ಉದ್ಯಾನವನಗಳ ಅಭಿವೃದ್ಧಿಗೆ ನೆರವು ಒದಗಿಸುವ ಭರವಸೆ

ಲೋಕದರ್ಶನವರದಿ

ತಾಳಿಕೋಟೆ31;   ಈ ಹಿಂದೆ ಅರಣ್ಯ ಇಲಾಖೆ ಗಿಡ ನೆಡುವಾಗ ಜನರ ನಿರಾಸಕ್ತಿಯಿತ್ತು. ಈಗ ಜನತೆಯೇ ನಮಗೆ ಒತ್ತಡ ಹಾಕಿ ಗಿಡ ಕೊಡಿ ನೆಡುತ್ತೇವೆ ಎನ್ನುವಷ್ಟರ ಮಟ್ಟಿಗೆ  ವಾತಾವರಣ ಬದಲಾಗಿರುವುದು  ಜನರಲ್ಲಿ  ಹೆಚ್ಚಿದ ಪರಿಸರಪ್ರೇಮ ಹಾಗೂ ಜಾಗೃತಿಯನ್ನು ತೋರುತ್ತಿದೆ  ಎಂದು ಆಲಮಟ್ಟಿಯ ಕೆಬಿಜೆಎನ್ಎಲ್ನ  ಡಿಎಫ್ಓ ಪಿ.ಕೆ.ಪೈ ನುಡಿದರು. 

       ಅವರು ಪಟ್ಟಣದ ಹಸಿರು ಸಂಪದ ಬಳಗದ ವತಿಯಿಂದ ಶುಕ್ರವಾರರಂದು ಎಸ್.ಕೆ.ಉದ್ಯಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಹಸಿರು ಸಂಪದ ಬಳಗ ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿದ್ದು ಉದ್ಯಾನಗಳಲ್ಲಿ, ಅರಣ್ಯ ಇಲಾಖೆ, ಪುರಸಭೆ ಸಹಯೋಗದಲ್ಲಿ ವಿವಿಧೆಡೆ  ವೃಕ್ಷ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಮೆಚ್ಚುಗೆಯ ಮಾತನಾಡಿದ ಅವರು, ಜನತೆಯ ಸಹಭಾಗಿತ್ವವಿಲ್ಲದೆ ಯಾವ ಯೋಜನೆಗಳೂ  ಯಶಸ್ವಿಯಾಗವು ಎಂದರು. ಪಟ್ಟಣದಲ್ಲಿನ ಉದ್ಯಾನಗಳಿಗೆ ಜೀವ ತುಂಬಲು ಅಗತ್ಯದ ಯೋಜನೆ, ಹಾಗೂ ಅನುಷ್ಠಾನದ ಬಗ್ಗೆ ಬಳಗ ಮಾಡಿದ ಮನವಿಗೆ ಸ್ಪಂದಿಸಿ ಅವರು, ಈ ಬಗ್ಗೆ ಸ್ಥಳೀಯ ಪುರಸಭೆ, ಬಳಗದ ವತಿಯಿಂದ ಮನವಿ ಸಲ್ಲಿಸುವಂತೆ ತಿಳಿಸಿದರು. 

     ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್ಎಫ್ಓ ಮಹೇಶ ಪಾಟೀಲ ಅವರು, ಕೆಬಿಜೆಎನ್ಎಲ್ ನಿಂದ ಸಾಧ್ಯವಿರುವ ನೆರವು ನೀಡುವ ಭರವಸೆ ನೀಡಿದರು.

     ಪಟ್ಟಣದ ಎಸ್.ಕೆ.ಉದ್ಯಾನ, ಹಳೆ ಹುಡ್ಕೊದಲ್ಲಿನ ಉದ್ಯಾನ, ಸಜ್ಜನ ಲೇಔಟ್ನ ಉದ್ಯಾನ ಹಾಗೂ ಕುಂಬಾರ ಮನೆಯ ಬಳಿಯ ಉದ್ಯಾನಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ನೀಡಿದರು.

     ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾಚರ್ಿ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಕಸಾಪ ಅಧ್ಯಕ್ಷೆ ಸುಮಂಗಲಾ ಕೋಳೂರ, ಸಾಹಿತಿಗಳಾದ ಅಶೋಕ ಹಂಚಲಿ, ಶ್ರೀಕಾಂತ ಪತ್ತಾರ  ಮಾತನಾಡಿ, ಹಸಿರು ಸಂಪದ ಬಳಗದ ಕಾರ್ಯ ಚಟುವಟಿಕೆ ವಿವರಿಸಿ, ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಅಗತ್ಯದ ನೆರವು ಯಾಚಿಸಿದರು. 

     ಬಳಗದ ಸದಸ್ಯರಾದ ಬಿ.ಎ.ಶಿಂಧೆ, ಗುಂಡುರಾವ್ ಧನಪಾಲ, ಬಸವರಾಜ ಪಂಜಗಲ್ಲ, ಸಾಹೇಬಗೌಡ ಹೆಗರಡ್ಡಿ, ನಾಗಣ್ಣ ಚಿನಗುಡಿ, ಎಸ್.ಎಸ್.ಹಾದಿಮನಿ, ಎಂ,ಎಚ್.ಚೌದ್ರಿ, ವಿ.ಬಿ.ಗಣಾಚಾರಿ, ಆರ್.ಎಫ್ ಹಿರೇಮಠ, ಡಿ.ವಿ.ಬಡಿಗೇರ ಎ.ಎಸ್.ಮೂಲಿಮನಿ, ಶರಣು ಗಡೇದ, ಶಿವಶಂಕರ ಹಿರೇಮಠ, ಎಸ್.ಕೆ.ಹೂಗಾರ, ಅಶೋಕ ಕಟ್ಟಿಮನಿ ಇತರರಿದ್ದರು.