ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದರೆ, ಅದು ಕೂಡ ಅತ್ಯಾಚಾರ; ಮಧ್ಯಪ್ರದೇಶ ಹೈಕೋರ್ಟ್

ನವದೆಹಲಿ: ಇನ್ನು ಮುಂದೆ ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ಅವಳ ಜೊತೆ ದೈಹಿಕ ಸಂಬಂಧ ಹೊಂದಿ ನಂತರ

ತಿರಸ್ಕರಿಸಿದ್ದೆ ಆದಲ್ಲಿ ಅದು ಕೂಡ ಅತ್ಯಾಚಾರವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಸುಶೀಲ್ ಕುಮಾರ್ ಪಾಲೋ ಅವರು ಉತ್ತರಪ್ರದೇಶ vs ನೌಶಾದ್ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಮಹಿಳೆ

ದೇಹವು ವ್ಯಕ್ತಿಯ ಆಟದ ವಸ್ತುವಲ್ಲ ಆದ್ದರಿಂದ ವ್ಯಕ್ತಿಯು ತನ್ನ ಬಯಕೆಗಳನ್ನು ತೀರಿಸಲು ಅವಳನ್ನು ಮೂರ್ಖರನ್ನಾಗಿಸುವ

ಮೂಲಕ ತನಗೆ ಇಚ್ಛೆಬಂದ ಹಾಗೆ ಸೆಕ್ಸ್ ಗೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿರುವುದನ್ನು ಅವರು ಪ್ರಸ್ತಾಪಿಸಿದರು. 

2016 ರಲ್ಲಿ ಇಬ್ಬರು ಜೋಡಿಗಳು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ನಲ್ಲಿ ಪರಿಚಿತರಾಗಿ ಪ್ರೀತಿಸುತ್ತಿದ್ದರು. ನಂತರ

ಇಬ್ಬರಿಗೂ ನಿಶ್ಚಿತಾರ್ಥವಾಯಿತು, ಇದಾದ ನಂತರ ಇಬ್ಬರೂ ಕೂಡ ಗಂಡ ಹೆಂಡತಿಯಂತೆ ಜೀವನ ಸಾಗಿಸತೊಡಗಿದರು.ಇದೆ

ವೇಳೆ ಆ ವ್ಯಕ್ತಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾನೆ. ಆದರೆ ಆಕೆ ಪಾಸ್ ಮಾಡಲು ವಿಫಲಳಾಗಿದ್ದಾಳೆ. ಆಗ  ಹುಡುಗನ ಕುಟುಂಬ

ಮಹಿಳೆಗೆ 10 ಲಕ್ಷ ರೂಪಾಯಿ ಮತ್ತು ಕಾರ್ ನ್ನು ವರದಕ್ಷಿಣೆಯಾಗಿ ನೀಡಲು ಕೇಳಿದ್ದಾರೆ ಇದಾದ ನಂತರ ಆ ಮಹಿಳೆ ಪೊಲೀಸರಲ್ಲಿ

ದೂರು ದಾಖಲಿಸಿದ್ದಾಳೆ. ಆದರೆ ಆರೋಪಿಯು ಈಗ ತನ್ನ ಮೇಲೆ ಮಹಿಳೆ ನೀಡಿರುವ ದೂರನ್ನು ಪ್ರಶ್ನಿಸಿ ಹೈಕೋರ್ಟ್ ಗೆ ದೂರು

ಸಲ್ಲಿಸಿದ್ದಾನೆ. ಆದರೆ ಈಗ ಇದನ್ನು ಈಗ ಅತ್ಯಾಚಾರ ಪ್ರಕರಣ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ.