ಗ್ರಾಮೀಣ ಉದ್ಯೋಗ ಯೋಜನೆಯಡಿ ಕೂಲಿ ಕೆಲಸಕ್ಕೆ ಉತ್ತೇಜನ: ಅಧಿಕಾರಿಗಳಿಂದ ಕಾಮಗಾರಿ ಪರೀಶೀಲನೆ

ಗ್ರಾಮೀಣ ಉದ್ಯೋಗ ಯೋಜನೆಯಡಿ ಕೂಲಿ ಕೆಲಸಕ್ಕೆ ಉತ್ತೇಜನ: ಅಧಿಕಾರಿಗಳಿಂದ ಕಾಮಗಾರಿ ಪರೀಶೀಲನೆ  Promotion of wage employment under the rural employment scheme: Officials inspect the works

ಲೋಕದರ್ಶನ ವರದಿ 

ಸವದತ್ತಿ 26: ತಾಲೂಕಿನ ಗೊರಾಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಿಡೊಣಿ ಗ್ರಾಮದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್  ಆಜೀವಿಕ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ  ಭೇಟಿ ನೀಡಿ ಕಾಮಗಾರಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು  ಬಿ. ವಿ.  ಅಯ್ಯನಗೌಡರ ಪರೀಶೀಲಿಸಿದರು. ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಬಿ ವಿ ಅಯ್ಯನಗೌಡರ ರವರು ಮಾತನಾಡಿ ದುಡಿಯುವ ಕೈಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್   ಆಜೀವಿಕ ಮಿಷನ್ ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸವನ್ನು ನೀಡಿ ಗಂಡು-ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿಯನ್ನು ನೀಡಲಾಗುತ್ತಿದೆ.

ಜುಲೈ 1 ರಿಂದ ಪ್ರತಿಯೊಬ್ಬರಿಗೂ ದಿನವೊಂದಕ್ಕೆ 382 ರೂ. ಕೂಲಿಯನ್ನು ನೀಡಲಾಗುತ್ತಿದೆ.  ಒಂದು ಕುಟುಂಬಕ್ಕೆ 125 ಮಾನವ ದಿನಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಎಲ್ಲರೂ ಈ ಯೋಜನೆಯಡಿ ಕೆಲಸವನ್ನು ಮಾಡಿ ಆರ್ಥಿಕವಾಗಿ ಸಬಲರಾಗಿ ಎಂದು ತಿಳಿಸಿದರು.  ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್‌ ಮೇಳ ಹಮ್ಮಿಕೊಂಡು ಅರ್ಹ ಗ್ರಾಮೀಣ ಕೂಲಿಕಾರರಿಗೆ ಜಾಬ್ ಕಾರ್ಡ ಗಳನ್ನು ನೀಡಿ ಕೂಲಿ ಕೆಲಸವನ್ನು ನೀಡಲಾಗುತ್ತಿದ್ದು ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ್ಘ ಆಜೀವಿಕ ಮಿಷನ್ ಯೋಜನೆಯಡಿ ಕೂಲಿಕಾರರಿಗೆ ನಿರಂತರವಾಗಿ ಕೂಲಿ ಕೆಲಸವನ್ನು ನೀಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾನ್ಯರು ಸೂಚಿಸಿದರು. 

ಬಳಿಕ ಸಹಾಯಕ ನಿರ್ದೇಶಕರು ರಾಮಪ್ಪ ರಕ್ಕಸಗಿ ರವರು ಮಾತನಾಡಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ???ಂಡ್ ಆಜೀವಿಕ ಮಿಷನ್ ಗ್ರಾಮೀಣ ಯೋಜನೆಯಡಿ ಕೈಗೊಳ್ಳಬಹುದಾದ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಿದರು.  ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಲ್ಲವ್ವ ಶೇರಿ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕ ಭೀಮಪ್ಪ ಗೊರನಾಳ, ತಾಂತ್ರಿಕ ಸಹಾಯಕಿ ಶಿಲ್ಪಾ ಕೊಪ್ಪದ,  ಗ್ರಾಪಂ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.