮನಿ ಮಾಹಿತಿ ನೀಡಿದರು.
ಎನ್.ಎಸ್.ಎಸ್, ಘಟಕದ ಅಧಿಕಾರಿ ಡಾ. ಚಂದ್ರಪ್ರಭಾ ಪಟಗಾರ, ಯುವ ಪರಿವರ್ತಕಿ ಮಂಜುಳಾ ಪಡಿಗೂದಿ ಇತರರು ಉಪಸ್ಥಿತರಿದ್ದರು.